Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕನ್ನಡ ಮಾತನಾಡಿ ಎಂದಿದ್ದಕ್ಕೆ ಬಾತ್ರೂಮ್​ ಸ್ಪಚ್ಚಗೊಳಿಸದೇ ಹೋದ ಖಾಸಗಿ​ ಕಂಪನಿ ಸಿಬ್ಬಂದಿ

ಕನ್ನಡಲ್ಲಿ ಮಾತನಾಡಿ ಎಂದು ಕೇಳಿಕೊಂಡಿದ್ದಕ್ಕೆ ಅರ್ಬನ್​ ಎಂಬ ಕಂಪನಿಯ ಸಿಬ್ಬಂದಿ ಬಾತ್ರೂಮ್​ ಸ್ಪಚ್ಚಗೊಳಿಸದೇ ಬಿಟ್ಟುಹೋಗಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ನಿವಾಸಿಯೊಬ್ಬರು ಅರ್ಬನ್​ ಕಂಪನಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಕನ್ನಡ ಮಾತನಾಡಿ ಎಂದಿದ್ದಕ್ಕೆ ಬಾತ್ರೂಮ್​ ಸ್ಪಚ್ಚಗೊಳಿಸದೇ ಹೋದ ಖಾಸಗಿ​ ಕಂಪನಿ ಸಿಬ್ಬಂದಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Mar 27, 2025 | 11:45 AM

ಬೆಂಗಳೂರು, ಮಾರ್ಚ್​ 27: ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿದ್ದ ಫೋನ್‌ ಪೇ (Phone Pay) ವಿರುದ್ಧ ಇತ್ತೀಚೆಗೆ ಬಾಯ್ಕಾಟ್​ ಅಭಿಯಾನ ಮಾಡಲಾಗಿತ್ತು. ಈ ಘಟನೆ ಕರ್ನಾಟಕದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ರೊಚ್ಚಿಗೆದಿದ್ದ ಕನ್ನಡಿಗರು ಬಾಯ್ಕಾಟ್ ಮುಖಾಂತರ ಫೋನ್‌ ಪೇ ಸಿಇಒಗೆ ಬುದ್ಧಿ ಕಲಿಸಲು ಮುಂದಾಗಿದ್ದರು. ಇದೀಗ ನಗರದಲ್ಲಿ ಇಂತಹದೇ ಒಂದು ಘಟನೆ ಬೆಳಕಿಗೆ ಬಂದಿದೆ. ಕನ್ನಡಲ್ಲಿ ಮಾತನಾಡಿ ಎಂದು ಕೇಳಿಕೊಂಡಿದ್ದಕ್ಕೆ ಅರ್ಬನ್​ ಎಂಬ ಕಂಪನಿಯ (Urban Company) ಸಿಬ್ಬಂದಿ ಬಾತ್ರೂಮ್​ ಸ್ಪಚ್ಚಗೊಳಿಸದೇ ಬಿಟ್ಟುಹೋಗಿರುವಂತಹ ಘಟನೆ ನಡೆದಿದೆ. ಸದ್ಯ ಈ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ಹಲ್ ಚಲ್​ ಎಬ್ಬಿಸಿದೆ.

ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅರ್ಬನ್ ಕಂಪನಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾತ್ರೂಮ್​ ಸ್ಪಚ್ಚಗೊಳಿಸಲು ಬುಕ್​ ಮಾಡಿದ್ದ ಅವರು, ಇಬ್ಬರು ಕೆಲಸಗಾರರು ಆಗಮಿಸಿದ್ದಾರೆ. ಹೀಗೆ ಬಂದ ಇಬ್ಬರು ಕೆಲಸಗಾರರ ಪೈಕಿ ಓರ್ವ ಅರ್ಥವಾಗದ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದ್ದಾರೆ. ಇದು ಆ ನಿವಾಸಿಗೆ ಇರುಸುಮುರುಸು ತಂದಿದೆ. ಹೀಗಾಗಿ ಕನ್ನಡದಲ್ಲಿ ಮಾತನಾಡುವಂತೆ ಕೇಳಿಕೊಂಡಿದ್ದಾರೆ. ಆದರೂ ಕೆಲಸಗಾರರು ಅವರಿಗೆ ಬಂದ ಭಾಷೆಯಲ್ಲೇ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ
Image
ಬೆಂಗಳೂರು ಬುಕಿಂಗ್ ಮಾಫಿಯಾ: ಟಿಪ್ಸ್ ಹೆಸರಲ್ಲಿ ದುಪ್ಪಟ್ಟು ಹಣ ವಸೂಲಿ
Image
ರಸ್ತೆ, ಮೆಟ್ರೋ ಕಾಮಗಾರಿ ಕಾರಣ ಬೆಂಗಳೂರಿನ ಹಲವೆಡೆ ಸಂಚಾರ ದಟ್ಟಣೆ
Image
ಆಲೂಗಡ್ಡೆ ದರ ತೀವ್ರ ಕುಸಿತ: ಕೋಲ್ಡ್ ಸ್ಟೋರೇಜ್​ಗೆ ಭಾರಿ ಡಿಮ್ಯಾಂಡ್
Image
ಕರ್ನಾಟಕದ ಕರಾವಳಿಯ ಎಲ್ಲಾ ಜಿಲ್ಲೆಗಳು ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಮಳೆ

ಇದನ್ನೂ ಓದಿ: ಬೆಂಗಳೂರು ಬುಕಿಂಗ್ ಮಾಫಿಯಾ: ಟಿಪ್ಸ್ ಹೆಸರಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಕ್ಯಾಬ್​ಗಳು

ಈ ವೇಳೆ ಕೆಲಸಗಾರರು ಕನ್ನಡ ಮಾತನಾಡಬಲ್ಲ ಮೇಲ್ವಿಚಾರಕರಿಗೆ ಕರೆ ಮಾಡಿದ್ದಾರೆ. ನಿವಾಸಿ ಹೇಳುವ ಪ್ರಕಾರ, ನಾನು ಕನ್ನಡದಲ್ಲಿ ಮಾತ್ರ ಮಾತನಾಡುವಂತೆ ಒತ್ತಾಯಿಸಿದ್ದು, ಇದರಿಂದ ಅವರ ಕೆಲಸಕ್ಕೆ ಅಡ್ಡಿಯುಂಟಾಗಿ ಎಂದು ಕೆಲಸಗಾರರು ಹೇಳಿದ್ದಾರೆ. ಆಗ ಬುಕ್​ ಮಾಡಿದ್ದ ಬಾತ್ರೂಮ್​ ಸ್ಪಚ್ಚಗೊಳಿಸುವ ಕೆಲಸವನ್ನು ಹಾಗೇ ಬಿಟ್ಟುಹೋಗಿದ್ದಾರೆ ಎಂದು ನಿವಾಸಿ ಹೇಳಿದ್ದಾರೆ.

ಇಲ್ಲಿ ಆಶ್ಚರ್ಯಕರ ವಿಷಯವೆಂದರೆ ಗ್ರಾಹಕರು ಕನ್ನಡದಲ್ಲಿ ಮಾತ್ರ ಮಾತನಾಡಿದರೆ ಅವರ ಕೆಲಸಗಾರರಿಗೆ ಕಷ್ಟವಾಗುತ್ತದೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ನಿವಾಸಿ ನನ್ನ ಬಾತ್ರೂಮ್​ ಬಗ್ಗೆ ಕವಿತೆ ಬರೆಯಲು ಹೇಳಿಲ್ಲ. ಏನು ಸಮಸ್ಯೆ ಎಂದು ಹೇಳಿದ್ದೇನೆ. ಸ್ವಚ್ಛಗೊಳಿಸಿ ಹೊರಡಿ ಎಂದಿದ್ದಾರೆ.

ಬಳಿಕ ಅವರು ಅರ್ಬನ್ ಕಂಪನಿಯ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದ್ದು, ಅವರು ಕೂಡ ನನಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ. ನನ್ನ ಭಾಷೆಯಲ್ಲಿ ಅವರು ಮಾತನಾಡ ಕಾರಣ, ನಾನು ಮುಂದೆ ಮಾತನಾಡಲು ಹೋಗಲಿಲ್ಲ. ಸ್ವಲ್ಪ ಸಮಯದ ನಂತರ, ಅವರು ಬುಕಿಂಗ್ ಅನ್ನು ರದ್ದುಗೊಳಿಸಿ ಹೊರಟುಹೋದರು ಎಂದು ನಿವಾಸಿ ತಿಳಿಸಿದ್ದಾರೆ.

ಇದನ್ನೂ ಓದಿ: Karnataka Weather: ಕರ್ನಾಟಕದ ಕರಾವಳಿಯ ಎಲ್ಲಾ ಜಿಲ್ಲೆಗಳು ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಮಳೆ

ಈ ಘಟನೆಯಲ್ಲಿ ನನಗೆ ಇನ್ನೂ ಅರ್ಥವಾಗದ ಸಂಗತಿಯೆಂದರೆ, ಒಂದು ಸಣ್ಣ ಕೆಲಸಕ್ಕೆ ಭಾಷೆ ಏಕೆ ಅಡ್ಡಿಯಾಗಬೇಕು? ಒಂದು ವೇಳೆ ಮಾತನಾಡಲೇಬೇಕೆಂದರೆ ಕರ್ನಾಟಕದಲ್ಲಿ ಕನ್ನಡ ಭಾಷೆ ಮೊದಲ ಆಯ್ಕೆಯಾಗಿರಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:44 am, Thu, 27 March 25

ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ