ಬಳ್ಳಾರಿಯಲ್ಲಿ ಅರ್ಧಕ್ಕೇ ನಿಂತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ, 15 ವರ್ಷ ಕಳೆದ್ರೂ ಈಡೇರಿಲ್ಲ ಬಳ್ಳಾರಿ ಜನರ ಬೇಡಿಕೆ

ಬಳ್ಳಾರಿಯಲ್ಲಿ ಅರ್ಧಕ್ಕೇ ನಿಂತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ, 15 ವರ್ಷ ಕಳೆದ್ರೂ ಈಡೇರಿಲ್ಲ ಬಳ್ಳಾರಿ ಜನರ ಬೇಡಿಕೆ
ಅರ್ಧಕ್ಕೆ ನಿಂತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ

ಅರೆಬರೆ ಕಾಮಗಾರಿ ನಡೆದಿರೋ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಇವತ್ತಿಗೂ ಬಳ್ಳಾರಿ ಜನರನ್ನ ಚಿಕಿತ್ಸೆಗಾಗಿ ಪರ ಊರಿಗೆ ಅಲೆಯುವಂತೆ ಮಾಡಿದೆ. 2008ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಆಸ್ಪತ್ರೆಯ ಕಟ್ಟಡದ ಕಾಮಗಾರಿ ಆರಂಭಿಸಿತ್ತು. ಆದ್ರೆ ಆ ಬಳಿಕ ಮೂರು ಸರ್ಕಾರಗಳು ಬದಲಾದ್ರೂ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೂ ಕಟ್ಟಡ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.

TV9kannada Web Team

| Edited By: Ayesha Banu

Apr 02, 2022 | 4:47 PM


ಬಳ್ಳಾರಿ: ಅದು ಒಂದಲ್ಲ, ಎರಡಲ್ಲ ಹೈದಿನೈದು ವರ್ಷಗಳ ಹಿಂದಿನ ಕನಸು. ಸರ್ಕಾರದ ಮೇಲೆ ಸರ್ಕಾರ ಬದಲಾದ್ರೂ ಜನರ ಸ್ಥಿತಿ ಮಾತ್ರ ಹಾಗೇ ಇದೆ. ತುರ್ತು ಚಿಕಿತ್ಸೆಗೂ ಪರ ಊರುಗಳಿಗೆ ಅಲೆದಾಡೋದು ಅನಿವಾರ್ಯವಾಗಿಯೇ ಉಳಿದಿದೆ. ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ(Super Speciality Hospital) ಕಟ್ಟಡ ಪಾಳು ಬಿದ್ದಿದೆ. ವೈರಿಂಗ್ ಕೇಬಲ್ಗಳು ಕಿತ್ತು ನೇತಾಡ್ತಿದ್ರೆ, 15 ವರ್ಷಗಳ ಜನರ ಬೇಡಿಕೆ ಇನ್ನೂ ಬೇಡಿಕೆಯಾಗೇ ಉಳಿದಿದೆ. ರೋಗಿಗಳು ದಾರಿಯಲ್ಲೇ ಸಾಯೋ ಸ್ಥಿತಿ ಇದ್ರೂ ಪರಿಹಾರ ಮರೀಚಿಕೆಯಾಗಿದೆ.

ಅರೆಬರೆ ಕಾಮಗಾರಿ ನಡೆದಿರೋ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಇವತ್ತಿಗೂ ಬಳ್ಳಾರಿ ಜನರನ್ನ ಚಿಕಿತ್ಸೆಗಾಗಿ ಪರ ಊರಿಗೆ ಅಲೆಯುವಂತೆ ಮಾಡಿದೆ. 2008ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಆಸ್ಪತ್ರೆಯ ಕಟ್ಟಡದ ಕಾಮಗಾರಿ ಆರಂಭಿಸಿತ್ತು. ಆದ್ರೆ ಆ ಬಳಿಕ ಮೂರು ಸರ್ಕಾರಗಳು ಬದಲಾದ್ರೂ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೂ ಕಟ್ಟಡ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ತುರ್ತು ಚಿಕಿತ್ಸೆಗಾಗಿ ಜನರು ಬೆಂಗಳೂರಿಗೆ ತೆರಳೋದು ತಪ್ಪಿಲ್ಲ. ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾದ್ರೆ ಕೇವಲ ಬಳ್ಳಾರಿ ಮಾತ್ರವಲ್ಲದೆ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಗಡಿ ಭಾಗದ ಜನರಿಗೂ ಅನುಕೂಲವಾಗುತ್ತೆ. ಆದ್ರೆ ಕಟ್ಟಡ ಕಾಮಗಾರಿ ಮುಗಿಯಲು ಇನ್ನೂ 50 ಕೋಟಿ ರೂಪಾಯಿಯ ಅವಶ್ಯಕತೆ ಇದೆ. ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದ ಕಾರಣ ಕಾಮಗಾರಿ ಆಮೆಗತಿಯಲ್ಲಿ ಸಾಗ್ತಿದೆ. ಹೀಗಾಗಿ ಹೆಚ್ಚುವರಿ ಅನುದಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ಸಿಎಂ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಇನ್ನು ಈ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕಟ್ಟಡದ ಕಾಮಗಾರಿ ಮುಕ್ತಾಯವಾದ್ರೆ ಸಾವಿರಾರು ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯಲಿದೆ. 450 ಬೆಡ್ಗಳ ಸುಸಜ್ಜಿತ ಈ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ, ಹೃದಯ ರೋಗ ಸೇರಿ ಎಲ್ಲ ವಿಭಾಗಗಳಲ್ಲೂ ಚಿಕಿತ್ಸೆ ದೊರೆಯಲಿದೆ. ಹೀಗಾಗಿ ಸರ್ಕಾರ ಇನ್ನಾದ್ರೂ ಈ ಬಗ್ಗೆ ಸ್ಪಂದಿಸುತ್ತಾ..? ಜನರ ಬೇಡಿಕೆ ಈಡೇರಿಸುತ್ತಾ ಅನ್ನೋ ಪ್ರಶ್ನೆಗೆ ಆಡಳಿತವರ್ಗವೇ ಉತ್ತರಿಸಬೇಕು.

ವರದಿ: ವೀರಪ್ಪ ದಾನಿ, ಟಿವಿ9 ಬಳ್ಳಾರಿ

BLY_Super Speciality Hospital

ಅರ್ಧಕ್ಕೆ ನಿಂತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ

ಇದನ್ನೂ ಓದಿ: ಸದಾ ಕ್ರಿಯಾಶೀಲವಾಗಿರುವ ಮನಸ್ಸಿನಲ್ಲಿ ಅನುಮಾನಗಳು ಹುಟ್ಟಿಕೊಳ್ಳುವುದಿಲ್ಲ: ಡಾ ಸೌಜನ್ಯ ವಶಿಷ್ಠ

K Annamalai: ಮಾಜಿ ಐಪಿಎಸ್, ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ, ಅವರಿಗಿದ್ದ ಭೀತಿ ಏನು?


Follow us on

Related Stories

Most Read Stories

Click on your DTH Provider to Add TV9 Kannada