AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ 4 ತಿಂಗಳ ಅವಧಿಯಲ್ಲಿ 725 ಬಾಲಕಿಯರ ಗರ್ಭಧಾರಣೆಯ ಪ್ರಕರಣ ಬೆಳಕಿಗೆ

2024-25ಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಕಿಶೋರಿಯರ ಗರ್ಭಧಾರಣೆ ಪ್ರಮಾಣ ಇಳಿಕೆಯಾಗಿದ್ದರೂ, ಕಳೆದ 4 ತಿಂಗಳಲ್ಲಿ 725 ಬಾಲಕಿಯರು ಗರ್ಭಿಣಿಯಾಗಿರುವುದು ಸರ್ಕಾರದ ಅಂಕಿಅಂಶದಿಂದ ಬಹಿರಂಗವಾಗಿದೆ. ರಾಯಚೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು 100 ಪ್ರಕರಣಗಳು ದಾಖಲಾಗಿವೆ. ಬಾಲ್ಯ ವಿವಾಹಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಕಿಶೋರಿಯರ ಗರ್ಭಧಾರಣೆಗೆ ಹಲವು ಇತರ ಕಾರಣಗಳು ಕಾರಣವಾಗುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲಿ 4 ತಿಂಗಳ ಅವಧಿಯಲ್ಲಿ 725 ಬಾಲಕಿಯರ ಗರ್ಭಧಾರಣೆಯ ಪ್ರಕರಣ ಬೆಳಕಿಗೆ
ಸಾಂದರ್ಭಿಕ ಚಿತ್ರImage Credit source: Getty Images
TV9 Web
| Edited By: |

Updated on: Aug 20, 2026 | 4:36 PM

Share

ಮುಖ್ಯಾಂಶಗಳು

  • ಕರ್ನಾಟಕದಲ್ಲಿ 725 ಬಾಲಕಿಯರ ಗರ್ಭಧಾರಣೆ ಕೇಸ್​​ ಪತ್ತೆ
  • 2026ರ ಏಪ್ರಿಲ್‌ನಿಂದ ಜುಲೈವರೆಗೆ ದಾಖಲಾದ ಪ್ರಕರಣಗಳು
  • 2024-25ಕ್ಕೆ ಹೋಲಿಸಿದರೆ ಇಳಿಕೆ ಕಂಡಿರುವ ಕೇಸ್​​ಗಳ ಸಂಖ್ಯೆ

ಬೆಂಗಳೂರು, ಆಗಸ್ಟ್ 20: ಕರ್ನಾಟಕದಲ್ಲಿ 2026ರ ಏಪ್ರಿಲ್‌ನಿಂದ ಜುಲೈವರೆಗೆ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ 14ರಿಂದ 17 ವರ್ಷದೊಳಗಿನ 725 ಬಾಲಕಿಯರು ಗರ್ಭಿಣಿಯಾಗಿರುವುದು ರಾಜ್ಯ ಸರ್ಕಾರದ ಅಂಕಿಅಂಶಗಳಿಂದ ಬಹಿರಂಗವಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಲಿಖಿತ ಉತ್ತರದಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ಒಟ್ಟು 725 ಪ್ರಕರಣಗಳಲ್ಲಿ 17 ವರ್ಷದ ಬಾಲಕಿಯರೇ ಅತಿ ಹೆಚ್ಚು ಸಂಖ್ಯೆಯಲ್ಲಿರೋದು ಕಂಡುಬಂದಿದೆ.

ಪ್ರಕರಣಗಳ ಮಾಹಿತಿ

  • 4 ವರ್ಷ: 21 ಪ್ರಕರಣ
  • 15 ವರ್ಷ: 56 ಪ್ರಕರಣ
  • 16 ವರ್ಷ: 127 ಪ್ರಕರಣ
  • 17 ವರ್ಷ: 521 ಪ್ರಕರಣ

ಇದನ್ನೂ ಓದಿ: ಹಾವೇರಿಯಲ್ಲಿ ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣ ಹೆಚ್ಚಳ: 2025-26ರಲ್ಲಿ 42 ಕೇಸ್​​!

ರಾಯಚೂರಿನಲ್ಲಿ ಅತಿ ಹೆಚ್ಚು ಪ್ರಕರಣ

ಜಿಲ್ಲಾವಾರು ಅಂಕಿಅಂಶಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ 100 ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಎಂದು ವರದಿಯಾಗಿದೆ. 14 ವರ್ಷದ ಬಾಲಕಿಯರ ಗರ್ಭಧಾರಣೆ ಪ್ರಕರಣಗಳಲ್ಲಿ ಹಾಸನ ಜಿಲ್ಲೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಈ ವಯೋಮಾನದ ವಿಭಾಗದಲ್ಲಿ ಇದು ಅತಿ ಹೆಚ್ಚು ಎನ್ನಲಾಗಿದೆ.

2024-25ಕ್ಕೆ ಹೋಲಿಸಿದರೆ ಇಳಿಕೆ

ಆದರೆ, ಒಟ್ಟಾರೆ ಕಿಶೋರಿಯರ ಗರ್ಭಧಾರಣೆ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. 2024-25ರಲ್ಲಿ 4,579 ಪ್ರಕರಣಗಳು ವರದಿಯಾಗಿದ್ದರೆ, 2025-26ರಲ್ಲಿ 3,308 ಕೇಸ್​​ ಪತ್ತೆಯಾಗಿತ್ತು. ಸ್ತ್ರೀವಾದಿ ಹೋರಾಟಗಾರ್ತಿ ಹಾಗೂ ಲೇಖಕಿ ರೂಪಾ ಹಾಸನ್ ಅವರ ಪ್ರಕಾರ, ಬಾಲ್ಯ ವಿವಾಹಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಕಿಶೋರಿಯರ ಗರ್ಭಧಾರಣೆಗೆ ಹಲವು ಇತರ ಕಾರಣಗಳು ಕಾರಣವಾಗುತ್ತಿವೆ. ವಂಚನೆ, ಮಾನವ ಕಳ್ಳಸಾಗಣೆ ಸೇರಿದಂತೆ ಹಲವು ಕಾರಣಗಳಿಂದ ಕಿಶೋರಿಯರ ಗರ್ಭಧಾರಣೆ ಮುಂದುವರಿದಿದೆ ಎಂದು ಅವರು ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us