ವಿಧಾನ ಮಂಡಲ ವಿಶೇಷ ಅಧಿವೇಶನ: ಮೊದಲ ದಿನವೇ ಪರಿಷತ್​​ನಲ್ಲಿ ‘ವಂದೇ ಮಾತರಂ’ ಕದನ

ವಿಧಾನ ಮಂಡಲ ವಿಶೇಷ ಅಧಿವೇಶನದ ಮೊದಲ ದಿನವೇ ವಿಧಾನ ಪರಿಷತ್ತಿನಲ್ಲಿ 'ವಂದೇ ಮಾತರಂ' ಗೀತೆಯ ಗಾಯನವನ್ನು ಎರಡು ಚರಣಗಳಿಗೆ ಮೊಟಕುಗೊಳಿಸಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಮುಗಿಬಿದ್ದ ಘಟನೆ ನಡೆದಿದೆ. ವಂದೇ ಮಾತರಂ ಪೂರ್ಣ ಹಾಡದ ಸರ್ಕಾರಕ್ಕೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದ್ದರೆ, ಸಂವಿಧಾನ ಪೀಠಿಕೆ ಓದದ ಬಿಜೆಪಿ ಸದಸ್ಯರಿಗೆ ಧಿಕ್ಕಾರ ಎಂದು ಕಾಂಗ್ರೆಸಿಗರ ಪ್ರತಿಘೋಷಣೆಗಳು ಕೇಳಿಬಂದಿವೆ.

ವಿಧಾನ ಮಂಡಲ ವಿಶೇಷ ಅಧಿವೇಶನ: ಮೊದಲ ದಿನವೇ ಪರಿಷತ್​​ನಲ್ಲಿ ವಂದೇ ಮಾತರಂ ಕದನ
ಪರಿಷತ್​​ನಲ್ಲಿ 'ವಂದೇ ಮಾತರಂ' ಕದನ
Image Credit source: webcast.gov.in
Edited By:

Updated on: Sep 21, 2026 | 12:52 PM

ಬೆಂಗಳೂರು, ಸೆಪ್ಟೆಂಬರ್​​ 21: ವಿಧಾನ ಮಂಡಲ ವಿಶೇಷ ಅಧಿವೇಶನದ ಮೊದಲ ದಿನವೇ ವಂದೇ ಮಾತರಂ ಗೀತೆಯ ಗಾಯನ ವಿಚಾರವಾಗಿ ವಿಧಾನ ಪರಿಷತ್​​ ರಣರಂಗವಾಗಿ ಮಾರ್ಪಟ್ಟ ಪ್ರಸಂಗ ನಡೆದಿದೆ. ವಂದೇ ಮಾತರಂ 2 ಚರಣ ಮಾತ್ರ ಗಾಯನ ಮಾಡಿದ್ದಕ್ಕೆ ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, 2 ಚರಣ ಮುಕ್ತಾಯದ ಬಳಿಕವೂ ಬಿಜೆಪಿ ಸದಸ್ಯರು ಪೂರ್ಣ ಗೀತೆಯನ್ನು ಹಾಡಿದ್ದಾರೆ. ಈ ಮಧ್ಯೆ ತಕ್ಷಣವೇ ಸಭಾಧ್ಯಕ್ಷರಿಂದ ಸಂವಿಧಾನ ಪೀಠಿಕೆ ಬೋಧನೆ ನಡೆದಿದೆ.

ಪರಸ್ಪರ ಧಿಕ್ಕಾರ ಕೂಗಿದ ಬಿಜೆಪಿ-ಕಾಂಗ್ರೆಸಿಗರು

ವಂದೇ ಮಾತರಂ ಪೂರ್ಣ ಹಾಡದ ಸರ್ಕಾರಕ್ಕೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದ್ದು, ಸಂವಿಧಾನ ಪೀಠಿಕೆ ಓದದ ಬಿಜೆಪಿ ಸದಸ್ಯರಿಗೆ ಧಿಕ್ಕಾರ ಎಂದು ಕಾಂಗ್ರೆಸಿಗರ ಪ್ರತಿಘೋಷಣೆಗಳು ಪರಿಷತ್​​ನಲ್ಲಿ ಕೇಳಿಬಂದಿದೆ. ಇದುವರೆಗೂ ಪರಿಷತ್​ನಲ್ಲಿ ಪೂರ್ಣ ವಂದೇ ಮಾತರಂ ಹಾಡಲಾಗುತ್ತಿತ್ತು. ಈಗೇಕೆ 2 ಪ್ಯಾರಾಗೆ ಮುಕ್ತಾಯಗೊಳಿಸಿದ್ರಿ ಎಂದು BJP ಸದಸ್ಯರು ಪ್ರಶ್ನಿಸಿದ್ದು, ಸರ್ಕಾರ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ ಮಾಡಿದೆ ಎಂದು ಸಭಾ ನಾಯಕ ಯತೀಂದ್ರ ಉತ್ತರಿಸಿದ್ದಾರೆ. ಅದನ್ನು ಹೇಳಲು ನೀವು ಯಾರು ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದ ಪ್​ರಸಂಗ ನಡೆದಿದೆ.

🔴 Live | karnataka Legislative Council Special Session: ವಿಧಾನಪರಿಷತ್ ವಿಶೇಷ ಅಧಿವೇಶನ ನೇರಪ್ರಸಾರ | #tv9d

ಇದನ್ನೂ ಓದಿ: ವಿಶೇಷ ಅಧಿವೇಶನವೋ, ಮುಂದುವರಿದ ಅಧಿವೇಶನವೋ? ಸದನದಲ್ಲಿ ಅಶೋಕ್ – ಸಿಎಂ ಡಿಕೆಶಿ ವಾಕ್ಸಮರ

‘ಸಂವಿಧಾನದ ಪೀಠವೋ, ಸರ್ಕಾರದ ಹಂಗಿನ ಪೀಠವೋ?’

ಸಭಾಪತಿಗಳ ಕೈನಲ್ಲಿ ಏನೂ ಇಲ್ಲ ಎಂದು ಸಭಾ ನಾಯಕ ಯತೀಂದ್ರ ಅವರು ಹೇಳಿದ್ದಾರೆ. ಹಾಗಿದ್ದರೆ ಇದು ಸಂವಿಧಾನದ ಪೀಠವೋ, ಸರ್ಕಾರದ ಹಂಗಿನ ಪೀಠವೋ? ಎಂದು ಸಭಾಪತಿಗಳನ್ನೇ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ. ಯತೀಂದ್ರಗೆ ಛೀಮಾರಿ ಹಾಕಿ ಎಂದು ಛಲವಾದಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚಿಸಿ ಎಂದು ಡಿಸಿಎಂ ಮನವಿ ಮಾಡಿದರೂ ಗದ್ದಲ ಮಾತ್ರ ಮುಂದುವರಿದಿದೆ. ಇದು ಇಂಡಿಯನ್ ಕಾಂಗ್ರೆಸ್ ಅಲ್ಲ, ಇಟಾಲಿಯನ್ ಕಾಂಗ್ರೆಸ್. ಹಾಗಾಗಿ ವಂದೇ ಮಾತರಂ ತುಂಡರಿಸಿದ್ದೀರಿ ಎಂದು ಸಿ.ಟಿ.ರವಿ ಕಿಡಿ ಕಾರಿದ್ದು, ತೀವ್ರ ಗದ್ದಲದ ಹಿನ್ನೆಲೆ ಕಲಾಪವನ್ನು 10 ನಿಮಿಷಗಳ ಕಾಲ ಕಲಾಪವನ್ನು ಸಭಾಪತಿಗಳು ಮುಂದೂಡಬೇಕಾಯಿತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us