AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಜ್ಯದಲ್ಲಿ ಬರದ ನಡುವೆ ಕಾಂಗ್ರೆಸ್ ನಾಯಕರ ಜಾಲಿ ಟ್ರಿಪ್​​’: ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು

Karnataka Politics: ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಆರೋಪಿಸಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​​ ವಾಗ್ದಾಳಿ ನಡೆಸಿವೆ. ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿರುವ ಕಾಂಗ್ರೆಸ್​​ ಸರ್ಕಾರ ತಕ್ಷಣವೇ ಬರ ಪೀಡಿತ ಪ್ರದೇಶಗಳನ್ನು ಘೋಷಿಸಿ ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ ಪರಿಹಾರ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

'ರಾಜ್ಯದಲ್ಲಿ ಬರದ ನಡುವೆ ಕಾಂಗ್ರೆಸ್ ನಾಯಕರ ಜಾಲಿ ಟ್ರಿಪ್​​': ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು
ಆರ್​​. ಅಶೋಕ್​​ ಕಿಡಿImage Credit source: PTI
ಹರೀಶ್ ಜಿ.ಆರ್​.
| Edited By: |

Updated on:Jul 22, 2026 | 3:02 PM

Share

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಭೀಕರ ಬರ ಇದ್ದರೂ ನಿರ್ಲಕ್ಷ್ಯದ ಆರೋಪ
  • ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳಿಂದ ತೀವ್ರ ವಾಗ್ದಾಳಿ
  • ರೈತರ ಸಾಲಮನ್ನಾ ಮಾಡುವಂತೆಯೂ BJP-JDS ಆಗ್ರಹ

ಬೆಂಗಳೂರು, ಜುಲೈ 22: ಮುಂಗಾರು ಮಳೆಯ ಅಭಾವದಿಂದ ರಾಜ್ಯದಲ್ಲಿ ಭೀಕರ ಬರಗಾಲದ ನಡುವೆಯೂ ಕಾಂಗ್ರೆಸ್ ನಾಯಕರು, ಶಾಸಕರು ಜಾಲಿ ಟ್ರಿಪ್ ಮಾಡ್ತಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದೇ ಹಣೆಬರಹ. ಬರಗಾಲ ಬಂದಾಗ ಸರ್ಕಾರ ಯಾವುದೇ ಕ್ರಮಕೈಗೊಳ್ಳಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮುಂಜಾಗ್ರತಾ ಕ್ರಮ ಕೈಗೊಂಡಿದ್ವಿ. ಬಿಜೆಪಿಯ ಕೆಲಸವನ್ನು ನೋಡಿ ಕಾಂಗ್ರೆಸ್ ಕಲಿಯಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್​​. ಅಶೋಕ್​​ ಹೇಳಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್​​​ ಅವರು ಬೆಳೆ ಬೆಳೆಯಬೇಡಿ ಅಂತಾರೆ. ರೈತರು ಬೆಳೆ ಬೆಳೆಯದೆ ಏನು ಮಾಡಬೇಕು? ಹಾಗಾದ್ರೆ ರೈತರಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಬಿಡಿ. ಕಾವೇರಿ ನದಿ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ. ಬರ ಪೀಡಿತವೆಂದು ಘೋಷಣೆ ಮಾಡಿದರೆ ಕೇಂದ್ರ ಸರ್ಕಾರ ನಿಯೋಗ ಕಳಿಸಿ ವರದಿ ಪಡೆದು ಹಣ ಕೊಡುತ್ತೆ. ಬರ ಅಂತಾ ಘೋಷಣೆ ಮಾಡದಿದ್ದರೆ ಈ ಅನುದಾನ ಸಿಗುವುದಿಲ್ಲ. ಕಾಂಗ್ರೆಸ್​ಗೆ ಕಾಳಜಿ ಇದ್ದರೆ ಕೂಡಲೇ ಬರ ಅಂತಾ ಘೋಷಿಸಲಿ. SDRF ಹಣವನ್ನು ಯಾವುದಕ್ಕೆ ಬಳಕೆ ಮಾಡಿದ್ದಾರೋ ಗೊತ್ತಿಲ್ಲ. ಬರ ಘೋಷಣೆ ಮಾಡೋ ಬದಲು ದೆಹಲಿಯಲ್ಲಿ ಕುಳಿತಿದ್ದಾರೆ. ರಾಜ್ಯ ಸರ್ಕಾರ 1 ಲಕ್ಷ ರೂ.ವರೆಗೆ ರೈತರ ಸಾಲಮನ್ನಾ ಮಾಡಬೇಕು ಎಂದವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ; ಕಾರಣ ಕೊಟ್ಟ ಸಿಎಂ ಡಿಕೆ ಶಿವಕುಮಾರ್

ಎಕ್ಸ್ ಪೋಸ್ಟ್​​ ಮೂಲಕ ಜೆಡಿಎಸ್ ವಾಗ್ದಾಳಿ

ರಾಜ್ಯದಲ್ಲಿನ 36,202 ಕೆರೆಗಳ ಪೈಕಿ ಕೇವಲ 584 ಕೆರೆಗಳು ಮಾತ್ರ ಭರ್ತಿಯಾಗಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತ ತಲುಪಿವೆ.ಗ್ರಾಮೀಣ ಭಾಗದ ಜೀವನಾಡಿಯಾಗಿದ್ದ ಕೆರೆಗಳು ಬರಿದಾಗಿರುವುದು ರೈತರ ಪಾಲಿಗೆ ಮರಣಶಾಸನವಾಗುತ್ತಿದೆ. 5,862 ಕೆರೆಗಳು ಸಂಪೂರ್ಣ ಖಾಲಿಯಾಗಿದ್ದು, 734 ಹಳ್ಳಿಗಳಿಗೆ ಟ್ಯಾಂಕರ್ ನೀರೇ ಆಸರೆಯಾಗಿದೆ. ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿರುವ ಕಾಂಗ್ರೆಸ್​​ ಸರ್ಕಾರ ತಕ್ಷಣವೇ ಬರ ಪೀಡಿತ ಪ್ರದೇಶಗಳನ್ನು ಘೋಷಿಸಿ ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ ಪರಿಹಾರ ನೀಡಬೇಕು ಎಂದು ಎಕ್ಸ್​​ ಪೋಸ್ಟ್​​ ಮೂಲಕ ಜೆಡಿಎಸ್​​ ಆಗ್ರಹಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:37 pm, Wed, 22 July 26

Follow Us
'ನಾನು ಡಿಸಿಎಂ ಹುದ್ದೆ ಕೇಳಿಲ್ಲ: ಸಚಿವ ಸತೀಶ್ ಜಾರಕಿಹೊಳಿ
'ನಾನು ಡಿಸಿಎಂ ಹುದ್ದೆ ಕೇಳಿಲ್ಲ: ಸಚಿವ ಸತೀಶ್ ಜಾರಕಿಹೊಳಿ
‘ಟಾಕ್ಸಿಕ್’ ಬಗ್ಗೆ ತೆಲುಗು ನಟ ಕಿರಣ್ ಅಬ್ಬವರಂ ಹೇಳಿದ್ದು ಹೀಗೆ: ವಿಡಿಯೋ
‘ಟಾಕ್ಸಿಕ್’ ಬಗ್ಗೆ ತೆಲುಗು ನಟ ಕಿರಣ್ ಅಬ್ಬವರಂ ಹೇಳಿದ್ದು ಹೀಗೆ: ವಿಡಿಯೋ
ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್​​ ಕಾರ್ಯಕರ್ತರ ಯತ್ನ
ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್​​ ಕಾರ್ಯಕರ್ತರ ಯತ್ನ
‘ಕರಾವಳಿ’ ಪ್ರೀಮಿಯರ್ ಶೋ; ರಿಲೀಸ್​​ಗೂ ಮೊದಲೇ ಮೆಚ್ಚುಗೆ
‘ಕರಾವಳಿ’ ಪ್ರೀಮಿಯರ್ ಶೋ; ರಿಲೀಸ್​​ಗೂ ಮೊದಲೇ ಮೆಚ್ಚುಗೆ
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ