AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏ 6ರಿಂದ ಸುವಿದ್ಯೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ವಿಷ್ಣು ಸಹಸ್ರನಾಮ ಸಾಮೂಹಿಕ ಪಾರಾಯಣ

ಲೋಕ ಕಲ್ಯಾಣಕ್ಕಾಗಿ ಜುಲೈ 13ರಂದು ವಿಷ್ಣು ಸಹಸ್ರನಾಮ ಮಹಾಯಜ್ಞ ಬೆಂಗಳೂರಿನಲ್ಲಿ ನಡೆಯಲಿದೆ. ಏಪ್ರಿಲ್ 6ರಿಂದ ಜುಲೈ 6ರವರೆಗೆ, ಪ್ರತಿ ಭಾನುವಾರ ಸಂಜೆ ವಿಷ್ಣು ಸಹಸ್ರನಾಮದ ಸಾಮೂಹಿಕ ಪಾರಾಯಣ ನಡೆಯಲಿದೆ. ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಮಾರ್ಗದರ್ಶನ ಮತ್ತು ಆಶೀರ್ವಾದದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಸಂಚಾಲಕ ಮಂಜುನಾಥ್ ಆರ್. ಭಾರದ್ವಾಜ್ ಅವರು ಹೇಳಿದ್ದಾರೆ.

ಏ 6ರಿಂದ ಸುವಿದ್ಯೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ವಿಷ್ಣು ಸಹಸ್ರನಾಮ ಸಾಮೂಹಿಕ ಪಾರಾಯಣ
ಏ. 6ರಿಂದ ಸುವಿದ್ಯೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ವಿಷ್ಣು ಸಹಸ್ರನಾಮ ಸಾಮೂಹಿಕ ಪಾರಾಯಣ
ಗಂಗಾಧರ​ ಬ. ಸಾಬೋಜಿ
|

Updated on:Apr 02, 2025 | 12:59 PM

Share

ಬೆಂಗಳೂರು, ಏಪ್ರಿಲ್ 2: ಲೋಕ ಕಲ್ಯಾಣಾರ್ಥವಾಗಿ ವಿಷ್ಣು ಸಹಸ್ರನಾಮ (Vishnu Sahasranama) ಮಹಾಯಜ್ಞವನ್ನು ಜುಲೈ 13ರ ಭಾನುವಾರಂದು ಬೆಂಗಳೂರಿನ (bangaluru) ಚನ್ನಮ್ಮನಕೆರೆ ಅಚ್ಚುಕಟ್ಟುವಿನ ಭುವನಗಿರಿ ರಾಯರ ಮಠದಲ್ಲಿ ಆಯೋಜಿಸಲಾಗಿದೆ ಎಂದು ಈ ಕಾರ್ಯಕ್ರಮದ ಸಂಚಾಲಕ ಮಂಜುನಾಥ್ ಆರ್. ಭಾರದ್ವಾಜ್ ಅವರು ಮಾಹಿತಿ ನೀಡಿದ್ದಾರೆ. ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದ್ದು, ಮಹಾಯಜ್ಞಕ್ಕೆ ಮುಂಚೆ ವಿಷ್ಣು ಸಹಸ್ರನಾಮದ ಸಾಮೂಹಿಕ ಪಠಣವನ್ನು ಭುವನಗಿರಿ ರಾಯರ ಮಠದಲ್ಲಿ ಏಪ್ರಿಲ್ 6ರಿಂದ ಜುಲೈ 6ರ ವರೆಗೆ ಪ್ರತಿ ಭಾನುವಾರ ಸಂಜೆ 4 ಗಂಟೆಯಿಂದ 6.30ರ ತನಕ ನಡೆಸಲಾಗುವುದು. ಯಾರಿಗೆ ವೈಯಕ್ತಿಕವಾಗಿ ಭಾಗವಹಿಸಲು ಸಾಧ್ಯವೋ ಅಂಥವರು ಪಾಲ್ಗೊಳ್ಳಬಹುದು ಎಂದಿದ್ದಾರೆ.

ಇನ್ನು ಯಾರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಇಚ್ಛೆ ಇದೆ ಹಾಗೂ ವೈಯಕ್ತಿಕವಾಗಿ ಭಾಗವಹಿಸಲು ಸಾಧ್ಯವಿಲ್ಲವೋ ಅಂಥವರಿಗೆ ಲೇಖನ ಪುಸ್ತಕವನ್ನು ಸಿದ್ಧಪಡಿಸಲಾಗಿದೆ. ಎಷ್ಟು ಬಾರಿ ವಿಷ್ಣು ಸಹಸ್ರನಾಮದ ಪಠಣ ಮಾಡಲಾಗಿದೆ ಎಂಬುದನ್ನು ಲೆಕ್ಕ ಇಡುವುದಕ್ಕೆ ಪ್ರತ್ಯೇಕವಾದ ಕಾಗದವೊಂದನ್ನು ನೀಡಲಾಗುವುದು. ಶುಚಿರ್ಭೂತರಾಗಿ ಮನೆಯಲ್ಲಿ ಇರುವ ದೇವರ ಕೋಣೆಯಲ್ಲೋ ಅಥವಾ ದೇವರ ಚಿತ್ರಪಟದ ಮುಂದೆಯೋ ಕುಳಿತು ನಿತ್ಯ ಕನಿಷ್ಠ ಒಮ್ಮೆಯಾದರೂ ಪಠಣ ಮಾಡಬಹುದಾಗಿದೆ ಎಂದರು.

ಇದನ್ನೂ ಓದಿ: Viral: ಜಸ್ಟ್‌ ಪಾಸಾದ್ರೆ ಸಾಕು, ಇದಕ್ಕಿಂತ ಕಮ್ಮಿ ಅಂಕ ಬೇಡ; ದೈವಕ್ಕೆ ಚೀಟಿ ಮುಖಾಂತರ ಮನವಿಯಿಟ್ಟ ವಿದ್ಯಾರ್ಥಿ

ಇದನ್ನೂ ಓದಿ
Image
ನಮ್ಮ ಮೆಟ್ರೋ ಗುಡ್ ನ್ಯೂಸ್: ಐಪಿಎಲ್ ಪ್ರಯುಕ್ತ ಸಂಚಾರ ಸಮಯ ವಿಸ್ತರಣೆ
Image
ಬೆಂಗಳೂರಿನಲ್ಲಿ ಆರ್​ಸಿಬಿ ಪಂದ್ಯ; ಪಾರ್ಕಿಂಗ್ ವಿವರ, ಸಂಚಾರ ಸಲಹೆ ಇಲ್ಲಿದೆ
Image
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಕ್ರಮ
Image
ಈ ಸೈಟ್​ನಲ್ಲಿ ಅರ್ಜಿ ಸಲ್ಲಿಸಿದ್ರೆ ಎರಡೇ ದಿನಗಳಲ್ಲಿ ಸಿಗುತ್ತೆ ಇ ಖಾತಾ!

ಕುಟುಂಬದಲ್ಲಿನ ಎಲ್ಲ ಸದಸ್ಯರೂ ಈ ವಿಷ್ಣು ಸಹಸ್ರನಾಮ ಪಠಣದಲ್ಲಿ ಪಾಲ್ಗೊಳ್ಳಬಹುದು. ಆದರೆ ಎಷ್ಟು ಬಾರಿ ಪಠಿಸಲಾಗಿದೆ ಎಂಬುದಕ್ಕೆ ಒಂದು ಲೆಕ್ಕ ಎಂದಿಟ್ಟುಕೊಂಡಿದ್ದಲ್ಲಿ ಮಹಾಯಜ್ಞದ ದಿನ ಅದನ್ನು ಆ ಭಗವಂತನಿಗೆ ಸಮರ್ಪಣೆ ಮಾಡುವ ಉದ್ದೇಶವಿದೆ. ಪ್ರತ್ಯೇಕವಾಗಿ ನೀಡುವ ಕಾಗದದಲ್ಲಿ ಒಟ್ಟು ಸಾವಿರದ ಎಂಟು ಬಾರಿ ವಿಷ್ಣವೇ ನಮಃ ಎಂದು ಬರೆದು, ಅದನ್ನು ಯಜ್ಞಕ್ಕೆ ಮುಂಚಿತವಾಗಿ ಅಂಚೆ ಮೂಲಕವೋ ಅಥವಾ ವೈಯಕ್ತಿಕವಾಗಿಯೋ ಕಾರ್ಯಕ್ರಮ ಆಯೋಜಕರಿಗೆ ತಲುಪಿಸಬೇಕು ಎಂದು ತಿಳಿಸಿದರು.

ಅಭಿಯಾನಕ್ಕೆ ಹೆಸರು ನೋಂದಾಯಿಸಿ, ಸಾಮೂಹಿಕ ಪಾರಾಯಣದಲ್ಲಿ ಪಾಲ್ಗೊಳ್ಳುವ ಎಲ್ಲರ ಹೆಸರಿನಲ್ಲಿಯೂ ಮಹಾಯಜ್ಞದ ದಿನ ಸಂಕಲ್ಪ ಮಾಡಲಾಗುವುದು. ಅಂದ ಹಾಗೆ ಇದರಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕ ಇರುವುದಿಲ್ಲ. ಭುವನಗಿರಿ ಆಶ್ರಮವೂ ಸಹ ಯಾರಿಗೂ ಸಂಭಾವನೆ ಪಾವತಿಸುವುದಿಲ್ಲ. ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಉಪಕ್ರಮ ಇದಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕವಾಗಿ ಕಟ್ಟಿ ಹಲ್ಲೆ ಮಾಡಿದ್ರೂ ಆರೋಪಿಗಳಿಗಾಗಿ ಮಿಡಿದ ಸಂತ್ರಸ್ತೆ ಹೃದಯ

ಈ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಹಾಗೂ ಹೆಸರು ನೋಂದಣಿಗೆ, ಯಜ್ಞದಲ್ಲಿ ಪಾಲ್ಗೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಲು ಮೊಬೈಲ್ ಫೋನ್ ಸಂಖ್ಯೆ- 9980300790, 9110616295  ಸಂಪರ್ಕಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:59 pm, Wed, 2 April 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ