AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಡವಾಗಿ ಪರೀಕ್ಷಾ ಕೇಂದ್ರ ತಲುಪಿದ್ದಕ್ಕೆ ಎಕ್ಸಾಂಗೆ ನಿರಾಕರಣೆ: ವಿದ್ಯಾರ್ಥಿಯ UPSC ಕನಸು ನುಂಗಿತಾ ಬೆಂಗಳೂರಿನ ರಸ್ತೆಗಳು?

ಬೆಂಗಳೂರಿನ ರಸ್ತೆಗಳ ದುರಾವಸ್ಥೆಯಿಂದಾಗಿ ತಡವಾಗಿ ಪರೀಕ್ಷಾ ಕೇಂದ್ರ ತಲುಪಿದ ವಿದ್ಯಾರ್ಥಿಯೊಬ್ಬ ಯುಪಿಎಸ್‌ಸಿ ಪರೀಕ್ಷೆಯಿಂದ ವಂಚಿತನಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ವೈಟ್​​ಫೀಲ್ಡ್​​ನ ತನ್ನ ಮನೆಯಿಂದ ಬೆಳಿಗ್ಗೆ 7 ಗಂಟೆಗೆ ಹೊರಟಿದ್ದರೂ ಎಕ್ಸಾಂ ಸೆಂಟರ್​​ ತಲುಪುವಾಗ ವಿದ್ಯಾರ್ಥಿಗೆ ತಡವಾಗಿದೆ. ಅಷ್ಟರಲ್ಲಾಗಲೇ ಗೇಟ್ ಕ್ಲೋಸ್ ಆಗಿದ್ದರಿಂದ ನಿಯಮಗಳ ಪ್ರಕಾರ ಪರೀಕ್ಷೆ ಬರೆಯಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎನ್ನಲಾಗಿದೆ.

ತಡವಾಗಿ ಪರೀಕ್ಷಾ ಕೇಂದ್ರ ತಲುಪಿದ್ದಕ್ಕೆ ಎಕ್ಸಾಂಗೆ ನಿರಾಕರಣೆ: ವಿದ್ಯಾರ್ಥಿಯ UPSC ಕನಸು ನುಂಗಿತಾ ಬೆಂಗಳೂರಿನ ರಸ್ತೆಗಳು?
ಸಾಂದರ್ಭಿಕ ಚಿತ್ರImage Credit source: AI Image
Vinay Kashappanavar
| Edited By: |

Updated on: May 24, 2026 | 10:55 AM

Share

ಬೆಂಗಳೂರು, ಮೇ 24: ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುವ ಬೆಂಗಳೂರಿನ (Bengaluru) ರಸ್ತೆಗಳ ದುರಾವಸ್ಥೆ ಈಗ ಮತ್ತೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಗರದ ಕಿತ್ತುಹೋದ ರೋಡ್​​ಗಳಿಂದ ವಿದ್ಯಾರ್ಥಿಯೋರ್ವ UPSC ಪರೀಕ್ಷೆಯಿಂದ ವಂಚಿತನಾಗಿರುವ ಆರೋಪ ಕೇಳಿಬಂದಿದೆ. ವೈಟ್​​ಫೀಲ್ಡ್​, ಮಹಾದೇವಪುರ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಿದ್ಯಾರ್ಥಿ ಚಾಲುಕ್ಯ ಸರ್ಕಲ್ ಆರ್. ಸಿ. ಕಾಲೇಜಿನ ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ಗೇಟ್​​ ಕ್ಲೋಸ್​​ ಆಗಿದೆ. ಹೀಗಾಗಿ ಯುಪಿಎಸ್​​ಸಿ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಯ ಶ್ರಮ ನೀರಲ್ಲಿ ಹೋಮ ಮಾಡಿದಂತಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಮುಖ್ಯಾಂಶಗಳು

  • ಮತ್ತೆ ಮುನ್ನೆಲೆಗೆ ಬಂದ ಬೆಂಗಳೂರು ರಸ್ತೆಗಳು ದುರಾವಸ್ಥೆ ವಿಚಾರ
  • ನಗರದ ರಸ್ತೆಗುಂಡಿಗಳಿಗೆ ವಿದ್ಯಾರ್ಥಿಯ UPSC ಕನಸು ಬಲಿ?
  • ವಿದ್ಯಾರ್ಥಿ ಪರೀಕ್ಷಾ ಕೇಂದ್ರ ತಲುಪುವುದರೊಳಗೆ ಗೇಟ್​​ ಕ್ಲೋಸ್​​!

ವಿದ್ಯಾರ್ಥಿಯ ಬೇಸರ

ಇನ್ನು ಹದಗೆಟ್ಟ ರಸ್ತೆಗಳ ಕಾರಣ ಪರೀಕ್ಷಾ ಕೇಂದ್ರ ತಲುಪಲು ತಡವಾಗಿ ಪರೀಕ್ಷೆಯಿಂದ ವಂಚಿತರಾಗಿರುವ ವಿದ್ಯಾರ್ಥಿ ಪ್ರಮೋದ್​​ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವೈಟ್​​ಫೀಲ್ಡ್​​ನಲ್ಲಿರುವ ತನ್ನ ಮನೆಯಿಂದ ಮುಂಜಾನೆ 7 ಗಂಟೆಗೆ ಹೊರಟಿದ್ದೆ. ಮೆಜೆಸ್ಟಿಕ್​​ನಿಂದ ಪರೀಕ್ಷಾ ಕೇಂದ್ರದವರೆಗೆ ಆಟೋದಲ್ಲಿ ಬಂದಿದ್ದೇನೆ. ವೈಟ್​​ಫೀಲ್ಡ್​​ , ಮಹಾದೇವಪುರ ರಸ್ತೆ ಸರಿಯಿಲ್ಲದ ಕಾರಣ, ಆಟೋಗಳು ಬರಲ್ಲ. ಹೀಗಾಗಿ ಪರೀಕ್ಷಾ ಕೇಂದ್ರ ತಲುಪುವಾಗ ತಡವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಯುಪಿಎಸ್​​ಸಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಅಧಿಕಾರಿಗಳಿಗೂ ಮನವಿ ಮಾಡಿದ್ದೇನೆ. ಬೆಂಗಳೂರಿನ ರೋಡ್​​ಗಳ ಸ್ಥಿತಿ ಬಗ್ಗೆ ನಿಮಗೆ ಗೊತ್ತಿದೆ. ಹೀಗಾಗಿ ಮನವಿಯನ್ನು ದಯವಿಟ್ಟು ಪರಿಗಣಿಸಿ ಎಂದಿದ್ದೆ. ಆದರೆ ಪ್ರವೇಶದ ಸ್ಕ್ರೀನಿಂಗ್ ಕ್ಲೋಸ್ ಹಿನ್ನಲೆ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ ಎಂದು ವಿದ್ಯಾರ್ಥಿ ಅಳಲುತೋಡಿಕೊಂಡಿದ್ದಾರೆ.

ಇದನ್ನೂ ಓದಿ: ತುಮಕೂರು ಮೆಟ್ರೋ ವಿಸ್ತರಣೆ ಬಗ್ಗೆ ಬಿಗ್​​​​ ಅಪ್ಡೇಟ್​ ನೀಡಿದ ಗೃಹಸಚಿವ ಡಾ. ಜಿ. ಪರಮೇಶ್ವರ್

ಇನ್ನು ಒಟ್ಟು 6 ವಿದ್ಯಾರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಕಾರಣ ಎಕ್ಸಾಂ ವಂಚಿತರಾಗಿದ್ದಾರೆ. 9 ಗಂಟೆಗೆ ಕರೆಕ್ಟ್ ಗೇಟ್ ಕ್ಲೋಸ್ ಮಾಡಿದ್ದು, ಒಂದು ನಿಮಿಷ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದ ಕಾರಣ ಯುಪಿಎಸ್​​ಸಿ ಬರೆಯಲು ಕೆಲವರಿಗೆ ಸಾಧ್ಯವಾಗಿಲ್ಲ. ನೀಟ್ ಪರೀಕ್ಷೆಯ ಗಲಾಟೆ ಗದ್ದಲಗಳ ನಡುವೆ ಬೆಂಗಳೂರು ಸೇರಿ ದೇಶಾದ್ಯಂತ ಯುಪಿಎಸ್​ಸಿ ಪ್ರಿಲಿಮ್ಸ್‌ ಪರೀಕ್ಷೆ ನಡೆದಿದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ UPSC ಪೂರ್ವಭಾವಿ ಪರೀಕ್ಷೆಗೆ ಸೂಕ್ತ ಪೊಲೀಸ್​​ ಭದ್ರತೆ ಕೈಗೊಳ್ಳಲಾಗಿದ್ದು, ರಾಜ್ಯದ ಬೆಂಗಳೂರು, ಧಾರವಾಡ ಮತ್ತು ಮೈಸೂರಿನಲ್ಲಿ ಪ್ರಿಲಿಮ್ಸ್‌ ಪರೀಕ್ಷೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಸಿಜೆಪಿ ಪ್ರತಿಭಟನೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸರ ರಜೆ ರದ್ದು
ಸಿಜೆಪಿ ಪ್ರತಿಭಟನೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸರ ರಜೆ ರದ್ದು
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ
ಬಿಯರ್ ಬಾಟಲಿಗಳಿದ್ದ ಲಾರಿ ಪಲ್ಟಿ; ಲಕ್ಷಾಂತರ ರೂ. ಮೌಲ್ಯದ ಮದ್ಯರಸ್ತೆ ಪಾಲು
ಬಿಯರ್ ಬಾಟಲಿಗಳಿದ್ದ ಲಾರಿ ಪಲ್ಟಿ; ಲಕ್ಷಾಂತರ ರೂ. ಮೌಲ್ಯದ ಮದ್ಯರಸ್ತೆ ಪಾಲು