ಲಾಕ್​ಡೌನ್​ ಇನ್ನೂ ಜಾರಿಯಲ್ಲಿದೆ, ಕೊರೊನಾ ಹಾವಳಿ ಮುಗಿದಿಲ್ಲ: ಬೆಂಗಳೂರಿಗೆ ವಾಪಸಾಗುವವರಿಗೆ ಎಚ್ಚರಿಕೆಯ ಗಂಟೆ

ಆದರೆ ರಾಜಧಾನಿ ಬೆಂಗಳೂರಿನಲ್ಲಿ ಕಂಡಬರುತ್ತಿರುವ ಚಿತ್ರಣವೇ ಬೇರೆಯಾಗಿದೆ. 1947ರ ಬಳಿಕ ವ್ಯಕ್ತಿಗತ ಸ್ವಾತಂತ್ರ್ಯಕ್ಕಾಗಿ ತಹತಹಿಸುತ್ತಿರುವವರಂತೆ ಜನ ಮನೆಗಳಿಂದ ಹೊರಬಂದು ಸ್ಚಚ್ಛಂದವಾಗಿ ವಿಹರಿಸಲು ಆರಂಭಿಸಿದ್ದಾರೆ. ವಾಹನ ಸಂಚಾರ ಜೋರಾಗಿಯೇ ಇದೆ. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅನ್ ಲಾಕ್ ಸುಳಿವು ಕೊಟ್ಟ ಬೆನ್ನಲ್ಲೇ ಇಂದು ಬೆಳಗ್ಗೆಯೇ ಜನರ ಓಡಾಟ ಹೆಚ್ಚಾಗಿದೆ. ಸಾಮಾನ್ಯ ದಿನದಂತೆ ಬೇಕಾಬಿಟ್ಟಿ ಓಡಾಟ ನಡೆದಿದೆ. ಬೆಂಗಳೂರಿನಲ್ಲಿ ಸಂಪೂರ್ಣ ಅನ್ ಲಾಕ್ ಆಗಿರುವಂತೆ ಜನ ವರ್ತಿಸುತ್ತಿದ್ದಾರೆ...

ಲಾಕ್​ಡೌನ್​ ಇನ್ನೂ ಜಾರಿಯಲ್ಲಿದೆ, ಕೊರೊನಾ ಹಾವಳಿ ಮುಗಿದಿಲ್ಲ: ಬೆಂಗಳೂರಿಗೆ ವಾಪಸಾಗುವವರಿಗೆ ಎಚ್ಚರಿಕೆಯ ಗಂಟೆ
ಲಾಕ್​ಡೌನ್​ ಇನ್ನೂ ಜಾರಿಯಲ್ಲಿದೆ, ಕೊರೊನಾ ಹಾವಳಿ ಮುಗಿದಿಲ್ಲ: ಬೆಂಗಳೂರಿಗೆ ವಾಪಸಾಗುವವರಿಗೆ BBMP ಎಚ್ಚರಿಕೆಯ ಗಂಟೆ

ಬೆಂಗಳೂರು: ಆಕ್ಚುಯಲಿ ಬೆಂಗಳೂರಿನಲ್ಲಿ ಕೊರೊನಾ ಹಾವಳಿ ಮುಗಿದಿಲ್ಲ; ಲಾಕ್​ಡೌನ್​ ಇನ್ನೂ ಜಾರಿಯಲ್ಲಿದೆ. ಯಾವುದೇ ಕ್ಷಣ ಜನರ ಮೇಲೆ ಅಟ್ಯಾಕ್ ಮಾಡಲು ಕೊರೊನಾ ಕ್ರಿಮಿ ಹೊಂಚಿಹಾಕುತ್ತಾ ಕುಳಿತಿದೆ. ಆದರೆ ಜನರೇ ಯಾಮಾರುತ್ತಿರುವುದು. ಲಾಕ್​ಡೌನ್​ ತೆರವುಗೊಳಿಸಲು ಇನ್ನೂ ಒಂದು ವಾರವಿದೆ. ಈ ಮಧ್ಯೆ, ಬೆಂಗಳೂರಿನಲ್ಲಿ ಇಂದು 2,019 ಕೊವಿಡ್ ಕೇಸ್ ಪತ್ತೆ ಸಾಧ್ಯತೆಯಿದೆ. ಸಮಾಧಾನಕರ ಸಂಗತಿಯೆಂದ್ರೆ ಬೆಂಗಳೂರಿನಲ್ಲಿ ದಿನೇದಿನೆ ಕೊವಿಡ್ ಕೇಸ್‌ಗಳ ಸಂಖ್ಯೆ ಇಳಿಮುಖವಾಗುತ್ತಿವೆ.

ಆದರೆ ರಾಜಧಾನಿಯಲ್ಲಿ ಕಂಡಬರುತ್ತಿರುವ ಚಿತ್ರಣವೇ ಬೇರೆಯಾಗಿದೆ. 1947ರ ಬಳಿಕ ವ್ಯಕ್ತಿಗತ ಸ್ವಾತಂತ್ರ್ಯಕ್ಕಾಗಿ ತಹತಹಿಸುತ್ತಿರುವವರಂತೆ ಜನ ಮನೆಗಳಿಂದ ಹೊರಬಂದು ಸ್ಚಚ್ಛಂದವಾಗಿ ವಿಹರಿಸಲು ಆರಂಭಿಸಿದ್ದಾರೆ. ವಾಹನ ಸಂಚಾರ ಜೋರಾಗಿಯೇ ಇದೆ. ಖುದ್ದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಅನ್ ಲಾಕ್ ಸುಳಿವು ಕೊಟ್ಟ ಬೆನ್ನಲ್ಲೇ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಜನರ ಓಡಾಟ ಹೆಚ್ಚಾಗಿದೆ. ಸಾಮಾನ್ಯ ದಿನದಂತೆ ಜನರ ಬೇಕಾಬಿಟ್ಟಿ ಓಡಾಟ ನಡೆದಿದೆ. ಬೆಂಗಳೂರಿನಲ್ಲಿ ಸಂಪೂರ್ಣ ಅನ್ ಲಾಕ್ ಆಗಿರುವಂತೆ ಜನ ವರ್ತಿಸುತ್ತಿದ್ದಾರೆ.

ಇನ್ನು ಕೊರೊನಾ ಹಾವಳಿಯೆಂದು ಬೆಂಗಳೂರು ಬಿಟ್ಟು ಹೋದ ಜನ ಜೀವನದ ಜರೂರತ್ತುಗಳ ಅರಿವಾದವಂತೆ… ‘ಕರ್ಫ್ಯೂ ಲಾಕ್ಡೌನ್ ಮುಗಿಯುತ್ತಾ ಬಂದಿದೆ. ಕೊರೊನಾ ಕಾಟ ತಹಬಂದಿಗೆ ಬಂದಿದೆ’ ಎಂದು ಪರಿಭಾವಿಸಿ ಒಂದೇ ಸಮನೆ ಎಲ್ಲ ದಿಕ್ಕುಗಳಿಂದ ರಾಜಧಾನಿಗೆ ಮರಳುತ್ತಿದ್ದಾರೆ. ಏಪ್ರಿಲ್ 27 ರಿಂದ ಮೇ 7 ರ ತನಕ ಅಂದಾಜು 5-8 ಲಕ್ಷ ಮಂದಿ ಬೆಂಗಳೂರಿನಿಂದ‌ ತಮ್ಮೂರುಗಳಿಗೆ ಹೋಗಿದ್ದರು. ಆದರೆ ಹೀಗೆ ಬೆಂಗಳೂರನ್ನು ಬಿಟ್ಟವರಿಂದಲೇ ಈಗ ಜೂನ್ 14ರ ನಂತರ ಬೆಂಗಳೂರಿಗೆ ಕಂಟಕವಾಗುವ ಲಕ್ಷಣಗಳಿವೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಎಚ್ಚರಿಕೆಯ ಗಂಟೆ:

ಲಾಕ್ಡೌನ್ ಮುಕ್ತಾಯವಾಗ್ತಿರೋ ನೆಪವೊಡ್ಡಿ ರೈಲು, ಬಸ್, ಸ್ವಂತ ವಾಹನಗಳ ಮುಖಾಂತರ ಬೆಂಗಳೂರಿಗೆ ಜನ ಅದಾಗಲೇ ವಾಪಸಾಗುತ್ತಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ದರೂ, ಮತ್ತೆ ಏರಿಕೆಯಾಗುವ ಆತಂಕ ನಿರ್ಮಾಣವಾಗಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಬೆಂಗಳೂರಿಗಿಂತ ನಾಲ್ಕು ಪಟ್ಟು ಪಾಸಿಟಿವಿಟಿ ರೇಟ್ ಹೆಚ್ಚಿದೆ ಎಂಬುದು ಗಮನಾರ್ಹ. ಕೋಲಾರ, ತುಮಕೂರು, ಮೈಸೂರು, ಹಾಸನ ಈ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಿದೆ. ಅನ್ ಲಾಕ್ ಆದಮೇಲೆ ಪಕ್ಕದ ಈ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚು ಇರೋದು ಮೈಸೂರು, ಮಂಡ್ಯ, ಹಾಸನ, ತುಮಕೂರು ಜಿಲ್ಲೆಯಲ್ಲಿ. ನಿನ್ನೆ ಮೈಸೂರು ಜಿಲ್ಲೆಯಲ್ಲಿ 1237 ಸೋಂಕಿತರು ಪತ್ತೆಯಾಗಿದ್ದರೆ ತುಮಕೂರು 698 ಮಂದಿ, ಹಾಸನ 655 ಮತ್ತು ಮಂಡ್ಯ ಜಿಲ್ಲೆಯಲ್ಲಿ 571 ಸೋಂಕಿತರು ಪತ್ತೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಅತಿ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.  ಆದರೆ ಕೊರೊನಾ ಕಡಿಮೆಯಾಗಿದೆ ಎಂದು ನಿರ್ಲಕ್ಷ್ಯ ಮಾಡಬೇಡಿ; ಥೈಲ್ಯಾಂಡ್, ಯುಕೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿರುವುದು ಎಚ್ಚರಿಕೆಯ ಗಂಟೆಯಾಗಬೇಕಿದೆ.

(coronavirus persists in bengaluru but people return to karnataka capital city traffic in bengaluru city more)

ಇದನ್ನು ಓದಿ: 
ರಫ್ತು ಮಾಡುವ ಉದ್ಯಮಗಳಿಗೆ ಗುರುವಾರದಿಂದ ಅನುಮತಿ; ಸಿಎಂ ಬಿ.ಎಸ್.ಯಡಿಯೂರಪ್ಪ