AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿವಿಂಗ್ ರಿಲೇಷನ್​ಶಿಪ್​​ನಲ್ಲಿದ್ದ ರೇಡಿಯೋ ಜಾಕಿ ಬೆಂಗಳೂರಿನಲ್ಲಿ ಆತ್ಮಹತ್ಯೆ: ಡೆತ್​​​ನೋಟ್​​​ನಲ್ಲಿ ಸ್ನೇಹಿತನ ಅಸಲಿ ಮುಖ ಬಯಲು

ಬೆಂಗಳೂರಿನ ಮಾನ್ಯತಾ ಟೆಕ್​ಪಾರ್ಕ್ ಬಳಿಯ ಅಪಾರ್ಟ್​ಮೆಂಟ್​ ಫ್ಲ್ಯಾಟ್​ನಲ್ಲಿ ಮುಂಬೈ ಮೂಲದ ರೇಡಿಯೋ ಜಾಕಿ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನಡೆದಿದೆ. ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಿಯಕರನ ಹೆಸರು ಉಲ್ಲೇಖಿಸಿದ್ದಾರೆ. ಸದ್ಯ ನಗರದ ಅಮೃತಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.

ಲಿವಿಂಗ್ ರಿಲೇಷನ್​ಶಿಪ್​​ನಲ್ಲಿದ್ದ ರೇಡಿಯೋ ಜಾಕಿ ಬೆಂಗಳೂರಿನಲ್ಲಿ ಆತ್ಮಹತ್ಯೆ: ಡೆತ್​​​ನೋಟ್​​​ನಲ್ಲಿ ಸ್ನೇಹಿತನ ಅಸಲಿ ಮುಖ ಬಯಲು
ಆತ್ಮಹತ್ಯೆImage Credit source: ipleaders
Shivaprasad B
| Edited By: |

Updated on: May 26, 2026 | 8:54 PM

Share

ಬೆಂಗಳೂರು, ಮೇ26: ನಗರದಲ್ಲಿ ಮುಂಬೈ ಮೂಲದ ರೇಡಿಯೋ ಜಾಕಿಯಾಗಿದ್ದ (RJ) ಆತ್ಮಹತ್ಯೆಗೆ (death) ಶರಣಾಗಿದ್ದಾರೆ. ಮನೀಷಾ (49) ಆತ್ಮಹತ್ಯೆ ಮಾಡಿಕೊಂಡ ರೇಡಿಯೋ ಜಾಕಿ. ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಅಪಾರ್ಟ್ಮೆಂಟ್‌ನ ಫ್ಲಾಟ್‌ನಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮುಖ್ಯಾಂಶಗಳು

  • ಫ್ಲಾಟ್‌ನಲ್ಲಿ ರೇಡಿಯೋ ಜಾಕಿ ಆತ್ಮಹತ್ಯೆ
  • ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ RJ
  • ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

ವಿಚ್ಛೇದನದ ಬಳಿಕ ಬೆಂಗಳೂರಿಗೆ ಬಂದಿದ್ದ ಮನೀಷಾ

ಮುಂಬೈನಲ್ಲಿ ರೇಡಿಯೋ ಜಾಕಿಯಾಗಿದ್ದ ಮನೀಷಾ ಅವರು, 2024ರಲ್ಲಿ ತಮ್ಮ ಪತಿಯಿಂದ ವಿಚ್ಛೇದನ ಪಡೆದಿದ್ದರು. ತದನಂತರ ಕಳೆದ ಏಪ್ರಿಲ್ ತಿಂಗಳಷ್ಟೇ ಬೆಂಗಳೂರಿಗೆ ಆಗಮಿಸಿದ್ದ ಅವರು, ಮಾನ್ಯತಾ ಟೆಕ್ ಪಾರ್ಕ್ ಬಳಿ ಹೊಸದಾಗಿ ಫ್ಲಾಟ್ ಖರೀದಿಸಿ ಒಂಟಿಯಾಗಿ ವಾಸಿಸುತ್ತಿದ್ದರು. ಕಳೆದ ಮೇ 23ರಂದು ಮನೀಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಸಂಬಂಧಿಕರು ಫೋನ್ ಮಾಡಿದಾಗ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ನನ್ನ ಸಾವಿಗೆ ಹರ್ಷವರ್ಧನ್ ಸಿಂಗ್ ಬನ್ಸಾಲ್ ಕಾರಣ

ಇನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮನೀಷಾ ಅವರು ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಸಾವಿಗೆ ಹರ್ಷವರ್ಧನ್ ಸಿಂಗ್ ಬನ್ಸಾಲ್ ಕಾರಣ ಎಂದು ಉಲ್ಲೇಖಿಸಿದ್ದಾರೆ. ‘ನಾನು ಮತ್ತು ಹರ್ಷವರ್ಧನ್ ಸಿಂಗ್ ರಿಲೇಷನ್‌ಶಿಪ್‌ನಲ್ಲಿದ್ದೆವು. ಈ ವಿಷಯ ಆತನ ಮನೆಯವರಿಗೂ ತಿಳಿದಿತ್ತು. ಆದರೆ ಆತ ಪ್ರತಿದಿನ ನನಗೆ ತೀವ್ರ ಮಾನಸಿಕ ಕಿರುಕುಳ ನೀಡುತ್ತಿದ್ದ. ಆತನ ಕಿರುಕುಳವನ್ನು ತಡೆಯಲಾರದೆ ಮನನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಮುಂದುವರೆದ ಕೃಷಿ ಹೊಂಡ ಸಾವಿನ ಸರಣಿ: 20 ದಿನದಲ್ಲಿ ಮಕ್ಕಳು ಸೇರಿ 9 ಜನ ಸಾವು

ಸದ್ಯ ಘಟನಾ ಸ್ಥಳಕ್ಕೆ ಅಮೃತಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಡೆತ್‌ನೋಟ್ ಹಾಗೂ ಮನೀಷಾ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Shivaprasad B
Shivaprasad B
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?
ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರೂಬಿಯೋ
ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರೂಬಿಯೋ
ಗಲಾಟೆ ವೇಳೆ ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ
ಗಲಾಟೆ ವೇಳೆ ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ
ಸಿದ್ದರಾಮಯ್ಯ-ರಾಹುಲ್ ಗಾಂಧಿ ಹೈವೋಲ್ಟೇಜ್ ಸಭೆಯ ಇನ್ಸ್​​​ಸೈಡ್ ಮಾಹಿತಿ
ಸಿದ್ದರಾಮಯ್ಯ-ರಾಹುಲ್ ಗಾಂಧಿ ಹೈವೋಲ್ಟೇಜ್ ಸಭೆಯ ಇನ್ಸ್​​​ಸೈಡ್ ಮಾಹಿತಿ
ಬಿಜೆಪಿ ಹೈಕಮಾಂಡ್​ಗೆ ಬ್ಲಾಕ್​ಮೇಲ್ ತಂತ್ರ ಗೊತ್ತಾಗಿದೆ: ಯತ್ನಾಳ್
ಬಿಜೆಪಿ ಹೈಕಮಾಂಡ್​ಗೆ ಬ್ಲಾಕ್​ಮೇಲ್ ತಂತ್ರ ಗೊತ್ತಾಗಿದೆ: ಯತ್ನಾಳ್