ಬೆಂಗಳೂರಿನ ಹಲವಡೆ ಮಾಲಿನ್ಯ ನಿಯಂತ್ರಣ ಮಂಡಳಿ ದಾಳಿ, ಪಿಒಪಿ ಗಣೇಶ ವಿಗ್ರಹ ಜಪ್ತಿ

ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ರಾಜ್ಯದಲ್ಲಿ ಪಿಒಪಿ ಗಣೇಶ ವಿಗ್ರಹ ತಯಾರಿಕೆ ಮತ್ತು ಮಾರಾಟ ನಿಷೇಧಿಸಲಾಗಿದೆ. ಆದರೂ ಕೂಡ ಕೆಲ ವ್ಯಾಪಾರಸ್ಥರು ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ವಿಚಾರ ತಿಳಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬೆಂಗಳೂರು ನಗರದ ಹಲವಡೆ ದಾಳಿ ಮಾಡಿದರು.

ಬೆಂಗಳೂರಿನ ಹಲವಡೆ ಮಾಲಿನ್ಯ ನಿಯಂತ್ರಣ ಮಂಡಳಿ ದಾಳಿ, ಪಿಒಪಿ ಗಣೇಶ ವಿಗ್ರಹ ಜಪ್ತಿ
ಪಿಒಪಿ ಗಣೇಶ ಮೂರ್ತಿ ಜಪ್ತಿ
Follow us
| Updated By: ವಿವೇಕ ಬಿರಾದಾರ

Updated on:Sep 04, 2024 | 9:18 AM

ಬೆಂಗಳೂರು, ಸೆಪ್ಟೆಂಬರ್ 04: ರಾಜ್ಯಾದ್ಯಂತ ಪ್ಲಾಸ್ಟರ್​ ಆಫ್​ ಪ್ಯಾರಿಸ್​ (POP) ಗಣೇಶ ವಿಗ್ರಹಗಳ ತಯಾರಿಕೆ ಮತ್ತು ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ, ಕೂಡ ಕೆಲವು ಕಡೆ ಅಕ್ರಮವಾಗಿ ತಯಾರಿಕೆ ಮತ್ತು ಮಾರಾಟ ಮಾಡಲಾಗುತ್ತಿದೆ. ಬೆಂಗಳೂರು (Bengaluru) ನಗರದಲ್ಲಿ ​ಪಿಒಪಿ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದ ಕಡೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ (Karnataka State Pollution Control Board) ಅಧಿಕಾರಿಗಳು ದಾಳಿ ಮಾಡಿ, ಪಿಒಪಿ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಿದ್ದಾರೆ.

ರಾಜ್ಯಾದ್ಯಂತ ಪಿಒಪಿ ಗಣೇಶ ವಿಗ್ರಹಗಳು ಬ್ಯಾನ್ ಆಗಿ ಮೂರು ವರ್ಷ ಕಳೆದಿದೆ. ಆದರೆ, ಬ್ಯಾನ್ ಅನ್ನೋದು ಹೆಸರಿಗೆ ಮಾತ್ರ ಎಂಬ ಅನುಮಾನ ಮೂಡಿದೆ. ನಗರದಲ್ಲೆಡೆ ಪಿಒಪಿ ಗಣೇಶ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಕುರಿತಾಗಿ‌ ಟಿವಿ9 ನಿರಂತರವಾಗಿ ಸುದ್ದಿ ಬಿತ್ತರಿಸಿತ್ತು. ಇದರಿಂಧ ಎಚ್ಚೆತ್ತ ಅಧಿಕಾರಿಗಳು ಗಣೇಶ ವಿಗ್ರಹಗಳನ್ನ ಮಾರಾಟ ಮಾಡುವ ಕಡೆ ದಾಳಿ ಮಾಡಿ ಪಿಒಪಿ ಗಣೇಶ ಮೂರ್ತಿಗಳನ್ನ ಜಪ್ತಿ ಮಾಡಿದರು.

ಬೆಂಗಳೂರಿನ ಮಾವಳ್ಳಿ, ಆರ್​ವಿ ರಸ್ತೆ, ಯಶವಂತಪುರ ಸೇರಿದಂತೆ ಹಲವೆಡೆ ಪಿಒಪಿ ಗಣೇಶ ವಿಗ್ರಹಗಳ ಮಾರಾಟ ಮಾಡಲಾಗುತ್ತಿತ್ತು. ಈ ವಿಚಾರ ತಿಳಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪಿಒಪಿ ಗಣೇಶ ವಿಗ್ರಹ ಇರಿಸಿದ್ದ ಗೊಡನ್​ಗಳ ಮೇಲೆ ದಾಳಿ ಮಾಡಿ ಪಿಒಪಿ‌ ಗಣೇಶ ವಿಗ್ರಹಗಳನ್ನು ಜಪ್ತಿ ಮಾಡಿದರು. ಮಾವಳ್ಳಿ ರಸ್ತೆ ಗಣೇಶ ಗೋಡನ್​ಗಳಲ್ಲಿ ಒಟ್ಟು 23 ಪಿಒಪಿ ಗಣೇಶ ಮೂರ್ತಿಗಳು ವಶಕ್ಕೆ ಪಡೆದು, ಅವುಗಳನ್ನ ಪರಿಶೀಲನೆಗೆ ಕಳುಹಿಸಿದರು.

ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಇಒ ಸನೀತ, ಪಿಒಪಿ ಗಣೇಶ ವಿಗ್ರಹಗಳನ್ನು ಮಾರಾಟ ಮಾಡದಂತೆ ಆರು ತಿಂಗಳಿನಿಂದ ಗೈಡ್ ಲೈನ್ಸ್ ಕೊಡುತ್ತಾ ಬಂದಿದ್ದೀವೆ. ಆದರೂ, ಪಿಒಪಿ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದಾರೆ. ‌ಹೀಗಾಗಿ ನೋಟಿಸ್ ಕೊಟ್ಟಿದ್ದೇವೆ.‌ ಮತ್ತೊಮ್ಮೆ ಏನಾದರೂ ಮಾರಾಟ ಮಾಡಿದರೆ ಅಂಗಡಿಗಳನ್ನು ಬಂದ್​ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಗಣೇಶ ಹಬ್ಬ ಪ್ರಯುಕ್ತ NWKRTCಯಿಂದ ಪ್ರಯಾಣಿಕರಿಗೆ ಗಿಫ್ಟ್​​: ಸೀಟ್​ ಬುಕ್ಕಿಂಗ್​ನಲ್ಲಿ ರಿಯಾತಿ

ಪಿಒಪಿ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುತ್ತಿಲ್ಲ.‌ ಹಳೆಯ ಗಣೇಶ ವಿಗ್ರಹಗಳು ಗೋಡನ್​ನಲ್ಲಿವೆ. ಅವುಗಳನ್ನು ಇದೀಗ ಜಪ್ತಿಮಾಡಿದ್ದಾರೆ.‌ ಇನ್ಮುಂದೆ ಈ ರೀತಿಯಾಗದಂತೆ ನೋಡಿ ಕೋಳ್ಳುತ್ತೇವೆ ಎಂದು ವ್ಯಾಪಾರಸ್ಥರು ಹೇಳಿದರು.

ನಗರದಲ್ಲಿ ಪಿಒಪಿ ಗಣೇಶ ವಿಗ್ರಹಗಳು ಬ್ಯಾನ್ ಆದರೂ ನಗರದ ಗಣೇಶ ಗೋಡೌನ್​​ಗಳಲ್ಲಿ ಪಿಒಪಿ ಗಣೇಶ ವಿಗ್ರಹಗಳು ಹೆಚ್ಚಾಗಿವೆ. ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿ ಬಿಸಿ‌ ಮುಟ್ಟಿಸಿದ್ದು, ಇನ್ಮುಂದೆಯದರೂ ವ್ಯಾಪಾರಸ್ಥರು ಪಿಒಪಿ ಗಣೇಶ ವಿಗ್ರಹಗಳನ್ನು ಮಾರಟ ಮಾಡುವುದನ್ನ ನಿಲ್ಲುಸ್ತಾರಾ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:18 am, Wed, 4 September 24