AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಕಾರು ಡ್ರಿಫ್ಟಿಂಗ್ ಕೇಸ್: ಮಾಜಿ ಡಾನ್ ಪುತ್ರನಿಗೆ ಬಿಗ್ ರಿಲೀಫ್!

ಬೆಂಗಳೂರಿನಲ್ಲಿ ಶ್ರೀಮಂತರನ್ನು ಯಾರು ಪ್ರಶ್ನಿಸುವುದೇ ಇಲ್ಲ ಎಂಬಂತಾಗಿದೆ. ಮಧ್ಯರಾತ್ರಿ ಆದ್ರೆ ಸಾಕು ಐಷಾರಾಮಿ ಕಾರುಗಳ ದರ್ಬಾರ್ ಹೆಚ್ಚಾಗುತ್ತಿದೆ. ಜನನಿಬಿಡ ಪ್ರದೇಶದಲ್ಲಿ ಐಷಾರಾಮಿ ಕಾರುಗಳ ಡ್ರಿಫ್ಟಿಂಗ್ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರು ನಗರದ ಮಧ್ಯಭಾಗದಲ್ಲಿ ಐಷರಾಮಿ ಲ್ಯಾಬೋರ್ಗಿನಿ ಕಾರು ಕಾರಿನಿಂದ ಡ್ರಿಫ್ಟಿಂಗ್ ನಡೆಸಿರುವ ಪ್ರಕರಣ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಸಂಬಂಧಿಸಿ ಪೊಲೀಸರು ನೋಟಿಸ್ ಜಾರಿ ಮಾಡುತ್ತಿದ್ದಂತೆಯೇ ಮಾಜಿ ಭೂಗತ ದೊರೆ ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕೋರ್ಟ್​​ನಿಂದ ಜಾಮೀನು ಪಡೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಕಾರು ಡ್ರಿಫ್ಟಿಂಗ್ ಕೇಸ್: ಮಾಜಿ ಡಾನ್ ಪುತ್ರನಿಗೆ ಬಿಗ್ ರಿಲೀಫ್!
Rikki Rai
ಶಿವಪ್ರಸಾದ್​ ಬಿ.
| Edited By: |

Updated on: Mar 23, 2026 | 4:46 PM

Share

ಬೆಂಗಳೂರು, (ಮಾರ್ಚ್ 23): ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ (luxury car drifting Case) ವಿಡಿಯೋ ಬೆಚ್ಚಿಬೀಳಿಸಿದ್ದು, ಎಲ್ಲೆಡೆ ಫುಲ್ ವೈರಲ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ (Rikki Rai)  ಹೆಸರು ಕೇಳಿಬಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ರಿಕ್ಕಿ ರೈ ವಿರುದ್ಧದ ಎಫ್​​ಐಆರ್ ದಾಖಲಿಸಿ ನೋಟಿಸ್ ಜಾರಿ ಮಾಡಲಾಗಿದೆ. ಇದರ ಬೆನ್ನಲ್ಲೇ ಇತ್ತ ರಿಕ್ಕಿ ರೈ  ಬೆಂಗಳುರಿನ 5ನೇ ಎಸಿಎಂಎಂ ಕೋರ್ಟ್​​ನಿಂದ ಜಾಮೀನು ಪಡೆದುಕೊಂಡಿದ್ದಾರೆ.

ಡ್ರಿಪ್ಟಿಂಗ್ ವಿಡಿಯೋ ವೈರಲ್

ಮಾರ್ಚ್ 21ರ ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಲ್ಯಾಬೋರ್ಗಿನಿ ಕಾರು (ಕೆಎ-05, ಎನ್‌ಆರ್‌-0009) ಶಿವಾಜಿನಗರ ಕಡೆಯಿಂದ ಅನಿಲ್‌ ಕುಂಬ್ಳೆ ವೃತ್ತಕ್ಕೆ ಅತಿ ವೇಗವಾಗಿ ಬಂದಿತ್ತು. ಬಳಿಕ ಕಾರು ಚಾಲಕ ಅದೇ ವೃತ್ತದಲ್ಲಿಕಾರನ್ನು ಎರಡು ಸುತ್ತು ಅತಿ ವೇಗವಾಗಿ ತಿರುಗಿಸಿದ್ದ. ನಂತರ ಶಿವಾಜಿನಗರದ ಕಡೆಗೆ ಶರವೇಗದಲ್ಲಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದ. ಕಾರು ಚಾಲಕನ ಅಪಾಯಕಾರಿ ಚಾಲನೆಯ ವಿಡಿಯೊ ಸಮೀಪದ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಬಳಿಕ ಪೊಲೀಸರು ಕಾರು ಸಂಚರಿಸಿದ ಮಾರ್ಗದುದ್ದಕ್ಕೂ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಅದರಲ್ಲಿ ರಿಕ್ಕಿ ರೈ ಸ್ವತಃ ವಾಹನ ಚಲಾಯಿಸುತ್ತಿರುವುದು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಿಕ್ಕಿ ರೈ ವಿರುದ್ಧ IMV 184, 189,BNS 281 ಅಡಿ ಎಫ್ ಐ ಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ರಿಕ್ಕಿ ರೈ ನಿರೀಕ್ಷಣಾ ಜಾಮೀನು ಮೊರೆ ಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ನೋಡಿ: ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್ ಪ್ರಕರಣ: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ ರಿಕ್ಕಿ?

ಲ್ಯಾಂಬೋರ್ಗಿನಿ ಕಾರು ರಿಕ್ಕಿ ರೈ ಅವರಿಗೆ ಸೇರಿದೆ ಎಂದು ಗೊತ್ತಾಗಿದ್ದು, ಸದಾಶಿವನಗರದಲ್ಲಿನ ಅವರ ನಿವಾಸದಲ್ಲಿಕಾರನ್ನು ವಶಕ್ಕೆ ಪಡೆದಿದ್ದಾರೆ. ಆದ್ರೆ, ಕಾರು ಯಾರು ಚಾಲನೆ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್