ಈ ವರ್ಷದ ಬೆಂಗಳೂರು ಕಂಬಳಕ್ಕೆ ಡೇಟ್ ಫಿಕ್ಸ್, ಈ ಬಾರಿ ಏನೆಲ್ಲಾ ವಿಶೇಷತೆ ಗೊತ್ತಾ?
ಕಳೆದ ವರ್ಷ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಕಂಬಳ ನಡೆದಿತ್ತು. ಈ ವರ್ಷವು ಕಂಬಳ ನಡೆಸಲು ಸಿದ್ದತೆ ನಡೆಯುತ್ತಿದ್ದು, ಈ ವರ್ಷದ ಕಂಬಳಕ್ಕೆ ಡೇಟ್ ಸಹ ಫಿಕ್ಸ್ ಆಗಿದೆ. ಹಾಗಾದ್ರೆ ಈ ವರ್ಷದ ಕಂಬಳದ ವಿಶೇಷತೆಗಳೇನು..? ಯಾರೆಲ್ಲಾ ಬರುತ್ತಿದ್ದಾರೆ.? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು, (ಆಗಸ್ಟ್ 19): ಕಂಬಳ, ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ- ಪುಷ್ಟವಾಗಿ ಬೆಳಸಿದ ಕೋಣಗಳನ್ನ ಹಸನಾಗಿ ಹದ ಮಾಡಿ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಈ ಕ್ರೀಡೆಯನ್ನ ಉಡುಪಿ , ದಕ್ಷಿಣ ಕನ್ನಡ ಹೆಚ್ಚಿನದಾಗಿ ಈ ಕಂಬಳ ನಡೆಸುತ್ತಾರೆ. ಸಾಮಾನ್ಯವಾಗಿ ಈ ಕಂಬಳವನ್ನ ರೈತಾಪಿ ಜನರು ಭತ್ತದ ಕೊಯಿಲಿನ ನಂತರದಲ್ಲಿ ಮನರಂಜನೆಗೋಸ್ಕರ ಈ ಕ್ರೀಡೆಯನ್ನ ಏರ್ಪಡಿಸಲಾಗುತ್ತಿತ್ತು. ಕಳೆದ ವರ್ಷ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಕಂಬಳ ನಡೆದಿತ್ತು. ಈ ವರ್ಷವು ಕಂಬಳ ನಡೆಯುತ್ತಿದ್ದು, ಅದ್ದೂರಿಯಾ ಕಂಬಳಕ್ಕೆ ಡೇಟ್ ಫಿಕ್ಸ್ ಆಗಿದ್ದು, ಇದೇ ಅಕ್ಟೋಬರ್ 24, 25 ರಂದು ಕಂಬಳ ನಡೆಸಲು ತೀರ್ಮಾನಿಸಲಾಗಿದೆ.
ಕಳೆದ ವರ್ಷ ಮೊಟ್ಟಮೊದಲು ಬಾರಿಗೆ ರಾಜಾಧಾನಿಯಲ್ಲಿ ಕಂಬಳ ನಡೆದಿತ್ತು. ಈ ವರ್ಷವು ಕಂಬಳ ಮುಂದುವರಿದಿದ್ದು, ಅಕ್ಟೋಬರ್ 24, 25 ರಂದು ಕಂಬಳ ನಡೆಸಲು ಡೇಟ್ ಫಿಕ್ಸ್ ಆಗಿದೆ. ಇನ್ನು ಕಂಬಳ ಪ್ಯಾಲೇಸ್ ಗ್ರೌಂಡ್ ನಾ ಕಂಬಳದ ಟ್ರಾಕ್ ನಲ್ಲಿ ನಡೆಯಲಿದ್ದು, ಈಗಾಗಲೇ ಮೈಸೂರ್ ಮಹಾರಾಣಿಯವರಿಂದಲೂ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಇನ್ನು ಕಂಬಳಕ್ಕೆ ಈ ವರ್ಷ 180 ಜೋಡಿಯ ಕೋಣಗಳು ಭಾಗವಹಿಸಲಿದ್ದು, ಒಟ್ಟು ಎರಡು ದಿನಗಳ ಕಾಲ ಕಂಬಳ ನಡೆಯಲಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಮಹಾ ಮಳೆ, ಕೆರೆಯಂತಾದ ರಸ್ತೆಗಳು: ಇಲ್ಲಿವೆ ನೋಡಿ ಫೋಟೋಸ್
ಕಳೆದ ವರ್ಷ ಕಂಬಳಕ್ಕೆ 12 ಲಕ್ಷ ಜನರು ಬಂದಿದ್ರು. ಈ ವರ್ಷ 15 ಲಕ್ಷದಷ್ಟು ಜನರು ಬರುವ ಸಾಧ್ಯತೆ ಇದೆ. ಇನ್ನು ಈ ವರ್ಷದ ಕಂಬಳಕ್ಕೆ ಬಾಲಿವುಡ್ ನಟಿ ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಚೀಫ್ ಗೆಸ್ಟ್ ಆಗಿ ಬರುವ ಸಾಧ್ಯತೆ ಇದ್ದು, ಸಿಎಂ ಸಹ ಬರಲಿದ್ದಾರಂತೆ. ಇನ್ನು ಕಂಬಳಕ್ಕೆ ಬರುವ ಕೋಣಗಳನ್ನ ರೈಲಿನಲ್ಲಿ ತರಿಸಲು ಸಿದ್ದತೆಗಳು ನಡೆಯುತ್ತಿವೆ. ಈ ವರ್ಷದ ಕಂಬಳದಲ್ಲಿ ಕಂಬಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಬೆಂಗಳೂರಿಗರಿಗೆ ಕಂಬಳವನ್ನ ಪರಿಚಯಿಸುವ ಕೆಲಸವನ್ನ ತುಳುಕೂಟ ಮಾಡುತ್ತಿದೆ.
ಒಟ್ಟಿನಲ್ಲಿ ಇಷ್ಟು ದಿನ ಕರಾವಳಿ ಭಾಗದಲ್ಲಿ ಕಂಬಳ ನಡೆಯುವುದನ್ನ ನೋಡುತ್ತಿದ್ವಿ. ಇದೀಗ ನಮ್ಮ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿರುವುದು ಬಹಳ ವಿಶೇಷವಾಗಿದ್ದು, ಆ ದಿನವನ್ನ ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿರುವುದು ಮಾತ್ರ ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.