AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಒಂದೇ ವರ್ಷಕ್ಕೆ ಹಳ್ಳಹಿಡಿದ ‘ಸ್ಮಾರ್ಟ್ ಬಸ್ ನಿಲ್ದಾಣ’; ಮಹಿಳೆಯರ ಸುರಕ್ಷತೆಗೆ ನಿರ್ಮಿಸಿದ್ದ ನಿಲ್ದಾಣ ಅಧ್ವಾನ

ಮಹಿಳೆಯರ ಸುರಕ್ಷತೆಗಾಗಿ ಕೆಲ ಸ್ವಯಂ ಸೇವಾಸಂಸ್ಥೆಗಳ ಜೊತೆ ಸೇರಿ ರಾಜಧಾನಿಯ ಹೃದಯಭಾಗ ನೃಪತುಂಗ ರಸ್ತೆಯಲ್ಲಿ ಬರೋಬ್ಬರಿ 1 ಕೋಟಿ ರೂ. ಖರ್ಚು ಮಾಡಿ ಸ್ಮಾರ್ಟ್ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ನಿರ್ವಹಣೆಯಿಲ್ಲದೇ ಇಡೀ ನಿಲ್ದಾಣ ಅವ್ಯವಸ್ಥೆಯ ಆಗರವಾಗಿ ಬದಲಾಗಿದೆ.

ಬೆಂಗಳೂರು: ಒಂದೇ ವರ್ಷಕ್ಕೆ ಹಳ್ಳಹಿಡಿದ 'ಸ್ಮಾರ್ಟ್ ಬಸ್ ನಿಲ್ದಾಣ'; ಮಹಿಳೆಯರ ಸುರಕ್ಷತೆಗೆ ನಿರ್ಮಿಸಿದ್ದ ನಿಲ್ದಾಣ ಅಧ್ವಾನ
ಒಂದೇ ವರ್ಷಕ್ಕೆ ಹಳ್ಳಹಿಡಿದ 'ಸ್ಮಾರ್ಟ್ ಬಸ್ ನಿಲ್ದಾಣ'
ಶಾಂತಮೂರ್ತಿ
ಶಾಂತಮೂರ್ತಿ | Edited By: |

Updated on:Oct 10, 2025 | 9:57 AM

Share

ಬೆಂಗಳೂರು, ಅಕ್ಟೋಬರ್ 10: ಬೆಂಗಳೂರನ್ನು (Bengaluru) ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಹೊರಟಿದ್ದ ಸರ್ಕಾರ ಬೆಂಗಳೂರಲ್ಲಿ ಎಂಟು ಪರಿಕಲ್ಪನೆ ಇಟ್ಟುಕೊಂಡು ಹಲವು ಯೋಜನೆಗಳನ್ನು ರೂಪಿಸಿತ್ತು. ಇದೇ ಬ್ರ್ಯಾಂಡ್ ಬೆಂಗಳೂರಿನ ಅಡಿಯಲ್ಲಿ ರಾಜಧಾನಿಯ ಹೃದಯಭಾಗ ನೃಪತುಂಗ ರಸ್ತೆಯಲ್ಲಿ ಬರೋಬ್ಬರಿ 1 ಕೋಟಿ ರೂ. ಖರ್ಚು ಮಾಡಿ ಸ್ಮಾರ್ಟ್ ಬಸ್ ನಿಲ್ದಾಣವನ್ನು ಕೂಡ ನಿರ್ಮಾಣ ಮಾಡಲಾಗಿತ್ತು. ಆದರೆ ವರ್ಷ ತುಂಬುವುದರೊಳಗೆ ಸ್ಮಾರ್ಟ್ ನಿಲ್ದಾಣ ಕೆಲಸಕ್ಕೆ ಬಾರದ ನಿರುಪಯುಕ್ತ ಜಾಗದಂತೆ ಬದಲಾಗಿಬಿಟ್ಟಿದೆ.

ಸ್ಮಾರ್ಟ್​ ನಿಲ್ದಾಣದಲ್ಲಿಲ್ಲ ಮಹಿಳೆಯರಿಗೆ ಸುರಕ್ಷತೆಗೆ

ಮಹಿಳೆಯರ ಸುರಕ್ಷತೆಗಾಗಿ ಕೆಲ ಸ್ವಯಂ ಸೇವಾಸಂಸ್ಥೆಗಳ ಜೊತೆ ಸೇರಿ ನಿರ್ಮಿಸಿದ್ದ ಈ ಸ್ಮಾರ್ಟ್ ನಿಲ್ದಾಣವನ್ನು ಕಳೆದ ವರ್ಷ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಉದ್ಘಾಟಿಸಿದ್ದರು. ಆದರೆ ಇದೀಗ ನಿರ್ವಹಣೆಯಿಲ್ಲದೇ ಇಡೀ ನಿಲ್ದಾಣ ಅವ್ಯವಸ್ಥೆಯ ಆಗರವಾಗಿ ಬದಲಾಗಿದೆ. ಮಹಿಳೆಯರ ಸುರಕ್ಷತೆಗೆ ಎಂದು ಅಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ಕಿಡಿಗೇಡಿಗಳು ಕದ್ದೋಯ್ದಿದ್ದಾರೆ. ಇತ್ತ ತುರ್ತು ಸಮಯದಲ್ಲಿ ಸಹಾಯಕ್ಕೆ ಅಳವಡಿಸಿದ್ದ ಪ್ಯಾನಿಕ್ ಬಟನ್ ಕೆಲಸ ನಿಲ್ಲಿಸಿ ತಿಂಗಳುಗಳೇ ಉರುಳಿವೆ. ಸ್ಯಾನಿಟರಿ ಪ್ಯಾಡ್ ಯಂತ್ರ ತುಕ್ಕು ಹಿಡಿದು ಮೂಲೆ ಸೇರಿದ್ದು, ಬಸ್ ನಿಲ್ದಾಣದಲ್ಲಿ ಕೂರುವ ಬದಲು ಫುಟ್ ಪಾತ್ ನಲ್ಲಿ ನಿಂತು ಬಸ್ ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಸದ್ಯ ಒಂದು ಕೋಟಿ ಹಣ ಸುರಿದು ನಿರ್ಮಿಸಿದ್ದ ಈ ಹೈಫೈ ಸ್ಮಾರ್ಟ್ ಬಸ್ ನಿಲ್ದಾಣ ಬಳಕೆಗೆ ಸಿಗದಂತಾಗಿರುವುದಕ್ಕೆ ಆಕ್ರೋಶ ಹೊರಹಾಕುತ್ತಿರುವ ಮಹಿಳಾ ಪ್ರಯಾಣಿಕರು, ಜನರ ಉಪಯೋಗಕ್ಕೆ ಸಿಗದ ಮೇಲೆ ಕೋಟಿ ಕೋಟಿ ಹಣ ವ್ಯರ್ಥ ಮಾಡಿದ್ದೇಕೆ ಎಂದು ಕಿಡಿಕಾರುತ್ತಿದ್ದಾರೆ. ಅಲ್ಲದೇ ಬಸ್ ನಿಲ್ದಾಣದಲ್ಲಿ ಏನೇ ಸೌಲಭ್ಯ ಅಳವಡಿಸಿದರೂ ಅದು ಸರಿಯಾಗಿ ಕೆಲಸಕ್ಕೆ ಬಾರದ ಮೇಲೆ ಇದ್ದೇನು ಪ್ರಯೋಜನ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ Bangaluru: ಎಲೆಕ್ಟ್ರಾನಿಕ್​ ಸಿಟಿಯಲ್ಲೊಂದು ಸ್ಮಾರ್ಟ್ ಬಸ್ ನಿಲ್ದಾಣ; ಇದರ ವಿಶೇಷತೆ ಹೀಗಿದೆ

ಬ್ರ್ಯಾಂಡ್ ಬೆಂಗಳೂರಿನ ಹೆಸರಲ್ಲಿ ಮಾಡಿದ ಯೋಜನೆ ಒಂದು ವರ್ಷ ತುಂಬುವುದರೊಳಗೆ ತುಕ್ಕು ಹಿಡಿದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸಿದೆ. ಇತ್ತ ಕೋಟಿ ಕೋಟಿ ಹಣ ಸುರಿದು ನಿರ್ಮಿಸಿದ್ದ ಸ್ಮಾರ್ಟ್ ಬಸ್ ನಿಲ್ದಾಣ ಮತ್ತೆ ಮಹಿಳೆಯರ ಬಳಕೆಗೆ ಸಿಗುವಂತಾಗುತ್ತದೆಯೇ ಎಂದು ಮಹಿಳೆಯರು ಕಾಯುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:56 am, Fri, 10 October 25

Follow Us
ಶಾಂತಮೂರ್ತಿ
ಶಾಂತಮೂರ್ತಿ
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು