ಉಚಿತ ಯೋಜನೆಗಳಿಂದ ಸರ್ಕಾರದ ಬೊಕ್ಕಸ ಖಾಲಿ ಆಗ್ತಿದೆಯಾ? ಸಾಕ್ಷಾತ್ ಹಂಪಿ ಕನ್ನಡ ವಿವಿ ಹೇಳುವುದೇನು?
ಒಟ್ನಲ್ಲಿ ಸರ್ಕಾರದ ಉಚಿತ ಯೋಜನೆಗಳಿಂದ ಸರ್ಕಾರದ ಬೊಕ್ಕಸ ಖಾಲಿ ಆಗ್ತಿದೆ. ಹಂಪಿಯ ವಿವಿಗೆ ಸರ್ಕಾರದಿಂದ ಬರಬೇಕಾದ ಅನುದಾನದ ಹಣ ಬರ್ತಿಲ್ಲ. ಇನ್ನಾದ್ರೂ ಸರ್ಕಾರ ಎಚ್ಚೆತ್ತು ಕರೆಂಟ್ ಬಿಲ್ ಪಾವತಿ ಮಾಡುವ ಕಾರ್ಯಕ್ಕೆ ಮುಂದಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಸರ್ಕಾರದ ಸಾಲು ಸಾಲು ಗ್ಯಾರೆಂಟಿಗಳ ಎಫೆಕ್ಟ್ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗೂ ವ್ಯಾಪಿಸಿದೆ. ಕನ್ನಡ ನಾಡು-ನುಡಿ ಅಭಿವೃದ್ದಿಗೆ ಸ್ಥಾಪನೆ ಆಗಿರೋ ಅದೊಂದು ವಿವಿಗೆ ಸಂಕಷ್ಟ ಮೇಲೆ ಸಂಕಷ್ಟ ಎದುರಾಗ್ತಿದ್ರೆ, ವಿದ್ಯುತ್ ಇಲಾಖೆ ರಿಜೆಕ್ಟ್ ಮಾಡಿರುವ ಆ ಒಂದು ಲೆಟರ್ ವಿವಿಯ ಆಡಳಿತ ಮಂಡಳಿಗೂ ಶಾಕ್ ನೀಡಿದೆ. ಮತ್ತೊಂದೆಡೆ ಸರ್ಕಾರದ ನಡೆಗೆ ಈ ವಿವಿಗೆ ಕತ್ತಲೆ ಆವರಿಸುವ ಚಿಂತೆ ಎದುರಾಗಿದೆ. ಅಷ್ಟಕ್ಕೂ ಏನಿದು ಲೆಟರ್ ಕಥೆ ಅಂತೀರಾ ಈ ಸ್ಟೋರಿ ನೋಡಿ.
ಹೀಗೆ ದೃಶ್ಯದಲ್ಲಿ ಕಾಣ್ತಿರೋ ಕಲರ್ ಫುಲ್ ಕಟ್ಟಡ… ಇದ್ಯಾವುದೋ ಐತಿಹಾಸಿಕ ಸ್ಮಾರಕ ಅಲ್ಲ ಬದಲಾಗಿ ವಿಜಯನಗರದ ಹಂಪಿಯ ಕನ್ನಡ ವಿಶ್ವವಿದ್ಯಾಲಯ. ಕನ್ನಡ ಅಭಿವೃದ್ಧಿಗಾಗಿ ಹುಟ್ಟಿದ ವಿವಿಗೆ ಆರ್ಥಿಕ ಸಂಕಷ್ಟ ಎದುರಾಗಿ ಬಿಟ್ಟಿದೆ. ಜೆಸ್ಕಾಂ ಅಧಿಕಾರಿಗಳು ನೀಡಿದ ಆ ಒಂದು ನೋಟಿಸ್ ಹಂಪಿ ವಿವಿ ಆಡಳಿತ ಮಂಡಳಿಯನ್ನೆ ಚಿಂತೆಗೇಡು ಮಾಡಿದೆ. ಅಂದಗಾಗೇ ಕನ್ನಡ ವಿವಿಗೆ ಕೊರೊನಾ ಕಾಲದಿಂದಲೂ ಅನುದಾನವೂ ಬರ್ತಿಲ್ಲ. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ವಿವಿಯ ಕರೆಂಟ್ ಬಿಲ್ಲ ಬಾಕಿ ಉಳಿಸಿಕೊಂಡಿದೆ.
ಇನ್ನು ವಿವಿ ಮಂಡಳಿಯು ಜೆಸ್ಕಾಂಗೆ ಭರಿಸಬೇಕಾದ 80 ಲಕ್ಷ ರೂಪಾಯಿಗೂ ಅಧಿಕ ಬಿಲ್ ಪಾವತಿಸಿಲ್ಲ. ಹೀಗಾಗಿ ವಿವಿಗೆ ಜೆಸ್ಕಾಂ ನೋಟಿಸ್ ಮೇಲೆ ನೋಟಿಸ್ ಕೊಡ್ತಿದೆ. ವಿದ್ಯುತ್ ಬಿಲ್ ಪಾವತಿಸಿ ಇಲ್ಲದಿದ್ರೆ ವಿವಿಗೆ ಪೂರೈಕೆ ಆಗುವ ವಿದ್ಯುತ್ ಸಂಪರ್ಕ ನಿಲ್ಲಿಸುತ್ತೇವೆ ಅನ್ನೋ ಎಚ್ಚರಿಕೆ ವಿವಿಯ ಆಡಳಿತ ಮಂಡಳಿಗೆ ದಿಗಿಲು ಬಡಿಸಿದೆ.
ಇತ್ತ ಸರ್ಕಾರ ಅನುದಾನವೂ ಸಿಕ್ತಾ ಇಲ್ಲ. ಕರೆಂಟ್ ಬಿಲ್ ಭರಿಸಲಾಗಿದೆ ಒದ್ದಾಡುತ್ತಿದೆ. ಜೆಸ್ಕಾಂಗೆ ವಿದ್ಯುತ್ ಬಿಲ್ ವಿನಾಯಿತಿ ಕೋರಿ ಕುಲಪತಿ ಡಾ. ಪರಮಶಿವಮೂರ್ತಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದ್ರೆ ಬಿಲ್ ಮನ್ನಾ ಕುರಿತು ಯಾವ್ದೆ ರೆಸ್ಪಾನ್ಸ್ ಬಂದಿಲ್ಲ. ಬದಲಾಗಿ ವಿವಿಯ ಬರೆದ ಲೇಟರ್ ಅನ್ನೇ ಸರ್ಕಾರಕ್ಕೆ ಜೆಸ್ಕಾಂ ಇಲಾಖೆಯು ಶಿಫಾರಸು ಮಾಡಿದೆ. ವಿದ್ಯುತ್ ಮನ್ನಾ ಮಾಡಲು ಸಾಧ್ಯವೇ ಇಲ್ಲ ಅಂತ ಜೆಸ್ಕಾಂ ಅಧಿಕಾರಿಗಳು ಕನ್ನಡ ವಿವಿಯ ಕುಲಪತಿಗೆ ಲೆಟರ್ ಕಳಿಸಿದ್ದಾರೆ. ಇದಷ್ಟೇ ಅಲ್ಲದೆ ವಿವಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಜೆಸ್ಕಾಂ ಎಚ್ಚರಿಕೆ ನೀಡಿದೆ. ವಿವಿಗೆ ಸರಿಯಾಗಿ ಅನುದಾನ ಬರ್ತಿಲ್ಲ. ಆರ್ಥಿಕ ಸಂಕಷ್ಟದಲ್ಲಿದೆ. ಇನ್ನಾದ್ರೂ ಸರ್ಕಾರ ವಿವಿಯ ಅಭಿವೃದ್ಧಿ ಗಮನ ಹರಿಸ್ಬೇಕು ಅನುದಾನ ನೀಡ್ಬೇಕು ಅಂತಾ ಸರ್ಕಾರಕ್ಕೆ ವಿವಿಯ ಕುಲಪತಿ ಮನವಿ ಮಾಡ್ತಿದ್ದಾರೆ.
ವಿದ್ಯುತ್ ಬಿಲ್ ವಿನಾಯ್ತಿ ಕೋರಿ CM , DCM, ಪವರ್ ಮಿನಿಸ್ಟರ್ ಸೇರದಂತೆ ಹಲವು ಸಚಿವರಿಗೆ ಆಡಳಿತ ಮಂಡಳಿ ಲೆಟರ್ ಬರೆದಿದೆ. ಆದ್ರೆ ಜೆಸ್ಕಾಂ ವಿವಿಯ ಮನವಿಯನ್ನ ತಿರಸ್ಕರಿಸಿರುವುದು ವಿವಿ ಆಡಳಿತ ಮಂಡಳಿಗೆ ಬರ ಸಿಡಿಲು ಬಡಿದಂತಾಗಿದೆ. ಇತ್ತ 2019 ರಿಂದ ಈವರೆಗೂ ಕನ್ನಡ ವಿವಿಗೆ 1.25 ಕೋಟಿ ಕರೆಂಟ್ ಬಿಲ್ ಬಂದಿದೆ. ಈ ಪೈಕಿ 40 ಲಕ್ಷ ರೂ. ಬಿಲ್ ಮಾತ್ರ ಪಾವತಿಸಲಾಗಿದೆ.
ಇದನ್ನೂ ಓದಿ: ಬಿಳಿ ಸ್ವಿಫ್ಟ್ ಕಾರಿನಲ್ಲಿ ಬಂದು, ಸಮ್ಮೋಹನಗೊಳಿಸಿ ಗೂಗಲ್ ಪೇ ಮೂಲಕ ಹಣ ದೋಚುತ್ತಿದ್ದಾರೆ ಸ್ವಾಮೀಜಿ ವೇಷಧಾರಿಗಳು!
ಇನ್ನುಳಿದ 82 ಲಕ್ಷ ಕರೆಂಟ್ ಬಿಲ್ ಪಾವತಿಗೆ ಹಾದಿ ಏನು ಅಂತಾ ಹಂಪಿ ವಿವಿ ಹೆಣಗಾಡುವಂತಾಗಿದೆ. ಈಗಾಗಲೇ ಎರಡು ಬಾರಿ ವಿವಿಯ ವಿದ್ಯುತ್ ಸಂಪರ್ಕ ಜೆಸ್ಕಾಂ ಕಡಿತ ಮಾಡಿತ್ತು. ಕುಲಪತಿಗಳ ಮನವಿಗೆ ಕೆಲ ದಿನಗಳ ಕಾಲ ಜೆಸ್ಕಾಂ ಸಮಯಾವಕಾಶ ನೀಡಿದೆ. ಇಂದು ಜ 10 ರಂದು ಹಂಪಿ ವಿಶ್ವವಿದ್ಯಾಲಯದ ಘಟ್ಟಿಕೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಆದ್ರೆ ಕರೆಂಟ್ ಬಿಲ್ ಕ್ಲಿಯರ್ ಆಗುತ್ತಾ ಅನ್ನೋ ಟೆನ್ಷನ್ ಕುಲಪತಿ ಪರಮಶಿವಮೂರ್ತಿ ಅವರದ್ದಾಗಿದೆ. 15 ದಿನಗಳ ಹಿಂದಷ್ಟೇ ವಿವಿಯ ವಿದ್ಯುತ್ ಸಂಪರ್ಕ ಬಂದ್ ಮಾಡಲಾಗಿತ್ತು. ಮತ್ತೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ನೋಟಿಸ್ ಬಂದಿದೆ. ಸರ್ಕಾರ ಬೇಗ ಅನುದಾನ ಬಿಡುಗಡೆ ಮಾಡಬೇಕು ಅಂತಾ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮನವಿ ಮಾಡಿದ್ದಾರೆ.
ಒಟ್ನಲ್ಲಿ ಸರ್ಕಾರದ ಉಚಿತ ಯೋಜನೆಗಳಿಂದ ಸರ್ಕಾರದ ಬೊಕ್ಕಸ ಖಾಲಿ ಆಗ್ತಿದೆ. ಹಂಪಿಯ ವಿವಿಗೆ ಸರ್ಕಾರದಿಂದ ಬರಬೇಕಾದ ಅನುದಾನದ ಹಣ ಬರ್ತಿಲ್ಲ. ಇನ್ನಾದ್ರೂ ಸರ್ಕಾರ ಎಚ್ಚೆತ್ತು ಕರೆಂಟ್ ಬಿಲ್ ಪಾವತಿ ಮಾಡುವ ಕಾರ್ಯಕ್ಕೆ ಮುಂದಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ