ಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ; ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವಿರುದ್ಧ ಆರೋಪ
ತುಂಗಭದ್ರಾ ನೀರಾವರಿ ಇಲಾಖೆಗೆ ಸಂಬಂಧಿಸಿದ 0.30 ಎಕರೆ ಸ್ಥಳ ಒತ್ತುವರಿ ಮಾಡಿದ್ದಾರೆ. ಆನಂದ ಸಿಂಗ್ ಆಪ್ತರಾದ ಸುರಕ್ಷಾ ಎಂಟರ್ ಪ್ರೈಸಸ್ನವರು ಲೇಔಟ್ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬಳ್ಳಾರಿ: ಕಾಲುವೆ ಒತ್ತುವರಿ ಮಾಡಿಕೊಂಡು ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಮನೆ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಲುವೆಯ ತೂಬು ಮುಚ್ಚಿ ಜಾಗ ಒತ್ತುವರಿ ಮಾಡಿಕೊಂಡಿದ್ದು, ಮನೆ ಮತ್ತು ಲೇಔಟ್ ನಿರ್ಮಾಣ ಮಾಡಿದ್ದಾರೆ ಎಂದು ಅಬ್ದುಲ್ ಖದೀರ್ ಆರೋಪಿಸಿದ್ದಾರೆ. ಈ ಸಂಬಂಧ ವಿಜಯನಗರ ಜಿಲ್ಲಾಧಿಕಾರಿ ಕಚೇರಿಗೆ ಅಬ್ದುಲ್ ಖದೀರ್ ದೂರು ನೀಡಿದ್ದಾರೆ.
ರಾಯ ಕಾಲುವೆಯ ( ಎಸ್ಕೇಪ್ ) ಕಿರು ಕಾಲುವೆ ಸ್ಥಳ ಒತ್ತುವರಿ ಮಾಡಿ ಸಚಿವ ಆನಂದ ಸಿಂಗ್ ಅವರ ಮನೆ ಮತ್ತು ಮನೆ ಹಿಂದಿನ ಲೇಔಟ್ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತುಂಗಭದ್ರಾ ನೀರಾವರಿ ಇಲಾಖೆಗೆ ಸಂಬಂಧಿಸಿದ 0.30 ಎಕರೆ ಸ್ಥಳ ಒತ್ತುವರಿ ಮಾಡಿದ್ದಾರೆ. ಆನಂದ ಸಿಂಗ್ ಆಪ್ತರಾದ ಸುರಕ್ಷಾ ಎಂಟರ್ ಪ್ರೈಸಸ್ನವರು ಲೇಔಟ್ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಹೊಸಪೇಟೆಯ ಸ್ಟೇಷನ್ ರಸ್ತೆಯಲ್ಲಿರುವ 25 ಎಕರೆ ಸ್ಥಳವನ್ನು ಆನಂದ ಸಿಂಗ್ ತಮ್ಮ ಕುಟುಂಬದ ಸದಸ್ಯರ ಹೆಸರಲ್ಲಿ 2007-08ರಲ್ಲಿ ಖರೀದಿ ಮಾಡಿ, ನಂತರ ಎರಡು ಎಕರೆ ಪ್ರದೇಶದಲ್ಲಿ 2019 ಬೃಹತ್ ಬಂಗಲೇ ನಿರ್ಮಾಣ ಮಾಡಿದ್ದರು. ಉಳಿದ ಸ್ಥಳದಲ್ಲಿ ಅತ್ಯಾಧುನಿಕ ಲೇಔಟ್ ನಿರ್ಮಾಣ ಮಾಡಲಾಗಿದೆ ಎಂದು ಅಬ್ದುಲ್ ಖದೀರ್ ಆರೋಪಿಸಿದ್ದಾರೆ.
ಕಾಲುವೆ ಹರಿವು ಬದಲಿಸಿ ಹಾಗೂ ಒಳಚರಂಡಿ ನಿರ್ಮಾಣಕ್ಕೆ ನಿಗದಿಯಾಗಿದ್ದ ಸ್ಥಳ ಬದಲಿಸಿ ಲೇಔಟ್ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಆನಂದ ಸಿಂಗ್ ಈ ಆರೋಪವನ್ನು ನಿರಾಕರಿಸುತ್ತಿದ್ದಾರೆ.
ಇದನ್ನೂ ಓದಿ: ಸಾ.ರಾ.ಮಹೇಶ್ ವಿರುದ್ಧ ಭೂ ಒತ್ತುವರಿ ಆರೋಪ; ಕಳಂಕಿತರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ: ಹೆಚ್.ವಿಶ್ವನಾಥ್ ಗಂಭೀರ ಆರೋಪ
ಆಸ್ಪತ್ರೆ ಕಾಂಪೌಂಡ್ ಒತ್ತುವರಿ ತೆರವಿಗೆ ಹೋಗಿದ್ದ ಪಿಡಿಓ ಮೇಲೆ ಹಲ್ಲೆ; ಬಾಲಚಂದ್ರ ಜಾರಕಿಹೊಳಿ ಆಪ್ತನಿಂದ ಧಮ್ಕಿ
Published On - 2:02 pm, Fri, 22 October 21