AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಒಂದೇ ವರ್ಷದಲ್ಲಿ ಹರಿದು ಬಂತು 64 ಕೋಟಿ ರೂ.: ಪ್ರಾಣಿ ದತ್ತು ಪಡೆಯುವಲ್ಲಿ ಬೆಂಗಳೂರಿಗರು ನಂಬರ್ 1

ಬನ್ನೇರುಘಟ್ಟ ಜೈವಿಕ ಉದ್ಯಾನವನವು (BBP) 2024-26ನೇ ಸಾಲಿನಲ್ಲಿ ₹64 ಕೋಟಿ ಆದಾಯ ಮತ್ತು 22 ಲಕ್ಷ ಪ್ರವಾಸಿಗರೊಂದಿಗೆ ಹೊಸ ದಾಖಲೆ ಬರೆದಿದೆ. ಪ್ರಾಣಿ ದತ್ತು ಮತ್ತು ದೇಣಿಗೆಯೂ ₹80 ಲಕ್ಷಕ್ಕೆ ಏರಿಕೆಯಾಗಿದೆ. ಇದಲ್ಲದೆ, 'ಚಿಣ್ಣರ ಮೃಗಾಲಯ ದರ್ಶನ' ಅಡಿಯಲ್ಲಿ 4,000 ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇದು ಬೆಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣದ ಹಣಕಾಸು ಪ್ರಗತಿ ಮತ್ತು ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಒಂದೇ ವರ್ಷದಲ್ಲಿ ಹರಿದು ಬಂತು 64 ಕೋಟಿ ರೂ.: ಪ್ರಾಣಿ ದತ್ತು ಪಡೆಯುವಲ್ಲಿ ಬೆಂಗಳೂರಿಗರು ನಂಬರ್ 1
ಸಾಂದರ್ಭಿಕ ಚಿತ್ರ
ರಾಮು, ಆನೇಕಲ್​
| Edited By: |

Updated on: Apr 26, 2026 | 3:35 PM

Share

ಬೆಂಗಳೂರು, ಏ.26: ಬೆಂಗಳೂರು ಹೊರವಲಯದ ಪ್ರಸಿದ್ಧ ಪ್ರವಾಸಿ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನವು (BBP) ಆದಾಯ ಮತ್ತು ಪ್ರವಾಸಿಗರ ಭೇಟಿಯಲ್ಲಿ ಹೊಸ ದಾಖಲೆ ಬರೆದಿದೆ. 2024-26ನೇ ಸಾಲಿನಲ್ಲಿ ಉದ್ಯಾನವನಕ್ಕೆ ಬರೋಬ್ಬರಿ 64 ಕೋಟಿ 23 ಲಕ್ಷ ರೂಪಾಯಿ ಆದಾಯ ಹರಿದು ಬಂದಿದ್ದು, ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದೆ. ಇದು ಬೆಂಗಳೂರಿನಲ್ಲಿ ತುಂಬಾ ದೊಡ್ಡ ಜೈವಿಕ ಉದ್ಯಾನವನ ಇಲ್ಲಿ ಸಾವಿರಾರೂ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಕೆಂಡ್​​​ ನಲ್ಲಿ ಇಲ್ಲಿ ಜನ ತುಂಬಿರುತ್ತಾರೆ. ಇಲ್ಲಿರುವ ಪ್ರಾಣಿಗಳು ಹಾಗೂ ಸಫಾರಿಯನ್ನು ನೋಡುವುದೇ ಒಂದು ಖುಷಿಯಾಗಿರುತ್ತದೆ. ಇಲ್ಲಿನ ಆಕರ್ಷಕ ಪ್ರಾಣಿ – ಪಕ್ಷಿಗಳು ಜನರ ಕಣ್ಣಿಗೆ ಹಾಗೂ ಮನಸ್ಸಿಗೆ ಆನಂದವನ್ನು ನೀಡುತ್ತದೆ. ಇದೀಗ ಈ ಕಾರಣಕ್ಕೆ ಇಲ್ಲಿ ಆದಾಯ ಕೂಡ ಹೆಚ್ಚಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯ ಪ್ರಕೃತಿ ಪ್ರೇಮಿಗಳು ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ:

2024-25ನೇ ಸಾಲು: 21 ಲಕ್ಷ 24 ಸಾವಿರ ಪ್ರವಾಸಿಗರು.

2025-26ನೇ ಸಾಲು: 22 ಲಕ್ಷ 40 ಸಾವಿರ ಪ್ರವಾಸಿಗರು (ಸುಮಾರು 1 ಲಕ್ಷಕ್ಕೂ ಅಧಿಕ ಏರಿಕೆ).

ಇದನ್ನೂ ಓದಿ: ಕನಕಪುರದಲ್ಲಿ ಕಾಡಾನೆ ದಾಳಿಗೆ ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿ ದಾರುಣ ಸಾವು: ಅತ್ತ ಚಾಮರಾಜನಗರದಲ್ಲಿಯೂ ಮುಂದುವರಿದ ಒಂಟಿ ಸಲಗದ ಕಾಟ

ಪ್ರಾಣಿ ದತ್ತು ಮತ್ತು ದೇಣಿಗೆಯಲ್ಲಿ ಭಾರಿ ಪ್ರಗತಿ:

ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಸಂರಕ್ಷಣಾ ಮನೋಭಾವ ಜನರಲ್ಲಿ ಹೆಚ್ಚುತ್ತಿರುವುದಕ್ಕೆ ಇಲ್ಲಿನ ದೇಣಿಗೆ ಅಂಕಿಅಂಶಗಳೇ ಸಾಕ್ಷಿ:

2024-25ರಲ್ಲಿ ಕೇವಲ 53 ಲಕ್ಷ ರೂಪಾಯಿ ಪ್ರಾಣಿ ದತ್ತು ಮತ್ತು ದೇಣಿಗೆ ಸಂಗ್ರಹವಾಗಿತ್ತು.

ಆದರೆ, 2025-26ನೇ ಸಾಲಿನಲ್ಲಿ ಈ ಮೊತ್ತ 80 ಲಕ್ಷ 83 ಸಾವಿರ ರೂಪಾಯಿಗೆ ಏರಿಕೆಯಾಗಿದೆ.

ಅಂದರೆ, ಕಳೆದ ವರ್ಷಕ್ಕಿಂತ ಈ ಬಾರಿ 30 ಲಕ್ಷ ರೂಪಾಯಿ ಹೆಚ್ಚುವರಿ ಹಣ ದೇಣಿಗೆ ರೂಪದಲ್ಲಿ ಬಂದಿದೆ.

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ:

ಕೇವಲ ಆದಾಯ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯನ್ನೂ ಉದ್ಯಾನವನ ಪ್ರದರ್ಶಿಸಿದೆ. ‘ಚಿಣ್ಣರ ಮೃಗಾಲಯ ದರ್ಶನ’ ಕಾರ್ಯಕ್ರಮದ ಅಡಿಯಲ್ಲಿ ಸುಮಾರು ನಾಲ್ಕು ಸಾವಿರ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಮೃಗಾಲಯ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ (ED) ಸೂರ್ಯಸೇನ್ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us