ಈ ಜಾತ್ರೆ ಬಂದ್ರೆ ಇಡೀ ಊರಿಗೆ ಊರೆ ಖಾಲಿಯಾಗಿರುತ್ತೇ!
ಬಳ್ಳಾರಿ: ಅದೊಂದು ತುಂಬಾ ವಿಶೇಷವಾದ ಜಾತ್ರೆ. ದೇವಿಯನ್ನ ಆರಾಧನೆ ಮಾಡುವ ಇಡೀ ಗ್ರಾಮ ಜಾತ್ರೆಯ ಸಂಭ್ರಮದಲ್ಲಿ ಮುಳುಗಿರುತ್ತೆ. ಊರಿನ ಜನರು ಮಾತ್ರವಲ್ಲದೆ ನೆಂಟರು, ಬೀಗರು ಕೂಡ ಜಾತ್ರೆಯಲ್ಲಿ ಹಾಜರಾಗಿರ್ತಾರೆ. ಇಡೀ ಗ್ರಾಮ ನಿಶ್ಯಬ್ಧವಾಗಿರುತ್ತೆ, ಹಳ್ಳಿಯ ಮನೆಗಳಿಗೆಲ್ಲಾ ಬೀಗ ಹಾಕಲಾಗಿರುತ್ತೆ. ಅಂದಹಾಗೆ ಇಡೀ ಊರಿಗೆ ಊರೇ ಇಷ್ಟು ಸೈಲೆಂಟ್ ಆಗಲು ಕಾರಣ ಜಾತ್ರೆಯ ಸಂಭ್ರಮಾಚರಣೆ. ಊರಿನ ಜನರೆಲ್ಲಾ ಗಾಡಿಯಲ್ಲಿ ಗುಂಪು ಗುಂಪಾಗಿ ದೇವಿಯ ಆರಾಧನೆಗೆ ಹೊರಡುತ್ತಾರೆ. ಗಣಿನಾಡು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಚೋರನೂರು ಗ್ರಾಮದ ಜನರಿಗೆಲ್ಲಾ ಲಕ್ಕಮ್ಮ […]
ಬಳ್ಳಾರಿ: ಅದೊಂದು ತುಂಬಾ ವಿಶೇಷವಾದ ಜಾತ್ರೆ. ದೇವಿಯನ್ನ ಆರಾಧನೆ ಮಾಡುವ ಇಡೀ ಗ್ರಾಮ ಜಾತ್ರೆಯ ಸಂಭ್ರಮದಲ್ಲಿ ಮುಳುಗಿರುತ್ತೆ. ಊರಿನ ಜನರು ಮಾತ್ರವಲ್ಲದೆ ನೆಂಟರು, ಬೀಗರು ಕೂಡ ಜಾತ್ರೆಯಲ್ಲಿ ಹಾಜರಾಗಿರ್ತಾರೆ.
ಇಡೀ ಗ್ರಾಮ ನಿಶ್ಯಬ್ಧವಾಗಿರುತ್ತೆ, ಹಳ್ಳಿಯ ಮನೆಗಳಿಗೆಲ್ಲಾ ಬೀಗ ಹಾಕಲಾಗಿರುತ್ತೆ. ಅಂದಹಾಗೆ ಇಡೀ ಊರಿಗೆ ಊರೇ ಇಷ್ಟು ಸೈಲೆಂಟ್ ಆಗಲು ಕಾರಣ ಜಾತ್ರೆಯ ಸಂಭ್ರಮಾಚರಣೆ. ಊರಿನ ಜನರೆಲ್ಲಾ ಗಾಡಿಯಲ್ಲಿ ಗುಂಪು ಗುಂಪಾಗಿ ದೇವಿಯ ಆರಾಧನೆಗೆ ಹೊರಡುತ್ತಾರೆ. ಗಣಿನಾಡು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಚೋರನೂರು ಗ್ರಾಮದ ಜನರಿಗೆಲ್ಲಾ ಲಕ್ಕಮ್ಮ ದೇವಿ ಜಾತ್ರೆ ಅಂದ್ರೆ ತುಂಬಾನೆ ಸ್ಪೆಷಲ್.
ಜಾತ್ರೆಯ ದಿನ ಊರಲ್ಲಿ ಯಾರೂ ಇರಲ್ಲ! ಅಂದಹಾಗೆ ಈ ಜಾತ್ರೆಯ ವಿಶೇಷತೆ ಏನೆಂದ್ರೆ ಜಾತ್ರೆ ನಡೆವ ದಿನ ಗ್ರಾಮದಲ್ಲಿ ಯಾರೂ ಇರೋದಿಲ್ಲ. ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು, ದವಸ ಧಾನ್ಯ ತೆಗೆದುಕೊಂಡು ಗ್ರಾಮದಿಂದ 3 ಕಿಲೋಮೀಟರ್ ದೂರದಲ್ಲಿ ಸಣ್ಣ ಟೆಂಟ್ ಹಾಕಿಕೊಳ್ಳುತ್ತಾರೆ. ಜಾತ್ರೆಗೆ ಬಂದ ನೆಂಟರು, ಬೀಗರು ಕೂಡ ಇಲ್ಲೇ ಉಳಿಯುತ್ತಾರೆ. ಊರ ಹೊರಗೆ ಅಡುಗೆ ಮಾಡಿ ಹಬ್ಬದೂಟ ಸವಿಯುತ್ತಾರೆ. ಸಿಹಿಗಿಂತ ಹೆಚ್ಚಾಗಿ ರೊಟ್ಟಿ ಊಟಕ್ಕೆ ಮಹತ್ವ ಜಾಸ್ತಿ. ಎಳ್ಳು ಹಚ್ಚಿದ ಸಜ್ಜೆ ಹಾಗೂ ಜೋಳದ ರೊಟ್ಟಿ ಸೇರಿ ಹತ್ತಾರು ಬಗೆಯ ಕಾಳು, ಸೊಪ್ಪು, ಎಣ್ಣೆ ಬದನೆಯನ್ನ ಸಂಭ್ರಮದಿಂದ ಸೇವಿಸುತ್ತಾರೆ.
ಇನ್ನು ಗ್ರಾಮದಲ್ಲಿ ಶತಮಾನಗಳಿಂದಲೂ ಗುಳೇದ ಲಕ್ಕಮ್ಮ ದೇವಿಯ ಜಾತ್ರೆ ಆಚರಿಸಿಕೊಂಡು ಬರಲಾಗ್ತಿದೆ. ಗ್ರಾಮದ ಆರಾಧ್ಯ ದೈವ ಲಕ್ಕಮ್ಮ ದೇವಿಯ ಮದುವೆ ನೆರವೇರಿಸಿದ ನಂತರ ಸಂಭ್ರಮದಿಂದ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗ್ತಾರೆ. ಮತ್ತೊಂದ್ಕಡೆ ಸೌಹರ್ದತೆ ಹೆಸರಾಗಿರುವ ಜಾತ್ರೆಯಲ್ಲಿ ಸಹಭೋಜನವೇ ತುಂಬಾ ವಿಶೇಷವಾದದ್ದು.
ಜಾತ್ರೆಗೆ ತೆರಳುವವರು ಎತ್ತಿನ ಬಂಡಿ, ರೀಕ್ಷಾ, ಟ್ಯಾಕ್ಟರ್ಗಳಲ್ಲಿ ಸಂಚರಿಸುತ್ತಾರೆ. ಬಹುಪಾಲು ಮಂದಿ ಕಾಲ್ನಡಿಗೆ ಮೂಲಕ 3 ಕಿಲೋ ಮೀಟರ್ ತೆರಳುತ್ತಾರೆ. ಜಾತಿ, ಧರ್ಮದ ಬೇಧ-ಭಾವ ಇಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಜಾತ್ರೆ ಆಚರಿಸುತ್ತಾರೆ. ಹೀಗಾಗಿಯೇ ಗುಳೇದ ಲಕ್ಕಮ್ಮ ದೇವಿಯ ಜಾತ್ರೆ ಸೌಹಾರ್ಧತೆಯ ಪ್ರತೀಕವಾಗಿದೆ.
Published On - 8:02 pm, Fri, 17 January 20