ಟಾಲಿವುಡ್ ಜನಪ್ರಿಯ ಪೋಷಕ ನಟಿ ಪಾವಲ ಶಾಮಲ ನಿಧನ
Telugu Movie Industry: ತೆಲುಗು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ, ಹಾಸ್ಯ ನಟಿಯಾಗಿ ನಟಿಸಿದ್ದ ಪಾವಲ ಶಾಮಲ ನಿಧನ ಹೊಂದಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಪಾವಲ ಶಾಮಲ ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಚಿತ್ರರಂಗದ ಇನ್ನೂ ಹಲವರು ಆರ್ಥಿಕ ಸಹಾಯ ಸಹ ಮಾಡಿದ್ದರು. ಆದರೆ ಕೊನೆಗೂ ಅವರು ಇಂದು (ಜುಲೈ 28) ಬೆಳಿಗ್ಗೆ ಹೈದರಾಬಾದ್ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

ಮುಖ್ಯಾಂಶಗಳು
- ತೆಲುಗು ಚಿತ್ರರಂಗದ ಜನಪ್ರಿಯ ಪೋಷಕ ನಟಿ ಪಾವಲ ಶಾಮಲಾ ನಿಧನ
- 1984 ರಿಂದಲೂ ಪಾವಲ ಶಾಮಲ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು.
- ಕಳೆದ ಕೆಲ ವರ್ಷಗಳಿಂದ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು.
ತೆಲುಗು ಸಿನಿಮಾಗಳಲ್ಲಿ (Telugu Cinema) ಪೋಷಕ ನಟಿಯಾಗಿ, ಹಾಸ್ಯ ನಟಿಯಾಗಿ ನಟಿಸಿದ್ದ ಪಾವಲ ಶಾಮಲ ನಿಧನ ಹೊಂದಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಪಾವಲ ಶಾಮಲ ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಚಿತ್ರರಂಗದ ಇನ್ನೂ ಹಲವರು ಆರ್ಥಿಕ ಸಹಾಯ ಸಹ ಮಾಡಿದ್ದರು. ಆದರೆ ಕೊನೆಗೂ ಅವರು ಇಂದು (ಜುಲೈ 28) ಬೆಳಿಗ್ಗೆ ಹೈದರಾಬಾದ್ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ರಂಗಭೂಮಿಯಿಂದ ನಟನೆ ಶುರು ಮಾಡಿದ್ದ ಶಾಮಲ ಅವರಿಗೆ ‘ಪಾವಲ’ ಹೆಸರಿನ ನಾಟಕ ದೊಡ್ಡ ಹೆಸರು ತಂದುಕೊಟ್ಟಿತ್ತು. ಅದೇ ಕಾರಣಕ್ಕೆ ಅವರನ್ನು ಪಾವಲ ಶಾಮಲ ಎಂದೇ ಕರೆಯಲಾಗುತ್ತಿತ್ತು. 1984 ರಲ್ಲಿ ಅವರು ಮೊದಲ ಬಾರಿಗೆ ‘ಚಾಲೆಂಜ್’ ಸಿನಿಮಾನಲ್ಲಿ ನಟಿಸಿದರು. ಮೂರಕ್ಕೂ ಹೆಚ್ಚು ದಶಕಗಳಲ್ಲಿ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರರಂಗದ ಎಲ್ಲ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿಯೂ ಪಾವಲ ಶಾಮಲ ನಟಿಸಿದ್ದಾರೆ.
ಪಾವಲ ಶಾಮಲ ತಮ್ಮ ಚುರುಕು ನಟನೆ, ಅದ್ಭುತ ಟೈಮಿಂಗ್ನಿಂದಾಗಿ ಚಿತ್ರರಂಗದಲ್ಲಿ ಹೆಸರಾಗಿದ್ದರು. ಅವರು ನಟಿಸಿರುವ ಹಲವು ಹಾಸ್ಯ ದೃಶ್ಯಗಳು ಈಗಲೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅವರ ನಟನೆಯ ದೃಶ್ಯಗಳನ್ನು ಮೀಮ್ಗಳನ್ನಾಗಿ ಸಹ ಬಳಸಿಕೊಳ್ಳಲಾಗುತ್ತದೆ. 2019 ರಲ್ಲಿ ಬಿಡುಗಡೆ ಆದ ‘ಮತ್ತು ವದಲರಾ’ ಅವರ ಕೊನೆಯ ಸಿನಿಮಾ ಆಗಿತ್ತು.
ಇದನ್ನೂ ಓದಿ:ಎ ಸರ್ಟಿಫಿಕೇಟ್ ಸಿನಿಮಾಗೆ ಮಕ್ಕಳನ್ನು ಕರೆತಂದ ಪೋಷಕರು; ‘ಜನ ನಾಯಗನ್’ ಪ್ರದರ್ಶನ ಬಂದ್
ಜೀವನದುದ್ದಕ್ಕೂ ಕಷ್ಟಗಳನ್ನೇ ನೋಡಿದ್ದ ಶಾಮಲ, ಸಣ್ಣ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡರು. ಹತ್ತನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದ ಶಾಮಲ ಆ ಬಳಿಕ ಮದುವೆ ಆದರು ಆದರೆ ಮಗಳು ಜನಿಸಿದ ಬಳಿಕ ಪತಿಯೂ ನಿಧನ ಹೊಂದಿದರು. ಸಿನಿಮಾ, ನಾಟಕಗಳಲ್ಲಿ ನಟಿಸುತ್ತಾ ಜೀವನ ಮಾಡಿದ್ದ ಶಾಮಲಗೆ ಅನಾರೋಗ್ಯ ಕಾಡಿತ್ತು. ಅವರು ಪಾರ್ಕಿನ್ಸನ್ ರೋಗಕ್ಕೆ ತುತ್ತಾದರು. ಆ ಬಳಿಕ ಹೃದಯ ಸಂಬಂಧಿ ಅನಾರೋಗ್ಯವೂ ಅವರನ್ನು ಕಾಡಲು ಆರಂಭಿಸಿತು. ಅವರ ಪುತ್ರಿ ಮಾಧವಿ ಸಹ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆರ್ಥಿಕವಾಗಿ ಸಂಪೂರ್ಣವಾಗಿ ಜರ್ಜರಿತವಾಗಿದ್ದರು ಶ್ಯಾಮಲ.
ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಇನ್ನೂ ಕೆಲವು ಸ್ಟಾರ್ ನಟರು ಶಾಮಲ ಅವರಿಗೆ ಆರ್ಥಿಕ ಸಹಾಯ ಮಾಡಿದರು. ತೆಲಂಗಾಣ ಸರ್ಕಾರವು ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ಮಾಸಾಶನ ಘೋಷಿಸಿತು. ಜೊತೆಗೆ ಡಬ್ಬಲ್ ಬೆಡ್ ರೂಂ ಮನೆ ನೀಡುವುದಾಗಿಯೂ ಘೋಷಿಸಿತ್ತು. ಇಂದು ಬೆಳಿಗ್ಗೆ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಅವರು ನಿಧನ ಹೊಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




