AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತದಾರರ ಪಟ್ಟಿ ಪರಿಷ್ಕರಣೆ: 5.54 ಕೋಟಿ ನಮೂನೆಗಳ ವಿತರಣೆ ಪೂರ್ಣ; ASDDO ಪಟ್ಟಿಯಲ್ಲಿ 52.97 ಲಕ್ಷ ಮತದಾರರು !

Karnataka Voter List Revision: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿ 5.54 ಕೋಟಿ ನಮೂನೆಗಳ ವಿತರಣೆ ಪೂರ್ಣಗೊಂಡಿದ್ದು, ಲಭ್ಯ ಮಾಹಿತಿ ಆಧಾರದ ಮೇಲೆ 52.97 ಲಕ್ಷ ಮತದಾರರನ್ನು ASDDO ಪಟ್ಟಿಯಲ್ಲಿ ಗುರುತಿಸಲಾಗಿದೆ. ಇದುವರೆಗೆ 3.85 ಕೋಟಿ ನಮೂನೆಗಳು ಸಲ್ಲಿಕೆಯಾಗಿದ್ದು, 1.56 ಕೋಟಿ ಮತದಾರರು ಸೆಲ್ಫ್​​ ಮ್ಯಾಪಿಂಗ್​​ ಮಾಡಿದ್ದಾರೆ. 1.93 ಕೋಟಿ ಮಂದಿ ಪ್ರೊಜೆನಿ ಮ್ಯಾಪಿಂಗ್ ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ: 5.54 ಕೋಟಿ ನಮೂನೆಗಳ ವಿತರಣೆ ಪೂರ್ಣ; ASDDO ಪಟ್ಟಿಯಲ್ಲಿ 52.97 ಲಕ್ಷ ಮತದಾರರು !
ಸಾಂದರ್ಭಿಕ ಚಿತ್ರImage Credit source: PTI
ಪ್ರಸನ್ನ ಹೆಗಡೆ
|

Updated on:Jul 24, 2026 | 4:20 PM

Share

ಮುಖ್ಯಾಂಶಗಳು

  • ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ
  • ASDDO ಪಟ್ಟಿಯಲ್ಲಿ 52.97 ಲಕ್ಷ ಮತದಾರರು
  • ಇನ್ನೂ ಶೇ.69.51 ಮಾಹಿತಿ ಮಾತ್ರ ಡಿಜಿಟಲೀಕರಣ

ಬೆಂಗಳೂರು, ಜುಲೈ 24: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಮಹತ್ವದ ಹಂತ ತಲುಪಿದ್ದು, ರಾಜ್ಯದ ಬೂತ್ ಮಟ್ಟದ ಅಧಿಕಾರಿಗಳು (BLO) 5.54 ಕೋಟಿ ಎಣಿಕೆ ನಮೂನೆಗಳ ಶೇ.100ರಷ್ಟು ವಿತರಣೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ಆದರೆ, 52.97 ಲಕ್ಷ ಮತದಾರರನ್ನು ‘ASDDO’ (Absent, Shifted, Dead, Duplicate and Others) ವಿಭಾಗದಲ್ಲಿ ಗುರುತಿಸಲಾಗಿದ್ದು, ಆಗಸ್ಟ್ 17ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರದು ಎಂದು ತಿಳಿಸಲಾಗಿದೆ. ಒಂದೊಮ್ಮೆ ಪರಿಶೀಲನೆಯಲ್ಲಿ ತಪ್ಪಾಗಿದ್ದರೆ ಕ್ರಮದ ಭರವಸೆಯನ್ನೂ ನೀಡಲಾಗಿದೆ.

ಇನ್ನೂ ಶೇ.69.51 ಮಾಹಿತಿ ಮಾತ್ರ ಡಿಜಿಟಲೀಕರಣ

ಜೂನ್ 29ರಂದು ಆರಂಭವಾದ ಮನೆ-ಮನೆ ಸಮೀಕ್ಷೆಯಲ್ಲಿ 59,050 BLOಗಳು ನಮೂನೆಗಳನ್ನು ವಿತರಿಸಿದ್ದಾರೆ. ಆದರೆ, ಭರ್ತಿ ಮಾಡಿದ ನಮೂನೆಗಳನ್ನು BLO ಆ್ಯಪ್‌ಗೆ ಅಪ್‌ಲೋಡ್ ಮಾಡುವ ಡಿಜಿಟಲೀಕರಣ ಕಾರ್ಯ ಶೇ.69.51ರಷ್ಟೇ ಪೂರ್ಣಗೊಂಡಿದೆ. 2002ರ SIR ದಾಖಲೆಗಳ ಸೆಲ್ಫ್​​ ಮ್ಯಾಪಿಂಗ್​​ ಹಾಗೂ ಪ್ರೊಜೆನಿ ಮ್ಯಾಪಿಂಗ್ ಮಾಹಿತಿ ಪತ್ತೆಹಚ್ಚುವಲ್ಲಿ ಉಂಟಾಗಿರುವ ತೊಂದರೆಯಿಂದ ಡಿಜಿಟಲೀಕರಣ ನಿಧಾನವಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: SIR ಕರ್ತವ್ಯದ ವೇಳೆ ಮತ್ತೊಂದು ದುರಂತ; ಬಿಎಲ್‌ಒ ಶಿಕ್ಷಕಿ ಹೃದಯಾಘಾತದಿಂದ ಸಾವು!

ಆಗಸ್ಟ್ 8ರೊಳಗೆ ನಮೂನೆ ಸಲ್ಲಿಸುವ ಎಲ್ಲ ಮತದಾರರ ಹೆಸರನ್ನು ಆಗಸ್ಟ್ 17ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. SIR ಮ್ಯಾಪಿಂಗ್ ಮಾಹಿತಿ ಇಲ್ಲದಿದ್ದರೆ ಅಥವಾ ಹೊಂದಿಕೆಯಾಗದಿದ್ದರೆ, ಮತದಾರರಿಗೆ ನೋಟಿಸ್ ನೀಡಿ ನಮೂನೆಯ ಹಿಂಭಾಗದಲ್ಲಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸುವಂತೆ ಸೂಚಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 19ರಂದು ಪ್ರಕಟವಾಗುವ ಮೊದಲು ಚುನಾವಣಾ ನೋಂದಣಿ ಅಧಿಕಾರಿ (ERO) ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.

ಸಹಾಯಕ್ಕಾಗಿ BLO ಅಥವಾ BLA ಸಂಪರ್ಕಿಸಬಹುದು

ಡಿಜಿಟಲೀಕರಣ ಕಾರ್ಯ ಆಗಸ್ಟ್ 8ರಂದು ಪೂರ್ಣಗೊಳ್ಳಲಿದೆ. ನಮೂನೆ ಭರ್ತಿ ಮಾಡಲು ಅಥವಾ 2002ರ ದಾಖಲೆಗಳನ್ನು ಪತ್ತೆಹಚ್ಚಲು ತೊಂದರೆ ಇರುವ ಮತದಾರರು ತಮ್ಮ BLO ಅಥವಾ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳಾದ (BLA) ಸಹಾಯ ಪಡೆಯಬಹುದು. ಭರ್ತಿ ಮಾಡಿದ ನಮೂನೆಗಳನ್ನು BLOಗೆ ಸಲ್ಲಿಸಿ, ಅವರಿಂದ ಸಹಿ ಮಾಡಿದ ಸ್ವೀಕೃತಿ ಪತ್ರ ಪಡೆಯುವಂತೆ ಸೂಚಿಸಲಾಗಿದೆ.

3.85 ಕೋಟಿ ನಮೂನೆಗಳು ಸಲ್ಲಿಕೆ

ಇದುವರೆಗೆ 3.85 ಕೋಟಿ ನಮೂನೆಗಳು ಸಲ್ಲಿಕೆಯಾಗಿದ್ದು, 1.56 ಕೋಟಿ ಮತದಾರರು ಸೆಲ್ಫ್​​ ಮ್ಯಾಪಿಂಗ್​​ ಮಾಡಿದ್ದಾರೆ. 1.93 ಕೋಟಿ ಮಂದಿ ಪ್ರೊಜೆನಿ ಮ್ಯಾಪಿಂಗ್ ಪೂರ್ಣಗೊಳಿಸಿದ್ದಾರೆ. 17.19 ಲಕ್ಷ (3.1%) ನಮೂನೆಗಳು ಯಾವುದೇ ಮ್ಯಾಪಿಂಗ್ ಮಾಹಿತಿ ಇಲ್ಲದೆ ಸಲ್ಲಿಕೆಯಾಗಿವೆ. ಮ್ಯಾಪಿಂಗ್ ಮಾಹಿತಿ ಇಲ್ಲದೆ ನಮೂನೆ ಸಲ್ಲಿಸಿರುವ ಮತದಾರರಿಗೆ ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:12 pm, Fri, 24 July 26

Follow Us