ಇದು ಇಡೀ ರಾಜ್ಯಕ್ಕೆ ಅನ್ವಯ.. ಲಾಕ್‌ಡೌನ್ ವೇಳೆ ಸೀಜ್ ಮಾಡಿದ್ದ ವಾಹನಗಳ ರಿಲೀಸ್ ಮಾಡಲು ಹೈಕೋರ್ಟ್ ಆದೇಶ

coronavirus lockdown: ಕೊರೊನಾ ಸೋಂಕನ್ನು ನಿಯಂತ್ರಿಸಲು ಜಾರಿಯಲ್ಲಿದ್ದ ಲಾಕ್‌ಡೌನ್ ವೇಳೆ ನಿಯಮ ಉಲ್ಲಂಘಿಸಿದವರಿಂದ ಪೊಲೀಸರು ಲಕ್ಷಾಂತರ ವಾಹನಗಳನ್ನು ಸೀಜ್ ಮಾಡಿದ್ದರು. ಇದರಿಂದ ಠಾಣೆಗಳ ಆವರಣದಲ್ಲಿ ವಾಹನ ನಿಲುಗಡೆಗೆ ಸ್ಥಳವಿಲ್ಲದೇ ಸಮಸ್ಯೆಯಾಗಿತ್ತು. ಈ ಬಗ್ಗೆ ಸೂಕ್ತ ನಿರ್ದೇಶನ ಕೋರಿ ರಾಜ್ಯ ಸರ್ಕಾರ ಕೋರ್ಟ್​ ಮೊರೆ ಹೋಗಿತ್ತು.

ಇದು ಇಡೀ ರಾಜ್ಯಕ್ಕೆ ಅನ್ವಯ.. ಲಾಕ್‌ಡೌನ್ ವೇಳೆ ಸೀಜ್ ಮಾಡಿದ್ದ ವಾಹನಗಳ ರಿಲೀಸ್ ಮಾಡಲು ಹೈಕೋರ್ಟ್ ಆದೇಶ
ಲಾಕ್‌ಡೌನ್ ವೇಳೆ ಸೀಜ್ ಆಗಿದ್ದ ವಾಹನ ರಿಲೀಸ್: ಹೈಕೋರ್ಟ್ ಗ್ರೀನ್‌ಸಿಗ್ನಲ್

ಬೆಂಗಳೂರು: ಕೊರೊನಾ ಸೋಂಕನ್ನು ಲಾಕ್​ ಮಾಡಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಲಾಕ್‌ಡೌನ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ಪೊಲೀಸರು ಸೀಜ್ ಮಾಡಿದ್ದ ವಾಹನಗಳನ್ನು ರಿಲೀಸ್ ಮಾಡುವಂತೆ ಹೈಕೋರ್ಟ್ ಸೂಚಿಸಿದೆ. ಆದರೆ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ದಂಡ ಕಟ್ಟಿಸಿಕೊಂಡು ಬಿಡುವಂತೆ ಹೈಕೋರ್ಟ್ ಸೂಚಿಸಿದೆ. ವಾಹನ ಸವಾರರು ವಾಹನ ರಿಲೀಸ್‌ ಮಾಡಿಸಿಕೊಳ್ಳಲು ಕೋರ್ಟ್‌ಗೆ ಓಡಾಡುವ ಅಗತ್ಯವಿಲ್ಲ. ಪೊಲೀಸರಿಗೇ ವಾಹನ ರಿಲೀಸ್ ಮಾಡುವ ಅಧಿಕಾರವನ್ನೂ ಹೈಕೋರ್ಟ್ ನೀಡಿದೆ.

ರಾಜ್ಯದಲ್ಲಿ ವಶಪಡಿಸಿಕೊಂಡಿದ್ದ ಅಷ್ಟೂ ವಾಹನಗಳನ್ನು ರಿಲೀಸ್​ ಮಾಡಿ…

ಕೊರೊನಾ ಸೋಂಕನ್ನು ನಿಯಂತ್ರಿಸಲು ಜಾರಿಯಲ್ಲಿದ್ದ ಲಾಕ್‌ಡೌನ್ ವೇಳೆ ನಿಯಮ ಉಲ್ಲಂಘಿಸಿದವರಿಂದ ಪೊಲೀಸರು ಲಕ್ಷಾಂತರ ವಾಹನಗಳನ್ನು ಸೀಜ್ ಮಾಡಿದ್ದರು. ಇದರಿಂದ ಠಾಣೆಗಳ ಆವರಣದಲ್ಲಿ ವಾಹನ ನಿಲುಗಡೆಗೆ ಸ್ಥಳವಿಲ್ಲದೇ ಸಮಸ್ಯೆಯಾಗಿತ್ತು. ಈ ಬಗ್ಗೆ ಸೂಕ್ತ ನಿರ್ದೇಶನ ಕೋರಿ ರಾಜ್ಯ ಸರ್ಕಾರ ಕೋರ್ಟ್​ ಮೊರೆ ಹೋಗಿತ್ತು. ಸರ್ಕಾರದಿಂದ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಇಂದು ಈ ಆದೇಶ ನೀಡಿದೆ.

ರಾಜ್ಯದಲ್ಲಿ ವಶಪಡಿಸಿಕೊಂಡಿದ್ದ ಅಷ್ಟೂ ವಾಹನಗಳನ್ನು ರಿಲೀಸ್​ ಮಾಡುವಂತೆ ಹೈಕೋರ್ಟ್​ ಸೂಚನೆ ನೀಡಿದೆ. ವಾಹನ ಮಾಲೀಕರು ಕೋರ್ಟ್​​ಗಳತ್ತ ಬಂದು ಜನಸಂದಣಿ ಆಗುವುದು ಬೇಡ. ಜನ ಜಮಾವಣೆಯಾದರೆ ಮತ್ತೆ ಕೊರೊನಾ ಸೋಂಕು ಹಬ್ಬಲು ಸಹಕಾರಿಯಾಗುತ್ತದೆ. ಹಾಗಾಗಿ ವಾಹನಗಳ ಮಾಲೀಕರಿಂದ ದಂಡ ಕಟ್ಟಿಸಿಕೊಂಡು, ಬಾಂಡ್​ ಬರೆಯಿಸಿಕೊಂಡು ಇಡೀ ರಾಜ್ಯದಲ್ಲಿ ಆಯಾ ಪೊಲೀಸ್​ ಠಾಣೆಗಳ ವ್ಯಾಪ್ತಿಯಲ್ಲೇ ಕೇಸುಗಳನ್ನು ಇತ್ಯರ್ಥ ಪಡಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ.

ಇದನ್ನೂ ಓದಿ:

Kirik Party: ನಾಯಿ ಜೊತೆ ಬೈಕ್‌ನಲ್ಲಿ ಯುವತಿ ಜಾಲಿ ರೈಡ್​; ಮೈಸೂರಲ್ಲಿ ವಾಹನ ತಪಾಸಣೆ ವೇಳೆ ಹೈಡ್ರಾಮಾ: ವಿಡಿಯೋ ನೋಡಿ

(release the vehicles seized during coronavirus lockdown in karnataka orders high court)

ಲಾಕ್​ಡೌನ್​ನಿಂದ ಬೆಂಗಳೂರಲ್ಲಿ ಅಪರಾಧ ಪ್ರಕರಣ ಇಳಿಕೆ, ಆನ್ಲೈನ್ ಚೀಟಿಂಗ್ ಏರಿಕೆ