ದುಡ್ಡಿಗಾಗಿ ಹಿಂಸೆ ಕೊಡ್ತಾರೆ, ಕೈಕಾಲು ಕಟ್ಟಿ ಹಾಕಿ ಹೊಡೆಯುತ್ತಾರೆ; ಪರಪ್ಪನ ಅಗ್ರಹಾರ ಜೈಲರ್ ಕಿರುಕುಳಕ್ಕೆ ಬೇಸತ್ತ ಕೈದಿಗಳಿಂದ ಧರಣಿ
ಜೈಲರ್ ರಂಗನಾಥ್ ದುಡ್ಡಿಗಾಗಿ ಹಿಂಸೆ ನೀಡುತ್ತಾರೆ ಎಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಆರೋಪಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲರ್ ರಂಗನಾಥ್ ದುಡ್ಡಿಗಾಗಿ ಹಿಂಸೆ ನೀಡುತ್ತಾರೆ. ದುಡ್ಡು ನೀಡದೇ ಇದ್ದರೆ ಬಹಳ ಟಾರ್ಚರ್ ಕೊಡ್ತಾರೆ ಎಂದ ಕೈದಿಗಳು.
ಆನೇಕಲ್: ಜೈಲರ್ ಕಿರುಕುಳ ನೀಡ್ತಿದ್ದಾರೆಂದು ಆರೋಪಿಸಿ ಕೈದಿಗಳು ಅನ್ನ ನೀರು ಬಿಟ್ಟು ಧರಣಿ ನಡೆಸುತ್ತಿರುವ ಘಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ. ನಿನ್ನೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಸಜಾಬಂಧಿಯೊಬ್ಬರು ಮೃತಪಟ್ಟಿದ್ದರು. ಆನಂದ್ (45) ಸಜಾಬಂಧಿ. ಆತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದು ಆತನ ಸಾವಿಗೆ ಕಿರುಕುಳವೇ ಕಾರಣ ಎಂದು ಕೈದಿಗಳು ಆರೋಪಿಸಿ ಧರಣಿ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮೂಲದ ಸಜಾಬಂಧಿ ಆನಂದ್, 2009ರಲ್ಲಿ ಕೊಲೆ ಮಾಡಿ 11 ವರ್ಷಗಳಿಂದೆ ಶಿಕ್ಷೆಗೆ ಒಳಗಾಗಿದ್ದರು. ಆದರೆ ನಿನ್ನೆ ಮೃತಪಟ್ಟಿದ್ದಾರೆ. ಇವರ ಸಾವಿಗೆ ಹೃದಯಾಘಾತವೇ ಕಾರಣವೆಂದು ಪೊಲೀಸರು ತಿಳಿಸಿದ್ದು ಇಲ್ಲ ಜೈಲರ್ ಕಿರುಕುಳ ನೀಡುತ್ತಿದ್ದ ಹೊಡೆದು ಬಡಿಯುತ್ತಿದ್ದರು ಎಂದು ಪರಪ್ಪನ ಅಗ್ರಹಾರದ ಕೈದಿಗಳು ಆರೋಪಿಸಿ ಅನ್ನ ನೀರು ಬಿಟ್ಟು ಧರಣಿ ನಡೆಸುತ್ತಿದ್ದಾರೆ.
ದುಡ್ಡು ಕೊಟ್ಟರೆ ಜೈಲಿಗೆ ಗಾಂಜಾ, ಮೊಬೈಲ್ ಸಪ್ಲೈ ಇನ್ನು ಮತ್ತೊಂದೆಡೆ ಜೈಲರ್ ರಂಗನಾಥ್ ದುಡ್ಡಿಗಾಗಿ ಹಿಂಸೆ ನೀಡುತ್ತಾರೆ ಎಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಆರೋಪಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲರ್ ರಂಗನಾಥ್ ದುಡ್ಡಿಗಾಗಿ ಹಿಂಸೆ ನೀಡುತ್ತಾರೆ. ದುಡ್ಡು ನೀಡದೇ ಇದ್ದರೆ ಬಹಳ ಟಾರ್ಚರ್ ಕೊಡ್ತಾರೆ. ಕೈಕಾಲು ಕಟ್ಟಿ ಹಾಕಿ ಹೊಡೆಯುತ್ತಾರೆ. ಹಾಗೂ ಜೈಲರ್ ರಂಗನಾಥ್ ದುಡ್ಡು ಕೊಟ್ಟರೆ ಜೈಲಿಗೆ ಗಾಂಜಾ, ಮೊಬೈಲ್ ಸಪ್ಲೈ ಮಾಡುತ್ತಾರೆ ಎಂದು ಜೈಲಿನಲ್ಲಿದ್ದುಕೊಂಡೇ ಕೈದಿಗಳು ಆಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಜೈಲಿನಲ್ಲಿ ಇದ್ದರೂ ಆಕ್ಟೀವ್! ಪರಪ್ಪನ ಅಗ್ರಹಾರ ಜೈಲಿನಿಂದ 19 ನಟೋರಿಯಸ್ ರೌಡಿಶೀಟರ್ಸ್ ಶಿಫ್ಟ್
Published On - 5:57 pm, Thu, 7 October 21