AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಸಿಟಿ ಮಹಿಳೆಯರಿಗೆ ಗುಡ್ ನ್ಯೂಸ್; ಬೆಂಗಳೂರಿನ 25 ಕಡೆಗಳಲ್ಲಿ ಓಪನ್ ಆಗಲಿದೆ ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್​ಗಳು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಕೆಲ ಆಟೋ ಚಾಲಕರು ಮಹಿಳಾ ಪ್ರಯಾಣಿಕರ ಜೊತೆ ಕಿರಿಕ್​, ಡಬಲ್​ ಹಣ ತೆಗೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆ ಇದನ್ನು ತಡೆಗಟ್ಟಲು ಸರ್ಕಾರ ಮುಂದಾಗಿದ್ದು, ಬೆಂಗಳೂರಿನ 25 ಕಡೆಗಳಲ್ಲಿ ಮಹಿಳೆಯರಿಗಾಗಿ ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್​ಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ಸಿಲಿಕಾನ್ ಸಿಟಿ ಮಹಿಳೆಯರಿಗೆ ಗುಡ್ ನ್ಯೂಸ್; ಬೆಂಗಳೂರಿನ 25 ಕಡೆಗಳಲ್ಲಿ ಓಪನ್ ಆಗಲಿದೆ ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್​ಗಳು
ಬೆಂಗಳೂರಿನ 25 ಕಡೆಗಳಲ್ಲಿ ಓಪನ್ ಆಗಲಿದೆ ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್​ಗಳು
Kiran Surya
| Edited By: |

Updated on: Oct 11, 2024 | 3:03 PM

Share

ಬೆಂಗಳೂರು, ಅ.11: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru)ಇತ್ತೀಚೆಗೆ ಕೆಲ ಆಟೋ ಚಾಲಕರು ಮಹಿಳಾ ಪ್ರಯಾಣಿಕರ ಜೊತೆ ಕಿರಿಕ್​, ಡಬಲ್​ ಹಣ ತೆಗೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆ ಇದನ್ನು ತಡೆಗಟ್ಟಲು ಸರ್ಕಾರ ಮುಂದಾಗಿದ್ದು, ಬೆಂಗಳೂರಿನ ಇಪ್ಪತ್ತೈದು ಕಡೆಗಳಲ್ಲಿ ಮಹಿಳೆಯರಿಗಾಗಿ ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್​(Prepaid Auto stand)ಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ.

ಪ್ರಯೋಜನವೇನು? ಎಲ್ಲೆಲ್ಲಿ ಓಪನ್ ?

ಹೌದು, ಮಹಿಳೆಯರಿಗಾಗಿ ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್​ಗಳು‌ ತೆರೆಯಲಾಗಿದ್ದು, ಈ ಆಟೋ ಸ್ಟ್ಯಾಂಡ್​ಗಳಲ್ಲಿ ಪ್ರತಿ ಚಾಲಕ ಹಾಗೂ ಚಾಲಕಿಯ ಮಾಹಿತಿ ಇರುತ್ತದೆ. ಮಹಿಳೆಯರಿಗೆ ತೊಂದರೆ ಅಥವಾ ಕಿರುಕುಳ ನೀಡಿದರೆ, ಚಾಲಕ ಸಿಕ್ಕಿಬಿಳುವುದು ಖಚಿತ. ಹೀಗಾಗಿ ಮಹಿಳಾ ಪ್ರಯಾಣಿಕರ ಹಿತದೃಷ್ಟಿಯಿಂದ ಬೆಂಗಳೂರಿನ ಸಿಲ್ಕ್ ಬೋರ್ಡ್, ಮೆಜೆಸ್ಟಿಕ್, ಕೆಎಸ್ಆರ್​ಟಿಸಿ, ಬಿಎಂಟಿಸಿ, ರೈಲ್ವೆ ಸ್ಟೇಷನ್, ಸರ್.ಎಂ ವಿಶ್ವೇಶ್ವರಯ್ಯ ಮೆಟ್ರೋ ಸ್ಟೇಷನ್, ಮಡಿವಾಳ, ಯಶವಂತಪುರ ರೈಲ್ವೆ ಸ್ಟೇಷನ್, ಗಾಂಧಿ ಬಜಾರ್ ಸೇರಿದಂತೆ 25 ಪ್ರಮುಖ ಜಂಕ್ಷನ್​ಗಳಲ್ಲಿ ಈ ಆಟೋ ಸ್ಟ್ಯಾಂಡ್​ಗಳನ್ನು ಓಪನ್ ಮಾಡಲು ಪ್ಲಾನ್ ಮಾಡಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಜಾಸ್ತಿ ಬಾಡಿಗೆ ಹಣ ಕೊಡಲು ನಿರಾಕರಿಸಿದಕ್ಕೆ ಯುವತಿಗೆ ಆಟೋ ಚಾಲಕನಿಂದ ಅವಾಚ್ಯವಾಗಿ ನಿಂದನೆ

ಸರ್ಕಾರದ ಮೀಟರ್ ದರದಲ್ಲೇ ಆಟೋ ಚಾರ್ಜ್

ಸಾರಿಗೆ ಇಲಾಖೆ ಹಾಗೂ ಟ್ರಾಫಿಕ್ ಪೋಲಿಸ್ ಇಲಾಖೆಯಿಂದ ಈ ಸ್ಟ್ಯಾಂಡ್​ಗಳನ್ನು ಓಪನ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಪ್ರಿಪೇಯ್ಡ್ ಸ್ಟ್ಯಾಂಡ್​ಗಳನ್ನು ನಿರ್ವಹಣೆ ಮಾಡಲು ಸಧ್ಯದಲ್ಲೇ ಟೆಂಡರ್ ಕರೆಯಲಾಗುತ್ತದೆ. ಜೊತೆಗೆ ಸರ್ಕಾರದ ಮೀಟರ್ ದರದಲ್ಲೇ ಆಟೋ ಚಾರ್ಜ್ ಪಡೆಯಲಾಗುತ್ತದೆ. ಪ್ರಯಾಣಿಕರಿಂದ ಒನ್ ಟು ಡಬಲ್ ಹಣ ಕೇಳುವಂತಿಲ್ಲ. ಸರ್ಕಾರದ ನಿಯಮದ ಪ್ರಕಾರ, ಒಂದು ಕಿಮೀ ಗೆ 15 ರೂಪಾಯಿ, ಎರಡು ಕಿಮೀಗೆ 30 ರೂ. ಮಾತ್ರ ದರ ಪಡೆದುಕೊಳ್ಳಬೇಕು.

ಎರಡು ರೂ. ಟೋಕನ್ ಪಡೆದು ಪ್ರಯಾಣ

ಕೇವಲ ಎರಡು ರೂಪಾಯಿ ಟೋಕನ್ ತೆಗೆದುಕೊಂಡು ತಮ್ಮ ಸ್ಥಳಕ್ಕೆ ಪ್ರಯಾಣ ಮಾಡಬಹುದು. ಈ ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್​ಗಳಲ್ಲಿ ಮಹಿಳಾ ಮತ್ತು ಪುರುಷ ಚಾಲಕರು ಇರಲಿದ್ದು, ಎಲ್ಲಾ ಪ್ರಯಾಣಿಕರು ಪ್ರಯಾಣ ಮಾಡಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ