AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಲಾಸ್ಟಿಕ್ ಮುಕ್ತ ರಾಮನಗರಕ್ಕೆ ಮಾದರಿ ಹೆಜ್ಜೆ: ನಗರಸಭೆಯಿಂದ BVM ಯಂತ್ರ ಜಾರಿ; ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ

ರಾಮನಗರ ನಗರಸಭೆಯು ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ 'ಬ್ಯಾಗ್ ವೆಂಡಿಂಗ್ ಮೆಷಿನ್' (BVM) ಪರಿಚಯಿಸಿದೆ. ಇದು ರಾಜ್ಯದಲ್ಲೇ ಪ್ರಥಮ ಪ್ರಯತ್ನ. ಸಾರ್ವಜನಿಕರು 10 ರೂ.ಗೆ ಬಟ್ಟೆ ಬ್ಯಾಗ್ ಪಡೆಯಬಹುದು. ಪ್ಲಾಸ್ಟಿಕ್ ಬಳಕೆಗೆ ಪರ್ಯಾಯ ಒದಗಿಸುವ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದು ಪ್ಲಾಸ್ಟಿಕ್ ನಿಯಂತ್ರಣಕ್ಕೆ ಹೊಸ ದಾರಿ ತೋರಿಸಿದೆ.

ಪ್ಲಾಸ್ಟಿಕ್ ಮುಕ್ತ ರಾಮನಗರಕ್ಕೆ ಮಾದರಿ ಹೆಜ್ಜೆ: ನಗರಸಭೆಯಿಂದ BVM ಯಂತ್ರ ಜಾರಿ; ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ
ಪ್ಲಾಸ್ಟಿಕ್ ಮುಕ್ತ ರಾಮನಗರ
ಪ್ರಶಾಂತ್​ ಬಿ.
| Edited By: |

Updated on: Sep 16, 2026 | 9:11 AM

Share

ರಾಮನಗರ, ಸೆ.16: ರೇಷ್ಮೆ ನಗರಿ ರಾಮನಗರವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಪರಿವರ್ತಿಸಲು ರಾಮನಗರ ನಗರಸಭೆ ಕಂಕಣಬದ್ಧವಾಗಿದೆ. ಎಷ್ಟು ಬಾರಿ ದಾಳಿ ನಡೆಸಿ ದಂಡ ವಿಧಿಸಿದರೂ ನಿಯಂತ್ರಣಕ್ಕೆ ಬಾರದ ಪ್ಲಾಸ್ಟಿಕ್ ಹಾವಳಿಗೆ ಶಾಶ್ವತ ಬ್ರೇಕ್ ಹಾಕಲು ನಗರಸಭೆಯು ರಾಜ್ಯದಲ್ಲೇ ಪ್ರಥಮ ಬಾರಿಗೆ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ. ಪ್ಲಾಸ್ಟಿಕ್ ಕವರ್‌ಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ‘ಬ್ಯಾಗ್ ವೆಂಡಿಂಗ್ ಮೆಷಿನ್’ (Bag Vending Machine – BVM) ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ.

ನಗರಸಭೆಯು ಸಾರ್ವಜನಿಕರ ಅನುಕೂಲಕ್ಕಾಗಿ ರಾಮನಗರದ ಪ್ರಮುಖ ಹಾಗೂ ಆಯಕಟ್ಟಿನ 8 ಸ್ಥಳಗಳಲ್ಲಿ ಈ ‘ಬ್ಯಾಗ್ ವೆಂಡಿಂಗ್ ಮೆಷಿನ್’ಗಳನ್ನು ಯಶಸ್ವಿಯಾಗಿ ಅಳವಡಿಸಿದೆ. ಮಾರುಕಟ್ಟೆ ಅಥವಾ ವ್ಯಾಪಾರಕ್ಕಾಗಿ ಹೊರಬರುವ ಸಾರ್ವಜನಿಕರು ಮನೆಯಿಂದ ಬ್ಯಾಗ್ ತರಲು ಮರೆತಿದ್ದರೆ, ಈ ಮೆಷಿನ್‌ಗೆ ಕೇವಲ 10 ರೂಪಾಯಿಯ ನಾಣ್ಯ (Coin) ಹಾಕಿದರೆ ತಕ್ಷಣವೇ ಒಂದು ಗಟ್ಟಿಮುಟ್ಟಾದ ಬಟ್ಟೆ ಬ್ಯಾಗ್ ಹೊರಬರುತ್ತದೆ.

ಸದ್ಯಕ್ಕೆ ನಾಣ್ಯ ಹಾಕಿ ಬ್ಯಾಗ್ ಪಡೆಯುವ ವ್ಯವಸ್ಥೆಯಿದ್ದು, ಮುಂದಿನ ದಿನಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಯುಪಿಐ ಮೂಲಕ ಪಾವತಿಸಿ ಬ್ಯಾಗ್ ಪಡೆದುಕೊಳ್ಳುವ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ನಗರಸಭೆ ಸಿದ್ಧತೆ ನಡೆಸಿದೆ. “ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ನಗರದಾದ್ಯಂತ BVM ಯಂತ್ರಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.” ಎಂದು ರಾಮನಗರ ನಗರಸಭೆ ಅಧ್ಯಕ್ಷರು ಕೆ. ಶೇಷಾದ್ರಿ ಎಂದು ಹೇಳಿದ್ದಾರೆ.

ಈ ಹಿಂದೆ ನಗರಸಭೆ ಅಧಿಕಾರಿಗಳು ನೂರಾರು ಅಂಗಡಿ-ಮುಂಗಟ್ಟುಗಳ ಮೇಲೆ ಪ್ಲಾಸ್ಟಿಕ್ ರೈಡ್ ಮಾಡಿ ಭಾರಿ ಮೊತ್ತದ ದಂಡ ವಿಧಿಸಿದ್ದರು. ಆದಾಗ್ಯೂ ಪ್ಲಾಸ್ಟಿಕ್ ಕವರ್‌ಗಳ ಬಳಕೆ ಎಗ್ಗಿಲ್ಲದೆ ಸಾಗಿತ್ತು. ಈ ಹಿನ್ನೆಲೆಯಲ್ಲಿ ಕೇವಲ ಶಿಕ್ಷೆಯೊಂದೇ ಪರಿಹಾರವಲ್ಲ, ಸಾರ್ವಜನಿಕರಲ್ಲಿ ಪರ್ಯಾಯ ಬಟ್ಟೆ ಬ್ಯಾಗ್ ಬಳಸುವಂತೆ ಜಾಗೃತಿ ಮೂಡಿಸುವುದು ಸೂಕ್ತ ಎಂದು ಭಾವಿಸಿ ಈ ಯೋಜನೆಗೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ: ಎನ್​​​​ಡಬ್ಲ್ಯೂಕೆಆರ್​​ಟಿಸಿಯಲ್ಲಿ ಗಣೇಶ ಉತ್ಸವಕ್ಕೂ ವಿಘ್ನ: ಡಿಪೋ, ವರ್ಕ್‌ಶಾಪ್‌ಗಳಲ್ಲಿ ಪ್ರಸಾದ ತಯಾರಿಗೆ ತಡೆ; ಅಧಿಕಾರಿಗಳ ಆದೇಶಕ್ಕೆ ಸಿಬ್ಬಂದಿ ಅಕ್ರೋಶ

ಜಿಲ್ಲೆಯಲ್ಲೇ ಪ್ರಥಮ ಹಾಗೂ ರಾಜ್ಯದಲ್ಲೇ ಮಾದರಿ ಎನಿಸಿರುವ ಈ ಯೋಜನೆಗೆ ಸ್ಥಳೀಯ ಸಾರ್ವಜನಿಕರು ಹಾಗೂ ವರ್ತಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ನಗರದ ಇನ್ನುಳಿದ ಜನನಿಬಿಡ ಪ್ರದೇಶಗಳಿಗೂ ಈ ಯಂತ್ರಗಳನ್ನು ವಿಸ್ತರಿಸಲು ನಗರಸಭೆ ಯೋಜಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರವಿ ಸಿಂಹ ರಾಶಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಸಿಂಹ ರಾಶಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮಲ್ಲತ್ತಹಳ್ಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ
ಮಲ್ಲತ್ತಹಳ್ಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ
ಚೆನ್ನೈನಲ್ಲಿ 12,000 ಶಂಖಗಳಿಂದ ಸಿದ್ಧವಾಯ್ತು ಗಣೇಶನ ಮೂರ್ತಿ!
ಚೆನ್ನೈನಲ್ಲಿ 12,000 ಶಂಖಗಳಿಂದ ಸಿದ್ಧವಾಯ್ತು ಗಣೇಶನ ಮೂರ್ತಿ!
ಪಂಚಾಯ್ತಿ ಎಲೆಕ್ಷನ್ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಡಿಸಿಎಂ ಪರಮೇಶ್ವರ್
ಪಂಚಾಯ್ತಿ ಎಲೆಕ್ಷನ್ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಡಿಸಿಎಂ ಪರಮೇಶ್ವರ್
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!