AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಟು ಚೆನ್ನೈ ಜಸ್ಟ್ 73 ನಿಮಿಷ, ಹೈದರಾಬಾದ್‌ಗೆ 2 ಗಂಟೆ: ದೇಶದ 7 ಹೊಸ ಬುಲೆಟ್ ಟ್ರೈನ್ ಮಾರ್ಗಗಳ ಕಂಪ್ಲೀಟ್ ಟ್ರಾವೆಲ್ ಟೈಮ್ ಇಲ್ಲಿದೆ

ಕೇಂದ್ರ ಸರ್ಕಾರವು ಭಾರತದ ಪ್ರಮುಖ ಆರ್ಥಿಕ, ಕೈಗಾರಿಕಾ ಮತ್ತು ಪ್ರವಾಸಿ ಹಬ್‌ಗಳನ್ನು ಸಂಪರ್ಕಿಸಲು 7 ಹೊಸ ಬುಲೆಟ್ ಟ್ರೈನ್ ಕಾರಿಡಾರ್‌ಗಳಿಗೆ ಅನುಮೋದನೆ ನೀಡಿದೆ. ಈ ಹೈ-ಸ್ಪೀಡ್ ರೈಲು ಜಾಲವು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. ಪ್ರಸ್ತುತ ಮುಂಬೈ-ಅಹಮದಾಬಾದ್ ಕಾರಿಡಾರ್ ಪ್ರಗತಿಯಲ್ಲಿದ್ದು, ದೇಶಾದ್ಯಂತ ಬುಲೆಟ್ ಟ್ರೈನ್ ನೆಟ್‌ವರ್ಕ್‌ಗೆ ಅಡಿಪಾಯ ಹಾಕಲಾಗಿದೆ.

ಬೆಂಗಳೂರು ಟು ಚೆನ್ನೈ ಜಸ್ಟ್ 73 ನಿಮಿಷ, ಹೈದರಾಬಾದ್‌ಗೆ 2 ಗಂಟೆ: ದೇಶದ 7 ಹೊಸ ಬುಲೆಟ್ ಟ್ರೈನ್ ಮಾರ್ಗಗಳ ಕಂಪ್ಲೀಟ್ ಟ್ರಾವೆಲ್ ಟೈಮ್ ಇಲ್ಲಿದೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jun 26, 2026 | 3:24 PM

Share

ಮುಖ್ಯಾಂಶಗಳು

  • ಭಾರತೀಯ ರೈಲ್ವೆ ಇತಿಹಾಸದಲ್ಲೇ ಮಹತ್ತರ ಸಾಧನೆ ಮಾಡಲಿರುವ ಹೈ-ಸ್ಪೀಡ್ ರೈಲು
  • 7 ಹೊಸ ಬುಲೆಟ್ ಟ್ರೈನ್ ಕಾರಿಡಾರ್‌ಗಳ ಸ್ಥಾಪನೆ
  • ಕೇಂದ್ರ ಸರ್ಕಾರವು ಭಾರತದ ಸಾರಿಗೆ ವ್ಯವಸ್ಥೆಯ ಇತಿಹಾಸವನ್ನೇ ಬದಲಾಯಿಸಲಿದೆ

ದೆಹಲಿ, ಜೂ.26: ಭಾರತೀಯ ರೈಲ್ವೆ ಇತಿಹಾಸದಲ್ಲೇ ಮಹತ್ತರ ಸಾಧನೆ ಮಾಡಲಿರುವ ಹೈ-ಸ್ಪೀಡ್ ರೈಲು ಜಾಲ ವಿಸ್ತರಣೆಗೆ ಕೇಂದ್ರ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿದೆ. ದೇಶದ ಪ್ರಮುಖ ಆರ್ಥಿಕ, ಕೈಗಾರಿಕಾ, ತಂತ್ರಜ್ಞಾನ ಮತ್ತು ಪ್ರವಾಸಿ ಹಬ್‌ಗಳನ್ನು ಪರಸ್ಪರ ಜೋಡಿಸುವ ನಿಟ್ಟಿನಲ್ಲಿ 7 ಹೊಸ ಬುಲೆಟ್ ಟ್ರೈನ್ ಕಾರಿಡಾರ್‌ಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ.

ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಯಾದ ಮುಂಬೈ-ಅಹಮದಾಬಾದ್ (508 ಕಿ.ಮೀ) ಕಾರಿಡಾರ್‌ನ ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದೆ. 2017 ರಿಂದ ಈ ಯೋಜನೆಯ ಕೆಲಸಗಳು ಹಂತ-ಹಂತವಾಗಿ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಭಾರತದ ಸಾರಿಗೆ ವ್ಯವಸ್ಥೆಯ ಇತಿಹಾಸವನ್ನೇ ಬದಲಾಯಿಸಲಿದೆ. ಈ ಮೂಲಕ ರಾಷ್ಟ್ರೀಯ ಬುಲೆಟ್ ಟ್ರೈನ್ ನೆಟ್‌ವರ್ಕ್‌ಗೆ ಅಡಿಪಾಯ ಹಾಕಿದೆ.

ಅನುಮೋದನೆ ಪಡೆದ 7 ಹೊಸ ಕಾರಿಡಾರ್‌ಗಳು:

ದೇಶದ ಪಶ್ಚಿಮ, ದಕ್ಷಿಣ, ಉತ್ತರ ಹಾಗೂ ಪೂರ್ವ ಭಾಗಗಳನ್ನು ಒಳಗೊಂಡಂತೆ ಗುರುತಿಸಲಾದ 7 ಪ್ರಮುಖ ಮಾರ್ಗಗಳು ಇಲ್ಲಿವೆ:

ಮುಂಬೈ – ಪುಣೆ

ಪುಣೆ – ಹೈದರಾಬಾದ್

ಹೈದರಾಬಾದ್ – ಬೆಂಗಳೂರು

ಹೈದರಾಬಾದ್ – ಚೆನ್ನೈ

ಚೆನ್ನೈ – ಬೆಂಗಳೂರು

ದೆಹಲಿ – ವಾರಣಾಸಿ

ವಾರಣಾಸಿ – ಸಿಲಿಗುರಿ

ಬದಲಾಗಲಿದೆ ಪ್ರಯಾಣದ ಸಮಯ; ಗಂಟೆಗಳ ಜಾಗದಲ್ಲಿ ನಿಮಿಷಗಳ ಲೆಕ್ಕಾಚಾರ

ಹೊಸ ಬುಲೆಟ್ ಟ್ರೈನ್ ಕಾರಿಡಾರ್‌ಗಳು ಜಾರಿಗೆ ಬಂದ ಬಳಿಕ ಮೆಟ್ರೋ ನಗರಗಳ ನಡುವಿನ ಪ್ರಯಾಣದ ಸಮಯ ಊಹಿಸಲಾಗದಷ್ಟು ತಗ್ಗಲಿದೆ. ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಪ್ರಕಾರ ನಿರೀಕ್ಷಿತ ವಿವರಗಳು ಹೀಗಿವೆ.

ಬೆಂಗಳೂರು – ಚೆನ್ನೈ: ಕೇವಲ 1 ಗಂಟೆ 13 ನಿಮಿಷ (73 ನಿಮಿಷ)!

ಬೆಂಗಳೂರು – ಹೈದರಾಬಾದ್: ಕೇವಲ 2 ಗಂಟೆ 10 ನಿಮಿಷ!

ಮುಂಬೈ – ಪುಣೆ: ಕೇವಲ 48 ನಿಮಿಷ!

ಮುಂಬೈ – ಅಹಮದಾಬಾದ್: ಕೇವಲ 1 ಗಂಟೆ 57 ನಿಮಿಷ!

ಪುಣೆ – ಹೈದರಾಬಾದ್: ಕೇವಲ 2 ಗಂಟೆ 8 ನಿಮಿಷ!

ದೆಹಲಿ – ಲಕ್ನೋ: ಕೇವಲ 2 ಗಂಟೆ!

ದೆಹಲಿ – ವಾರಣಾಸಿ: ಕೇವಲ 3 ಗಂಟೆ 15 ನಿಮಿಷ!

ದೆಹಲಿ – ಸಿಲಿಗುರಿ: ಸುಮಾರು 6 ಗಂಟೆ!

ಇದನ್ನೂ ಓದಿ: ವನ್ಯಜೀವಿ ಪ್ರಿಯರಿಗೆ ಗುಡ್​​ನ್ಯೂಸ್​​: ಬಂಡೀಪುರ, ನಾಗರಹೊಳೆ ಸಫಾರಿ ಪೂರ್ಣ ಪ್ರಮಾಣದಲ್ಲಿ ಪುನರಾರಂಭ

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಈ ಮೆಗಾ ಯೋಜನೆಯಿಂದ ಬಿಹಾರ ರಾಜ್ಯಕ್ಕೆ ಭಾರಿ ಲಾಭವಾಗಲಿದೆ. ದೆಹಲಿ-ವಾರಣಾಸಿ-ಪಟ್ನಾ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಮಂಜೂರಾತಿ ಸಿಕ್ಕಿದ್ದು, ಇದು ಕಾರ್ಯರೂಪಕ್ಕೆ ಬಂದಲ್ಲಿ ಪಟ್ನಾದಿಂದ ದೆಹಲಿಗೆ ಕೇವಲ 4 ಗಂಟೆ 41 ನಿಮಿಷಗಳಲ್ಲಿ ತಲುಪಬಹುದಾಗಿದೆ. ಅಷ್ಟೇ ಅಲ್ಲದೆ, ಪೂರ್ವ ಭಾರತದ ಕನೆಕ್ಟಿವಿಟಿಯನ್ನು ಮತ್ತಷ್ಟು ಬಲಪಡಿಸಲು ಈ ಕಾರಿಡಾರ್ ಅನ್ನು ಬಿಹಾರದ ಮೂಲಕ ಪಶ್ಚಿಮ ಬಂಗಾಳದ ಸಿಲಿಗುರಿವರೆಗೂ ವಿಸ್ತರಿಸುವ ಆಲೋಚನೆಯಲ್ಲಿ ಸರ್ಕಾರ ತೊಡಗಿದೆ. ಈ ಹೈ-ಸ್ಪೀಡ್ ರೈಲುಗಳು ರಸ್ತೆ ಮತ್ತು ವಾಯು ಸಾರಿಗೆಯ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!
ಏರ್‌ಪೋರ್ಟ್‌ನಲ್ಲೇ ಹೈಟೆಕ್ ಭಿಕ್ಷಾಟನೆ!
ಏರ್‌ಪೋರ್ಟ್‌ನಲ್ಲೇ ಹೈಟೆಕ್ ಭಿಕ್ಷಾಟನೆ!
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಪತ್ನಿ ಸೋನಲ್ ಕಡೆಯಿಂದ ಸಿಕ್ಕ ವಿಶೇಷ ಉಡುಗೊರೆ ಬಗ್ಗೆ ಹೇಳಿದ ತರುಣ್ ಸುಧೀರ್ 
ಪತ್ನಿ ಸೋನಲ್ ಕಡೆಯಿಂದ ಸಿಕ್ಕ ವಿಶೇಷ ಉಡುಗೊರೆ ಬಗ್ಗೆ ಹೇಳಿದ ತರುಣ್ ಸುಧೀರ್