AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಭದ್ರಾ ಡ್ಯಾಂ ಭರ್ತಿಗೆ ಕೆಲವೇ ಅಡಿ ಬಾಕಿ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಹೀಗಿದೆ

ರಾಜ್ಯದ ಮಲೆನಾಡು ಮತ್ತು ಕರವಾಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಜಲಾಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಭದ್ರಾ ಜಲಾಶಯ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ವಿವರ ಇಲ್ಲಿದೆ.

Karnataka Dam Water Level: ಭದ್ರಾ ಡ್ಯಾಂ ಭರ್ತಿಗೆ ಕೆಲವೇ ಅಡಿ ಬಾಕಿ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಹೀಗಿದೆ
ಭದ್ರ ಡ್ಯಾಂ
ವಿವೇಕ ಬಿರಾದಾರ
|

Updated on:Jul 18, 2024 | 7:20 AM

Share

ಭದ್ರಾ ಜಲಾಶಯದಲ್ಲಿ ಕಳೆದೊಂದು ವಾರದಿಂದ ನೀರು ಸಂಗ್ರಹ 8.2 ಅಡಿಯಷ್ಟು ಹೆಚ್ಚಾಗಿದೆ. ಸೋಮವಾರ 141 ಅಡಿ ನೀರು ಸಂಗ್ರಹವಿತ್ತು. ಭಾನುವಾರ ಜಲಾಶಯಕ್ಕೆ 14,150 ಕ್ಯುಸೆಕ್​ ನೀರು ಹರಿದು ಬಂದಿತ್ತು. ಭದ್ರಾ ಜಲಾಶಯ ಸೇರಿದಂತೆ ಕರ್ನಾಟಕದ 14 ಡ್ಯಾಂಗಳ (Karnataka Dam Water Level) ಇಂದಿನ (ಜು.18) ಒಳಹರಿವು, ಹೊರಹರಿವು ಮತ್ತು ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 98.73 25.41 92,736 55,063
ತುಂಗಭದ್ರಾ ಜಲಾಶಯ (Tungabhadra Dam) 497.71 105.79 39.72 9.99 49522 391
ಮಲಪ್ರಭಾ ಜಲಾಶಯ (Malaprabha Dam) 633.80 37.73 14.48 6.81 11976 194
ಕೆ.ಆರ್.ಎಸ್ (KRS Dam) 38.04 49.45 32.33 15.65 36674 2361
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 62.88 24.04 52366 0
ಕಬಿನಿ ಜಲಾಶಯ (Kabini Dam) 696.13 19.52 18.45 11.86 33640 33625
ಭದ್ರಾ ಜಲಾಶಯ (Bhadra Dam) 657.73 71.54 33.11 27.81 34544 169
ಘಟಪ್ರಭಾ ಜಲಾಶಯ (Ghataprabha Dam) 662.91 51.00 28.70 7.33 10296 522
ಹೇಮಾವತಿ ಜಲಾಶಯ (Hemavathi Dam) 890.58 37.10 26.05 16.17 25862 250
ವರಾಹಿ ಜಲಾಶಯ (Varahi Dam) 594.36 31.10 9.44 4.78 8578 0
ಹಾರಂಗಿ ಜಲಾಶಯ (Harangi Dam)​​ 871.38 8.50 6.49 4.73 9257 10,000
ಸೂಫಾ (Supa Dam) 564.00 145.33 57.40 34.96 24142 0
ನಾರಾಯಣಪುರ ಜಲಾಶಯ (Narayanpura Dam) 492.25 33.31 29.07 13.96 516251 405
ವಾಣಿವಿಲಾಸ ಸಾಗರ (VaniVilas Sagar Dam) 652.24 30.42 17.98 24.78 0 147

105.88 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಸದ್ಯ 35.47 ಟಿಎಂಸಿ ನೀರು ಸಂಗ್ರಹಾವಿದೆ. 28,143 ಕ್ಯುಸೆಕ್​ ಒಳಹರಿವು ಇದೆ. 377 ಕ್ಯುಸೆಕ್​ ಹೊರಹರಿವು ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:19 am, Thu, 18 July 24