AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪ್ರಿಯಕರನಿಗೆ ನೀಡಿದ ಆರೋಪ; ಮಗಳ ವಿರುದ್ಧ ದೂರು ನೀಡಿದ ತಾಯಿ

ಮದನ್​ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ದೀಪ್ತಿ ಇದೇ ಶಾಲೆಯಲ್ಲಿ ಡ್ರೈವಿಂಗ್ ಕಲಿಯಲು ಹೋಗಿದ್ದಳು. ಪ್ರಿಯತಮನಿಗಾಗಿ ತಾಯಿಯ 1 ಕೆಜಿ ಬಂಗಾರವನ್ನು ನೀಡಿ, ಅದೇ ಜಾಗದಲ್ಲಿ ರೋಲ್ಡ್ ಗೋಲ್ಡ್ ಚಿನ್ನ ತಂದು ಇರಿಸಿದ್ದಾಳಂತೆ.

ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪ್ರಿಯಕರನಿಗೆ ನೀಡಿದ ಆರೋಪ; ಮಗಳ ವಿರುದ್ಧ ದೂರು ನೀಡಿದ ತಾಯಿ
ಬಂಧಿತ ಆರೋಪಿ ಮದನ್
TV9 Web
| Edited By: |

Updated on:May 17, 2022 | 9:41 AM

Share

ಬೆಂಗಳೂರು: ತನ್ನ ಮನೆಯಲ್ಲಿದ್ದ ಚಿನ್ನಾಭರಣವನ್ನು (Jewellery) ಕದ್ದು ಪ್ರಿಯಕರನಿಗೆ ನೀಡಿದ್ದಾಳೆ ಎಂದು ಆರೋಪಿಸಿ ತಾಯಿ (Mother) ಮಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ತಾಯಿ ದೂರು ನೀಡಿದ್ದು, ಆರೋಪಿ ಮಗಳಾದ ದೀಪ್ತಿ(24) ಮತ್ತು ಆಕೆಯ ಪ್ರಿಯತಮ ಮದನ್(27)ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಜಕ್ಕೂರು ಲೇಔಟ್ ನಿವಾಸಿಯಾಗಿರುವ ದೀಪ್ತಿ, ವಿವಾಹ ವಿಚ್ಛೇದನ ನಂತರ ತಾಯಿ ಜತೆ ವಾಸವಾಗಿದ್ದಳು. ಡ್ರೈವಿಂಗ್ ಸ್ಕೂಲ್ ಡ್ರೈವರ್ ಮದನ್ನ ಪ್ರೀತಿಸುತ್ತಿದ್ದಾಳಂತೆ.

ಮದನ್​ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ದೀಪ್ತಿ ಇದೇ ಶಾಲೆಯಲ್ಲಿ ಡ್ರೈವಿಂಗ್ ಕಲಿಯಲು ಹೋಗಿದ್ದಳು. ಪ್ರಿಯತಮನಿಗಾಗಿ ತಾಯಿಯ 1 ಕೆಜಿ ಬಂಗಾರವನ್ನು ನೀಡಿ, ಅದೇ ಜಾಗದಲ್ಲಿ ರೋಲ್ಡ್ ಗೋಲ್ಡ್ ಚಿನ್ನ ತಂದು ಇರಿಸಿದ್ದಾಳಂತೆ. ಚಿನ್ನಾಭರಣದಲ್ಲಿ ವ್ಯತ್ಯಾಸ ಕಂಡು ತಾಯಿ ಮಗಳನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಗಳ ಮೇಲೆ ಅನುಮಾನದಿಂದ ತಾಯಿ ಠಾಣೆಗೆ ದೂರು ನೀಡಿದ್ದರು.

ಪೊಲೀಸರ ವಿಚಾರಣೆ ವೇಳೆ ಮಗಳ ಕೈಚಳಕ ಬಯಲಾಗಿತ್ತು. ಕದ್ದ ಚಿನ್ನಾಭರಣ ಅಡಮಾನ ಇಟ್ಟು ಮೋಜು ಮಸ್ತಿ ಮಾಡಿದ್ದರು. ಸದ್ಯ ಅಮೃತಹಳ್ಳಿ ಪೊಲೀಸರು ಕಳುವಾಗಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ಧಾರವಾಡದಲ್ಲಿ ಮದ್ಯದಂಗಡಿಗೆ ಕನ್ನ: ಧಾರವಾಡ: ವಿದ್ಯಾಗಿರಿ ಬಡಾವಣೆಯಲ್ಲಿನ ಅಂಗಡಿಯೊಂದರಲ್ಲಿ ಶಟರ್ ಮುರಿದು ಒಳನುಗ್ಗಿ ಮದ್ಯ ಕದ್ದಿದ್ದಾರೆ. ಗ್ಯಾನ್ ಬಾ ಎಂಆರ್‌ಪಿ ಲಿಕ್ಕರ್ ಶಾಪ್‌ನಲ್ಲಿ ಕಳ್ಳತನ ನಡೆದಿದೆ. ಈ ಅಂಗಡಿ ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆಯಲ್ಲಿದೆ. ನಿನ್ನೆ ಬೆಳಗಿನ ಜಾವ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂದಾಜು 50 ಸಾವಿರ ರೂ. ಮೌಲ್ಯದ ಮದ್ಯ ಕಳ್ಳತನವಾಗಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:57 am, Tue, 17 May 22

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ