ಬೊಮ್ಮಾಯಿ ಸಂಪುಟದಲ್ಲಿ 5-6 ಸಚಿವ ಸ್ಥಾನಗಳು ಖಾಲಿ ಇವೆ, ಬೇಗ ಭರ್ತಿ ಮಾಡಿದರೆ ಒಳ್ಳೆಯದು -ಸಚಿವ ಆರ್.ಅಶೋಕ್
ಮುಖ್ಯಮಂತ್ರಿಗಳಿಗೆ ಸಚಿವ ಸಂಪುಟ ವಿಸ್ತರಣೆ ಮಾಡುವ ಅಧಿಕಾರವಿದೆ. ಐದಾರು ಸೀಟ್ ಖಾಲಿ ಇದೆ ಅದನ್ನ ಬೇಗ ತುಂಬುವ ತೀರ್ಮಾನ ಮಾಡೋದು ಒಳ್ಳೆಯದು.
ದೇವನಹಳ್ಳಿ: ಬೊಮ್ಮಾಯಿ ಸಂಪುಟದಲ್ಲಿ 5-6 ಸಚಿವ ಸ್ಥಾನಗಳು ಖಾಲಿ ಇವೆ. ಖಾಲಿ ಇರುವ ಸಚಿವ ಸ್ಥಾನವನ್ನು ಬೇಗ ಭರ್ತಿ ಮಾಡಿದರೆ ಒಳ್ಳೆಯದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಮುಖ್ಯಮಂತ್ರಿಗಳಿಗೆ ಸಚಿವ ಸಂಪುಟ ವಿಸ್ತರಣೆ ಮಾಡುವ ಅಧಿಕಾರವಿದೆ. ಐದಾರು ಸೀಟ್ ಖಾಲಿ ಇದೆ ಅದನ್ನ ಬೇಗ ತುಂಬುವ ತೀರ್ಮಾನ ಮಾಡೋದು ಒಳ್ಳೆಯದು. ಹೊಸ ಸಚಿವರಿಗೆ ಅವಕಾಶ ಕೊಟ್ಟರೇ ಮೂರ್ನಾಲ್ಕು ತಿಂಗಳು ಅವರು ಕೆಲಸ ಮಾಡಲು ಅನುಕೂಲವಾಗುತ್ತೆ. ಆ ದೃಷ್ಟಿಯಿಂದ ಮುಖ್ಯಮಂತ್ರಿಗಳು, ಕೇಂದ್ರದ ನಾಯಕರ ತಿರ್ಮಾನಕ್ಕೆ ಎಲ್ಲರೂ ಬದ್ದರಾಗ್ತೇವೆ. ದೇಶದಲ್ಲಿ ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರ್ಕಾರ ಇದೆ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವಂತೆ ಜನರ ಬಯಕೆ ಇದೆ ಎಂದರು.
ಜನರಿಗೆ ಬೇಕಾಗಿರೋದು ಅಭಿವೃದ್ಧಿ, ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿ
ಇನ್ನು ಇದೇ ವೇಳೆ ಚುನಾವಣಾ ಸಂದರ್ಭದಲ್ಲಿ ವೈಯಕ್ತಿಕ ಟೀಕೆಗಳು ಒಳ್ಳೆಯದಲ್ಲ. ರಾಜಕೀಯವಾಗಿ ಪಕ್ಷದ ಸಿದ್ಧಾಂತ, ಅಭಿವೃದ್ಧಿ ಬಗ್ಗೆ ಮಾತನಾಡಲಿ. ವೈಯಕ್ತಿಕ ಟೀಕೆ ಮಾಡಿದ್ರೆ ಎರಡು ಕಡೆಯಿಂದ ಟೀಕೆಗಳು ಬರಲಿವೆ. ಇದು ಸಮಾಜದ ಹಿತದೃಷ್ಟಿಯಿಂದ ಜನರಿಗೆ ಒಳ್ಳೆಯದು ಅಲ್ಲ. ಜನರಿಗೆ ಬೇಕಾಗಿರೋದು ಅಭಿವೃದ್ಧಿ, ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿ. ಅಭಿವೃದ್ಧಿ ಬಿಟ್ಟು ವೈಯಕ್ತಿಕ ಟೀಕೆಗಳನ್ನ ಮಾಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸಗವಾಮಿಯವರಿಗೆ ಕಂದಾಯ ಸಚಿವ ಅಶೋಕ್ ಸಲಹೆ ನೀಡಿದ್ದಾರೆ.
ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳ್ತಾರೆ
ಕಾಂಗ್ರೆಸ್ ಅಧಿಕಾರಕ್ಕೆ ಬರ್ತೇವೆ ಎಂದು ತಿರುಕನ ಕನಸು ಕಾಣ್ತಿದೆ. ಕಾಂಗ್ರೆಸ್ನವರು ವಿರೋಧ ಪಕ್ಷದಲ್ಲಿ ಇರುವುದಕ್ಕೂ ಲಾಯಕ್ಕಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಒಳ ಜಗಳವಿದೆ. ಡಾ.ಜಿ.ಪರಮೇಶ್ವರ್ ಸಹ ಸಿಎಂ ಆಗುತ್ತೇನೆ ಎಂದು ಹೇಳ್ತಿದ್ದಾರೆ. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳ್ತಾರೆ. ಡಿಕೆಶಿ ಜ್ಯೋತಿಷಿಗಳು ಹೇಳಿದ್ದಾರೆ ನಾನು ಸಿಎಂ ಅಗ್ತೀನಿ ಅಂತಾರೆ. ಈಗ ಮಲ್ಲಿಕಾರ್ಜುನ ಖರ್ಗೆ ಕೂಡ ಸಿಎಂ ರೇಸ್ಗೆ ಬಂದಿದ್ದಾರೆ. ಕಾಂಗ್ರೆಸ್ನವರಿಗೆ ಪಕ್ಷ ಮೊದಲು ಆದ್ರೆ ಬಿಜೆಪಿಗೆ ದೇಶ ಮೊದಲು ಎಂದು ಸಚಿವ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
1 ಲಕ್ಷ ಕುಟುಂಬಗಳಿಗೆ ಸೈಟ್ ಕೊಡುವ ಮೂಲಕ ಗಿನ್ನಿಸ್ ದಾಖಲೆ ಮಾಡುತ್ತೇವೆ
ಜ.19ರಂದು ಯಾದಗಿರಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಅಲೆಮಾರಿ ಜನಾಂಗಕ್ಕೆ ಸೈಟ್ ಕೊಡುವ ಯೋಜನೆ ಮಾಡಿದ್ದೇವೆ. ಕಂದಾಯ ಸಚಿವನಾಗಿ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದೇನೆ. ನೋಂದಣಿ ಮಾಡಿಸಿ ಕಂದಾಯ ಗ್ರಾಮವನ್ನಾಗಿ ಘೋಷಿಸುತ್ತೇವೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ದಾಖಲೆ ನೋಂದಣಿ ಮಾಡಿಸುತ್ತೇವೆ. ಅಲೆಮಾರಿ ಸಮುದಾಯ ನೆಮ್ಮದಿಯಿಂದ ಬದುಕಲು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದೇವೆ. ಇಡೀ ರಾಜ್ಯದಲ್ಲಿ 1 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ಕುರುಬರಹಟ್ಟಿ, ಲಂಬಾಣಿ ತಾಂಡಾಗಳ ನಿವಾಸಿಗಳಿಗೆ ಅನುಕೂಲವಾಗಲಿದೆ. ಈ ಕಾರ್ಯಕ್ರಮ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬರ್ತಿದ್ದಾರೆ. 1 ಲಕ್ಷ ಕುಟುಂಬಗಳಿಗೆ ಸೈಟ್ ಕೊಡುವ ಮೂಲಕ ಗಿನ್ನಿಸ್ ದಾಖಲೆ ಮಾಡುತ್ತೇವೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ