AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಜೆಸ್ಟಿಕ್​ನಲ್ಲಿ ತನ್ನ 2 ವರ್ಷದ ಮಗುವನ್ನೇ ಮಾರಿದಳಾ ತಾಯಿ? ತಂದೆಯಿಂದಲೇ ಗಂಭೀರ ಆರೋಪ

ಗಂಡನೊಂದಿಗೆ ಜಗಳವಾಡಿ ಮನೆಬಿಟ್ಟ ಪತ್ನಿ, ತನ್ನ ಎರಡೂವರೆ ವರ್ಷದ ಮಗುವನ್ನು 5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾಳೆಂದು ಪತಿ ಗಂಭೀರ ಆರೋಪ ಮಾಡಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಇಬ್ಬರು ಮಕ್ಕಳನ್ನು ಅನಾಥವಾಗಿ ಬಿಟ್ಟು ಮಗುವನ್ನು ಮಾರಿದ ದೂರು ದಾಖಲಾಗಿದ್ದರೂ, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪತ್ನಿಯ ಪೋಷಕರು ಈ ಕೃತ್ಯಕ್ಕೆ ಸಾಥ್ ನೀಡಿದ್ದಾರೆ ಎನ್ನಲಾಗಿದ್ದು, ತನಿಖೆ ಮುಂದುವರಿದಿದೆ.

ಮೆಜೆಸ್ಟಿಕ್​ನಲ್ಲಿ ತನ್ನ 2 ವರ್ಷದ ಮಗುವನ್ನೇ ಮಾರಿದಳಾ ತಾಯಿ? ತಂದೆಯಿಂದಲೇ ಗಂಭೀರ ಆರೋಪ
ಸಾಂದರ್ಭಿಕ ಚಿತ್ರImage Credit source: google Gemini
ರಾಚಪ್ಪಾಜಿ ನಾಯ್ಕ್
| Edited By: |

Updated on:May 04, 2026 | 10:53 AM

Share

ಬೆಂಗಳೂರು, ಮೇ 04: ಗಂಡ ಹೆಂಡತಿಯ ಜಗಳದ ನಡುವೆ ಕೂಸು ಬಡವಾಯ್ತು ಎನ್ನುವ ಹಾಗೆ ಪತಿ ಪತ್ನಿ ಕಲಹದಲ್ಲಿ ತಾಯಿಯೇ ಮಗು ಮಾರಾಟ (Child Sale) ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಪತಿಯೊಂದಿಗೆ ಜಗಳ ಆಡಿ ಮೂರು ಮಕ್ಕಳೊಂದಿಗೆ ಮನೆ ಬಿಟ್ಟ ಪತ್ನಿ,ಇಬ್ಬರು ಮಕ್ಕಳನ್ನ ಮೆಜೆಸ್ಟಿಕ್​ನಲ್ಲಿ ಬಿಟ್ಟು ಇನ್ನೊಂದು ಮಗುವನ್ನು ಮಾರಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ.

ಮೂವರು ಮಕ್ಕಳ ಜೊತೆ ಮನೆ ಬಿಟ್ಟ ಪತ್ನಿ

ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸ ಮಾಡ್ತಿದ್ದ ರವಿ ಬಾಬು ದಂಪತಿ ಮದುವೆಯಾಗಿ 16 ವರ್ಷಗಳಾಗಿತ್ತು. ಆಗಾಗ ಗಂಡ ಹೆಂಡತಿ ನಡುವೆ ನಡೆಯುತ್ತಿದ್ದ ಜಗಳದ ಕಾರಣಕ್ಕೆ ಗಂಡನ ಮೇಲಿನ ಕೋಪದಿಂದ ಹೆಂಡತಿ ಮೂರು ಮಕ್ಕಳೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದಳು.

ಮಕ್ಕಳೊಂದಿಗೆ ಮನೆ ಬಿಟ್ಟ ಪತ್ನಿ ಇಬ್ಬರು ಮಕ್ಕಳನ್ನು ಮೆಜೆಸ್ಟಿಕ್​ನಲ್ಲಿ ಬಿಟ್ಟು ಇನ್ನೊಂದು ಮಗುವನ್ನು ಕರೆದೊಯ್ದಿದ್ದಳು ಎನ್ನಲಾಗಿದೆ. ಮೆಜೆಸ್ಟಿಕ್​ನಲ್ಲಿ ಬಿಟ್ಟಿದ್ದ ಇಬ್ಬರು ಮಕ್ಕಳು ಹೇಗೋ ಮನೆ ಹುಡುಕಿಕೊಂಡು ತಂದೆ ಬಳಿಗೆ ವಾಪಾಸ್ ಬಂದಿದ್ದಾರೆ. ಆದರೆ ಪತ್ನಿ ಕರೆದೊಯ್ದಿದ್ದ ಎರಡೂವರೆ ವರ್ಷದ ಗಂಡು ಮಗುವನ್ನು ಆಕೆಯೇ 5 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆಂದು ಪತಿ ರವಿ ಬಾಬು ಆರೋಪಿಸಿದ್ದಾರೆ. ತನ್ನ ಪತ್ನಿ ಜಗಳದ ನಂತರ ಬೇರೊಬ್ಬ ಮಹಿಳೆಯ ಮಾತು ಕೇಳಿ ಈ ರೀತಿ ಮಾಡಿದ್ದಾಳೆ ಎಂದು ರವಿ ಆರೋಪಿಸಿದ್ದಾರೆ.

ಮಗು ಮಾರಾಟಕ್ಕೆ ಕುಟುಂಬದವರ ಸಾಥ್!

ಮಗುವನ್ನ ಮಾರಾಟ ಮಾಡುವ ಬಗ್ಗೆ ಪತ್ನಿ ಎಲ್ಲರಿಗೂ ಹೇಳಿಕೊಂಡಿದ್ದಾಳೆ ಎಂದು ಆರೋಪಿಸಿರುವ ರವಿ ಬಾಬು, ಪತ್ನಿಯ ಪೋಷಕರು ಕೂಡ ಮಗು ಮಾರಾಟಕ್ಕೆ ಸಾಥ್ ನೀಡಿದ್ದಾರೆ ಎಂದು ಹೇಳಿದ್ದಾರೆ. ತನ್ನಿಬ್ಬರು ಮಕ್ಕಳು ಮನೆಗೆ ವಾಪಸಾಗುವ ಮುನ್ನ ಅವರ ಅಜ್ಜಿ ಹಾಗೂ ಮಗು ಮಾರಾಟಕ್ಕೆ ಸಹಾಯ ಮಾಡಿದ ಮಹಿಳೆ ಬಳಿ ನಮ್ಮ ಅಮ್ಮನನ್ನು ಕಳುಹಿಸಿಕೊಡಿ ಎಂದು ಮಕ್ಕಳು ಕೇಳಿಕೊಂಟಿದ್ದರು. ಆದರೂ ಅವರಿಬ್ಬರನ್ನು ಗದರಿಸಿ ಕಳುಹಿಸಿದ್ದಾರೆ ಎಂದು ರವಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ ಗಂಡನ ಎರಡನೇ ಮದುವೆ ತಡೆಯಲು ಮಂಟಪಕ್ಕೆ ಗರ್ಭಿಣಿ ಪತ್ನಿ ಎಂಟ್ರಿ! ಮುಂದೇನಾಯ್ತು ಗೊತ್ತಾ?

ಪೊಲೀಸರ ನಿರ್ಲಕ್ಷ್ಯ

ಅದಲ್ಲದೆ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಪತಿ, ಮಗುವಿನ ಮಾರಾಟವಾಗಿದೆ ಎಂದು ಹೇಳಿದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂಬುದು ಆತನ ಆರೋಪ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:39 am, Mon, 4 May 26

Follow Us
Rachappaji Naik S
Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More