AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಬೆಂಗಳೂರಿನ ಜನಕ್ಕೆ ನವೆಂಬರ್ 1 ರಿಂದ ಆ್ಯಪ್-ಆಧಾರಿತ ಆಟೋ ಸೇವೆ ಒದಗಿಸಲು ಆಟೋ ರಿಕ್ಷಾ ಚಾಲಕರ ಒಕ್ಕೂಟ ಚಿಂತನೆ

ಆಟೋ ಚಾಲಕರ ಸಂಘ ಸಾರಿಗೆ ಇಲಾಖೆಗೆ ದೂರು ಸಲ್ಲಿಸಿದರೂ ಕ್ಯಾಬ್ ಸೇವೆ ಒದಗಿಸುವ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ. ‘ನಮ್ಮ ಒಕ್ಕೂಟವು ನವೆಂಬರ್ 1 ರಂದು ನಮ್ಮ ಯಾತ್ರಿ ಆ್ಯಪ್ ಲಾಂಚ್ ಮಾಡುವ ಯೋಜನೆ ಹಾಕಿಕೊಂಡಿದೆ  ಎಂದು ರುದ್ರಮೂರ್ತಿ ಹೇಳಿದರು. 

ನಮ್ಮ ಬೆಂಗಳೂರಿನ ಜನಕ್ಕೆ ನವೆಂಬರ್ 1 ರಿಂದ ಆ್ಯಪ್-ಆಧಾರಿತ ಆಟೋ ಸೇವೆ ಒದಗಿಸಲು ಆಟೋ ರಿಕ್ಷಾ ಚಾಲಕರ ಒಕ್ಕೂಟ ಚಿಂತನೆ
ಪ್ರಾನಿಧಿಕ ಚಿತ್ರImage Credit source: Deccan Chronicle
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Oct 07, 2022 | 12:39 PM

Share

ಬೆಂಗಳೂರು: ಆ್ಯಪ್-ಆಧಾರಿತ ಕ್ಯಾಬ್ ಸೇವೆ ಒದಗಿಸುವ ಸಂಸ್ಥೆಗಳಾಗಿರುವ ಓಲಾ ಮತ್ತು ಊಬರ್ ಗಳಿಂದ ಎದುರಾಗುತ್ತಿರುವ ತೀವ್ರ ಸ್ವರೂಪದ ಸ್ಪರ್ಧೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ತಮ್ಮದೇ ಆದ ಮೊಬೈಲ್ ಆ್ಯಪ್ ಲಾಂಚ್ ಮಾಡುವ ನಿರ್ಧಾರವನ್ನು ಬೆಂಗಳೂರು ಮಹಾನಗರದ ಆಟೋ ಚಾಲಕರು ತೆಗೆದುಕೊಂಡಿದ್ದಾರೆ. ನಂದನ ನೀಲಕೇಣಿ-ಬೆಂಬಲಿತ ಬೆಕ್ ಪ್ರತಿಷ್ಠಾನದ (Beckn Foundation,) ನೆರವಿನೊದಿಗೆ ಆಟೋ ರಿಕ್ಷಾ ಚಾಲಕರ ಒಕ್ಕೂಟವು (ಎ ಆರ್ ಡಿ ಯು) ‘ನಮ್ಮ ಯಾತ್ರಿ ಆ್ಯಪ್ ’ ಅನ್ನು (Namma Yatri App) ಕರ್ನಾಟಕ ರಾಜ್ಯೋತ್ಸವ (Karnataka Rajyotsava) ದಿನದಂದು ಲಾಂಚ್ ಮಾಡುವ ಯೋಜನೆ ಹಾಕಿಕೊಂಡಿದೆ.

ಇಂಗ್ಲಿಷ್ ದಿನಪತ್ರಿಕೆ ಟೈಮ್ಸ್ ಆಫ್ ಇಂಡಿಯ ಜೊತೆ ಮಾತಾಡಿರುವ ಎ ಅರ್ ಡಿ ಯು ಅಧ್ಯಕ್ಷ ಆರ್ ರುದ್ರಮೂರ್ತಿ ಅವರು, ‘ಆ್ಯಪ್-ಆಧಾರಿತ ಕ್ಯಾಬ್ ಸಂಸ್ಥೆಗಳು ಗ್ರಾಹಕರಿಂದ ರೂ. 100 ಕನಿಷ್ಟ ದರವನ್ನು ಪಡೆದು ಅದರಲ್ಲಿ ರೂ. 60 ಅನ್ನು ಆಟೋ ಚಾಲಕರಿಗೆ ನೀಡುತ್ತವೆ ಮತ್ತು ಉಳಿದ ರೂ. 40 ಅನ್ನು ಕಮೀಶನ್ ರೂಪದಲ್ಲಿ ಪಡೆಯುತ್ತವೆ. ಆಟೋ ಚಾಲಕರು ರೂ. 40 ಗಳಿಗಾಗಿ ಆಟೋ ಓಡಿಸಬೇಕಾಗುತ್ತದೆ. ಅವರು ದರವನ್ನು ಹೆಚ್ಚಿಸಿದ ಬಳಿಕ ಗ್ರಾಹಕರ ಸಂಖ್ಯೆ ಶೇಕಡ 50-60ರಷ್ಟು ಕುಸಿದಿದೆ. ನಾವು ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ. ಈಗ ತುರ್ತು ಸ್ಥಿತಿಯಲ್ಲಿ ಪ್ರಯಾಣಿಸಬೇಕಾದವರು ಮತ್ತು ತಮ್ಮಲ್ಲಿ ವಾಹನವಿಲ್ಲದವರು ಮಾತ್ರ ಇಷ್ಟು ದರ ನೀಡಲೇಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ,’ ಎಂದು ಹೇಳಿದ್ದಾರೆ.

ಆಟೋ ಚಾಲಕರ ಸಂಘ ಸಾರಿಗೆ ಇಲಾಖೆಗೆ ದೂರು ಸಲ್ಲಿಸಿದರೂ ಕ್ಯಾಬ್ ಸೇವೆ ಒದಗಿಸುವ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ. ‘ನಮ್ಮ ಒಕ್ಕೂಟವು ನವೆಂಬರ್ 1 ರಂದು ನಮ್ಮ ಯಾತ್ರಿ ಆ್ಯಪ್ ಲಾಂಚ್ ಮಾಡುವ ಯೋಜನೆ ಹಾಕಿಕೊಂಡಿದೆ  ಎಂದು ರುದ್ರಮೂರ್ತಿ ಹೇಳಿದರು.

‘ನಾವು ಸರ್ಕಾರದಿಂದ ನಿರ್ಧಾರಿತ ದರಗಳನ್ನೇ ಗ್ರಾಹಕರಿಂದ ಪಡೆಯುತ್ತೇವೆ ಮತ್ತು ಅದರ ಜೊತೆಗೆ ಪಿಕ್-ಅಪ್ ಚಾರ್ಜ್ ರೂಪದಲ್ಲಿ ರೂ. 10 ಹೆಚ್ಚುವರಿಯಾಗಿ ಪಡೆಯುತ್ತೇವೆ. ಅಫೀಸ್/ಮನೆ ಮತ್ತು ಮೆಟ್ರೋ ಸ್ಟೇಶನ್ ಅಂತರ 2 ಕಿಮೀ ಮಿತಿಯೊಳಗಿದ್ದರೆ ಫ್ಲ್ಯಾಟ್ ರೂ. 40 ಚಾರ್ಜ್ ಮಾಡುವ ಯೋಜನೆ ಬಗ್ಗೆಯೂ ನಾವು ಪರಾಮರ್ಶೆ ನಡೆಸುತ್ತಿದ್ದೇವೆ,’ ಎಂದು ರುದ್ರಮೂರ್ತಿ ಹೇಳಿದ್ದಾರೆ.

ಮುಕ್ತ ಸಂಚಾರ ನೆಟ್ವರ್ಕ್ (open mobility network) ಅಂಗವಾಗಿ ಕಳೆದ ವರ್ಷ ಕೊಚ್ಚಿಯಲ್ಲಿ ಕೇರಳ ಮೆಟ್ರೋಪಾಲಿಟನ್ ಟ್ರಾನ್ಸಪೋರ್ಟ್ ಅಥಾರಿಟಿ (ಕೆ ಎಮ್ ಟಿ ಎ) ಮತ್ತು ಬೆಕ್ ಪ್ರತಿಷ್ಠಾನ ಜಂಟಿಯಾಗಿ ಯಾತ್ರಾ ಆ್ಯಪ್ ಅನ್ನು ಲಾಂಚ್ ಮಾಡಿದವು.

ಬೆಂಗಳೂರಲ್ಲಿ ನಮ್ಮ ಯಾತ್ರಿ ಆ್ಯಪ್  ಬಗ್ಗೆ ಜನ ಕುತೂಹಲ ವ್ಯಕ್ತಪಡಿಸುತ್ತಿರುವರಾದರೂ ನಗರದಲ್ಲಿ ಹಿಂದೆ ಲಾಂಚ್ ಮಾಡಿದ್ದ ಌಪ್-ಆಧಾರಿತ ಟಾಕ್ಸಿ ಸೇವೆ ಕೆಟ್ಟದ್ದಾಗಿ ವಿಫಲಗೊಂಡಿದ್ದರಿಂದ ಅವರಲ್ಲಿ ಗೊಂದಲ, ಸಂದೇಹಗಳಿರುವುದಂತೂ ಸತ್ಯ.

2017ರಲ್ಲಿ ಜೆಡಿ(ಎಸ್) ಆ್ಯಪ್-ಆಧಾರಿತ ಕ್ಯಾಬ್ ಸೇವೆ ನಮ್ಮ ಟೈಗರ್ (Namma TYGR) ಲಾಂಚ್ ಮಾಡಿತ್ತು ಆದರೆ ಟೇಕಾಫ್ ಅಗಲಿಲ್ಲ.

ಬೆಂಗಳೂರಲ್ಲಿ ಆಟೋಗಳ ಕನಿಷ್ಟ ದರ ರೂ. 30 (ಎರಡು ಕಿಮೀ ದೂರದವರೆಗೆ ) ಇದ್ದು ನಂತರದ ಪ್ರತಿ ಕಿಮೀ ರೂ. 15 ಇದೆ. ಆದರೆ ಆ್ಯಪ್-ಆಧಾರಿತ ಅಗ್ರಿಗೇಟರ್ ಗಳು ಕನಿಷ್ಟ ದರವೇ ರೂ. 100 ವಸೂಲು ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.

Follow Us
TV9 Web
TV9 Web

TV9 Kannada

Read More
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ