Bangalore rain: ಬೆಂಗಳೂರಿನ ಹಲವೆಡೆ ಸುರಿದ ಜೋರು ಮಳೆ: ರಾಜಧಾನಿಯಲ್ಲಿ ಇನ್ನು ಐದು ದಿನ ಮಳೆ ಸಾಧ್ಯತೆ

ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕಳೆದ ಕೆಲ ದಿನಗಳಿಂದ ರಾಜ್ಯ ರಾಜಧಾನಿಯಲ್ಲಿ ಮಳೆ ಸುರಿಯುತ್ತಿದೆ. ಅದೇ ರೀತಿಯಾಗಿ ಇಂದು ಕೂಡ ಬೆಂಗಳೂರಿನ ಹಲವು ನಗರಗಳಲ್ಲಿ ಭಾರೀ ಮಳೆಯಾಗಿದೆ.

Bangalore rain: ಬೆಂಗಳೂರಿನ ಹಲವೆಡೆ ಸುರಿದ ಜೋರು ಮಳೆ: ರಾಜಧಾನಿಯಲ್ಲಿ ಇನ್ನು ಐದು ದಿನ ಮಳೆ ಸಾಧ್ಯತೆ
ಪ್ರಾತಿನಿಧಿಕ ಚಿತ್ರ
Follow us
|

Updated on:May 06, 2023 | 2:27 PM

ಬೆಂಗಳೂರು: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕಳೆದ ಕೆಲ ದಿನಗಳಿಂದ ರಾಜ್ಯ ರಾಜಧಾನಿಯಲ್ಲಿ ಮಳೆ (Rains) ಸುರಿಯುತ್ತಿದೆ. ಅದೇ ರೀತಿಯಾಗಿ ಇಂದು ಕೂಡ ಬೆಂಗಳೂರಿನ ಹಲವು ನಗರಗಳಲ್ಲಿ ಭಾರೀ ಮಳೆಯಾಗಿದೆ. ರಾಜ್ಯಧಾನಿಯಲ್ಲಿ ಇನ್ನು ಐದು ದಿನ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಾಂತಿನಗರ, ಮೆಜೆಸ್ಟಿಕ್,ರಾಜಾಜಿನಗರ, ಜಯನಗರ, ವಿಜಯನಗರ, ಚಂದ್ರಲೇಔಟ್, ನಂದಿನಿ ಲೇಔಟ್, ಬಸವೇಶ್ವರ ನಗರ, ಕಾಮಾಕ್ಷಿಪಾಳ್ಯ, ನಾಗರಬಾವಿ, ಬನಶಂಕರಿ, ಬಸವನಗುಡಿ, ಶ್ರೀನಗರ, ಗಿರಿನಗರ, ಹೆಬ್ಬಾಳ, ಆರ್.ಟ.ನಗರ, ಜಯನಗರ, ಮತ್ತಿಕೆರೆ ಸೇರಿದಂತೆ ಹಲವೆಡೆ ಮಳೆ ಸುರಿದೆ. ಮಳೆಯಿಂದಾಗಿ ವಾಹನ ಸವಾರರ ಮೇಲೆ ಪರಿಣಾಮ ಬೀರಿದ್ದು, ಕೆಲವೆಡೆ ಟ್ರಾಫಿಕ್​ ಜಾಮ್​ ಕೂಡ ಉಂಟಾಗಿದೆ. ಹಾಗಾಗಿ ವಾಹನ ಸವಾರರು ಮಳೆರಾಯನಿಗೆ ಹಿಡಿ ಶಾಪ ಹಾಕಿದ್ದಾರೆ.

ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ, ಬೆಂಗಳೂರಿಗೆ ಮಳೆ ಅಲರ್ಟ್ ಘೋಷಿಸಲಾಗಿದೆ. ದಕ್ಷಣ ಒಳನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ರಾಮಾನಗರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಅಧಿಕ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Bangalore rain: ಬೆಂಗಳೂರಿನಲ್ಲಿ ಇಂದು ಕೂಡ ಮುಂದುವರೆದ ಮಳೆ: ನಗರದ ಹಲವೆಡೆ ಸಾಧಾರಣ ವರ್ಷಧಾರೆ

ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಗದಗ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ಜಿಲ್ಲೆಗಳಿಗರ ಮಳೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಆಗಲಿದೆ.

ಐಎಂಡಿ ಅಧಿಕಾರಿಗಳ ಪ್ರಕಾರ, ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸೃಷ್ಟಿಯಾಗಿರುವ ಸುಳಿಗಾಳಿಯ ಪರಿಣಾಮ ರಾಜ್ಯದಲ್ಲಿ ಮಳೆಯಾಗುತ್ತಿದೆ. ನಗರದಲ್ಲಿ ಮುಂದಿನ ಕೆಲವು ದಿನಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ನಗರದಲ್ಲಿ ಗರಿಷ್ಠ ತಾಪಮಾನವು 32-33 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:17 pm, Sat, 6 May 23

ಹಲವು ದಿನಗಳ ಬಳಿಕ ದರ್ಶನ್ ಮುಖದಲ್ಲಿ ನಗು; ಜಾಮೀನು ಸಿಗುವ ಮುನ್ಸೂಚನೆಯೇ?
ಹಲವು ದಿನಗಳ ಬಳಿಕ ದರ್ಶನ್ ಮುಖದಲ್ಲಿ ನಗು; ಜಾಮೀನು ಸಿಗುವ ಮುನ್ಸೂಚನೆಯೇ?
ತಪ್ಪಿದ ಭಾರೀ ದುರಂತ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ
ತಪ್ಪಿದ ಭಾರೀ ದುರಂತ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ
ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಹೊಸ ಕೇಸ್ ಬಗ್ಗೆ ದರ್ಶನ್ ಜತೆ ಲಾಯರ್ ಚರ್ಚೆ; ಮತ್ತೆ ಶುರುವಾಗಲಿದೆ ವಿಚಾರಣೆ
ಹೊಸ ಕೇಸ್ ಬಗ್ಗೆ ದರ್ಶನ್ ಜತೆ ಲಾಯರ್ ಚರ್ಚೆ; ಮತ್ತೆ ಶುರುವಾಗಲಿದೆ ವಿಚಾರಣೆ
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು