ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ: ಬೆಂಗಳೂರಿನ ಹೆಡ್​​ಕಾನ್ಸ್ಟೇಬಲ್​ ಅಮಾನತು

ಬೆಂಗಳೂರಿನ ಪೊಲೀಸ್​ ಪೇದೆ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ನಂದಿನಿ ಲೇಔಟ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹೆಡ್​​ಕಾನ್ಸ್ಟೇಬಲ್ ಪ್ರಶಾಂತ್​ ಕುಮಾರ್​ ಅವರನ್ನು ಅಮಾನತು ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ: ಬೆಂಗಳೂರಿನ ಹೆಡ್​​ಕಾನ್ಸ್ಟೇಬಲ್​ ಅಮಾನತು
ನಂದಿನಿ ಲೇಔಟ್ ಪೊಲೀಸ್​ ಠಾಣೆ
Follow us
|

Updated on: Oct 20, 2024 | 11:57 AM

ಬೆಂಗಳೂರು, ಅಕ್ಟೋಬರ್​ 20: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಬೆಂಗಳೂರಿನ (Bengaluru) ಪೊಲೀಸ್​ ಪೇದೆಯೊಬ್ಬರ (Police Constable) ವಿರುದ್ಧ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ (Fraud) ಆರೋಪ ಕೇಳಿಬಂದಿದೆ. ನಗರ ಸಶಸ್ತ್ರ ಮೀಸಲು ಪ್ರಧಾನ ಕಚೇರಿ (CAR) ಹೆಡ್​​ಕಾನ್ಸ್ಟೇಬಲ್​ ಆಗಿರುವ ಪ್ರಶಾಂತ್ ಕುಮಾರ್ ಅವರ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಮಹಾಲಕ್ಷ್ಮೀಲೇಔಟ್ ನಿವಾಸಿ ಭಾಗ್ಯಮ್ಮ ಎಂಬವರು ದೂರು ನೀಡಿದ್ದಾರೆ. ದೂರು ಆಧರಿಸಿ ನಂದಿನಿ ಲೇಔಟ್ ಪೊಲೀಸ್​ ಠಾಣೆಯಲ್ಲಿ ಮೂವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಪ್ರಶಾಂತ್ ಕುಮಾರ್ 2011ರಲ್ಲಿ ದೂರುದಾರೆ ಭಾಗ್ಯಮ್ಮ ಅವರಿಗೆ ಪರಿಚಯವಾಗಿದ್ದಾರೆ. “ತಮ್ಮ ಇಬ್ಬರು ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸಿ” ಎಂದು ದೂರುದಾರೆ ಭಾಗ್ಯಮ್ಮ ಪ್ರಶಾಂತ್ ಕುಮಾರ್ ಅವರಿಗೆ ಹೇಳಿದ್ದಾರೆ. ಅದಕ್ಕೆ ಪ್ರಶಾಂತ್​ ಕುಮಾರ್​ “ನನಗೆ ಹಲವು ಸರ್ಕಾರಿ ಅಧಿಕಾರಿಗಳು ಪರಿಚಯ ಇದ್ದಾರೆ. ನಿಮ್ಮ ಇಬ್ಬರು ಮಕ್ಕಳಿಗೆ ಕೆಲಸ ಕೊಡಿಸುತ್ತೇನೆ” ಎಂದಿದ್ದರು.

ಕೆಲ ದಿನಗಳ ಬಳಿಕ ದೂರುದಾರೆ ಭಾಗ್ಯಮ್ಮ ಅವರನ್ನು ಮನೆಗೆ ಕರೆಸಿಕೊಂಡ ಪೇದೆ ಪ್ರಶಾಂತ್​ ಕುಮಾರ್​ “ನಿಮ್ಮ ಇಬ್ಬರು ಮಕ್ಕಳಿಗೆ ಮೂರು ತಿಂಗಳಲ್ಲಿ ಎಫ್​ಡಿಎ, ಎಸ್​ಡಿಎ ಶ್ರೇಣಿಯ ಕೆಲಸ ಕೊಡಿಸುವುದಾಗಿ” ಭರವಸೆ ನೀಡಿದ್ದಾರೆ. ಇದಕ್ಕಾಗಿ 25 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ: ಚಾಮರಾಜಪೇಟೆ ಅಂಚೆ ಕಚೇರಿ ಮೇಲೆ ಸಿಸಿಬಿ ದಾಳಿ: ಸ್ಪೋಟಕ ವಿಚಾರ ಬಹಿರಂಗ

ನಂತರ, ಪೇದೆ ಪ್ರಶಾಂತ್ ಕುಮಾರ್​, ಮಂಜುನಾಥ್ ಪ್ರಸಾದ್ ಎಂಬುವರನ್ನು ತನ್ನ ಪಿಎ ಎಂದು ಭಾಗ್ಯಮ್ಮ ಅವರಿಗೆ ಪರಿಚಯ ಮಾಡಿಸಿದ್ದಾನೆ. ನಂತರ ಆರೋಪಿಗಳು ಭಾಗ್ಯಮ್ಮ ಅವರಿಂದ ಒಟ್ಟು 47 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಜೊತೆಗೆ 857 ಗ್ರಾಂ. ಚಿನ್ನಾಭರಣವನ್ನೂ ಪಡೆದಿದ್ದಾರೆ. ಆದರೆ, ಇನ್ನೂವರೆಗೂ ಯಾವುದೇ ನೌಕರಿ ಕೊಡಿಸಿಲ್ಲ.

ಹೀಗಾಗಿ ಭಾಗ್ಯಮ್ಮ ಆರೋಪಿಗಳ ವಿರುದ್ಧ ನಂದಿನಿಲೇಔಟ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಸಿದ್ದಾರೆ. ಹೆಡ್​ ಕಾನ್ಸ್​ಟೇಬಲ್​ ಪ್ರಶಾಂತ್ ಕುಮಾರ್, ಪತ್ನಿ ದೀಪಾ ಮತ್ತು ಮಂಜುನಾಥ್​ ಪ್ರಸಾದ್​ ವಿರುದ್ಧ ಎಫ್​ಐಆರ್ ದಾಖಲಾಗಿದೆ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಶಾಂತ್​ ಕುಮಾರ್​ ಅವರನ್ನು ಅಮಾನತು ಮಾಡಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ರವಿವಾರ ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ರವಿವಾರ ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ