ಬೀದರ್​: ನಾರಾಯಣಪುರ, ಚಂಡಕಾಪುರ ಗ್ರಾಮದ ಪಂಚಾಯಿತಿಗಳು ಮಾತ್ರವಲ್ಲ ಮಕ್ಕಳ ಗ್ರಂಥಾಲಯವೂ ಹೈಟೆಕ್

TV9kannada Web Team

TV9kannada Web Team | Edited By: Kiran Hanumant Madar

Updated on: Jan 24, 2023 | 10:02 PM

ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಹಾಗೂ ಚಂಡಕಾಪುರ ಗ್ರಾಮ ಪಂಚಾಯತಿಯು ಹೈಟೆಕ್​ ಪಂಚಾಯತಿ ಜೊತೆ ಮಕ್ಕಳಿಗೆ ಅನುಕೂಲವಾಗಲು ಹೈಟೆಕ್​ ಗ್ರಂಥಾಲಯವನ್ನ ನಿರ್ಮಿಸುವ ಮೂಲಕ ರಾಜ್ಯದ ಎಲ್ಲಾ ಪಂಚಾಯತಿಗಳಿಗೂ ಮಾದರಿಯಾಗಿವೆ.

ಬೀದರ್​: ನಾರಾಯಣಪುರ, ಚಂಡಕಾಪುರ ಗ್ರಾಮದ ಪಂಚಾಯಿತಿಗಳು ಮಾತ್ರವಲ್ಲ ಮಕ್ಕಳ ಗ್ರಂಥಾಲಯವೂ ಹೈಟೆಕ್
ನಾರಾಯಣಪುರ ಹಾಗೂ ಚಂಡಕಾಪುರದ ಹೈಟೆಕ್​ ಪಂಚಾಯತಿ, ಗ್ರಂಥಾಲಯ

ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಹಾಗೂ ಚಂಡಕಾಪುರ ಗ್ರಾಮ ಪಂಚಾಯತ್​ನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತ್ಯಂತ್ಯ ಸೌಲಭ್ಯವುಳ್ಳ ಗ್ರಾಮ ಪಂಚಾಯತಿಯಾಗಿ ಪರಿವರ್ತನೆಯಾಗಿದೆ. ಆ ಎರಡು ಪುಟ್ಟ ಗ್ರಾಮದಲ್ಲಿ ಜಿಲ್ಲೆಯ ಯಾವ ತಾಲೂಕಿನಲ್ಲಿಯೂ ಇಲ್ಲದ ಅತ್ಯಾಧುನಿಕ ಪಂಚಾಯತ್ ಕಟ್ಟಡ ನಿರ್ಮಾಣವಾಗಿದೆ. ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು, ಪಿಡಿಓ, ಕಾರ್ಯದರ್ಶಿ ಎಲ್ಲರಿಗೂ ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಯನ್ನ ಇಲ್ಲಿ ಕಲ್ಪಿಸಿಕೊಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲಿಯೂ ಕೂಡಾ ಇಷ್ಟೊಂದು ಸುಂದರವಾದ ಕಟ್ಟಡವಿಲ್ಲ. ಪಂಚಾಯತ್ ಕಟ್ಟಡದ ಮುಂಬಾಗದಲ್ಲಿಯೇ ಸುಂದರವಾದ ಉದ್ಯಾನವನವನ್ನ ಕೂಡಾ ಇಲ್ಲಿ ನಿರ್ಮಿಸಲಾಗಿದೆ. ಈ ಎರಡು ಗ್ರಾಮ ಪಂಚಾಯತ್​ನ ಪಿಡಿಓ ಅಧಿಕಾರಿಗಳು ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಕಾಳಜಿಯಿಂದ ಗ್ರಾಮದಲ್ಲಿ ಹೈಟೆಕ್​ ಮಾದರಿಯ ಗ್ರಾಮ ಪಂಚಾಯತ್ ಕಟ್ಟಡಗಳು ನಿರ್ಮಾಣವಾಗಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

ಇನ್ನು ಚಂಡಾಕಾಪುರ ಗ್ರಾಮದಲ್ಲಿ ಹೈಟೆಕ್ ಮಾದರಿಯ ಜಿಲ್ಲಾ ಕೇಂದ್ರದಲ್ಲಿರುವ ಗ್ರಂಥಾಲಯವನ್ನ ಮೀರಿಸುವಂತಹ ಗ್ರಂಥಾಲಯವನ್ನ ನಿರ್ಮಾಣ ಮಾಡಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮದ ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಮಕ್ಕಳಿಗೆ ಓದಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೈಟೆಕ್ ಲೈಬ್ರರಿ ನಿರ್ಮಾಣ ಮಾಡಲಾಗಿದ್ದು, ನಾಲ್ಕು ಕಂಪ್ಯೂಟರ್​ಗಳಿದ್ದು ಅದಕ್ಕೆ ಹೈಸ್ಪೀಡ್ ಇಂಟರ್​ನೇಟ್ ಕನೆಕ್ಷನ್ ಕೂಡಾ ಕೊಡಲಾಗಿದೆ. ಜೊತೆಗೆ ಯುಪಿಎಸ್, ಕೆಎಎಸ್, ಎಸ್​ಡಿಎ, ಎಫ್​ಡಿಎ, ಪಿಡಿಓ ಹೀಗೆ ಎಲ್ಲಾ ಪರೀಕ್ಷೆಗೂ ಅನುಕೂಲವಾಗುವಂತಹ ಲಕ್ಷಾಂತರ ರೂಪಾಯಿ ಮೌಲ್ಯದ ಪುಸ್ತಕಗಳನ್ನ ಇಲ್ಲಿ ಖರೀದಿಸಿ ತಂದು ಇಡಲಾಗಿದೆ.

ತಾಜಾ ಸುದ್ದಿ

ತಂಪಾದ ಗಾಳಿ ಮನಸ್ಸಿಗೆ ಮುದಕೊಡುವಂತಾ ವಾತಾವರಣವನ್ನ ಇಲ್ಲಿ ನಿರ್ಮಾಣ ಮಾಡಿದ್ದು ಮಕ್ಕಳು ಖುಷಿಖುಷಿಯಿಂದ ಇಲ್ಲಿಗೆ ಬಂದು ಓದಿಕೊಳ್ಳುತ್ತಿದ್ದಾರೆ. ಜೊತೆಗೆ ಮಕ್ಕಳಿಗೆ ಖಾಸಗಿ ನರ್ಸರಿಗಳ ಅನುಭವ ಕೊಡುವಂತಾ ಅಂಗನವಾಡಿ ಕೇಂದ್ರವನ್ನ ಇಲ್ಲಿ ನಿರ್ಮಾಣ ಮಾಡಲಾಗಿದೆ. ಈ ಅಂಗನವಾಡಿ ಕೇಂದ್ರವನ್ನ ನೋಡಿದರೆ ಯಾವ ಖಾಸಗಿ ನರ್ಸರಿಗಳಿಗೂ ಕಮ್ಮಿಯಿಲ್ಲ ಎನ್ನುವಂತೆ ಎಲ್ಲಾ ಸೌಲಭ್ಯಗಳನ್ನ ಇಲ್ಲಿ ಕಲ್ಪಿಸಿಕೊಡಲಾಗಿದೆ. ಅಂಗನವಾಡಿ ಕೇಂದ್ರದ ಆವರಣಕ್ಕೆ ಕಾಲಿಟ್ಟರೆ ಖಾಸಗಿ ಶಾಲೆಗೆ ಭೇಟಿ ನೀಡಿದ ಅನುಭವಾಗುತ್ತದೆ. ಈ ಅಂಗನವಾಡಿ ಕೇಂದ್ರದ ಒಳಗಿರುವ, ಮಕ್ಕಳ ವಯೋ ಸಹಜ ಪ್ರವೃತ್ತಿಗೆ ಪೂರಕವಾದ ಚಾರ್ಟ್‌ಗಳು ಗಮನ ಸೆಳೆಯುತ್ತದೆ. ಕೋಲಾಟ, ಗೀತೆಗಳನ್ನೂ ಹೇಳಿಕೊಡಲಾಗುತ್ತದೆ. ತಾಯಿಯ ಹಂಬಲದಿಂದ ಇನ್ನು ಸಂಪೂರ್ಣ ಬಿಡುಗಡೆ ಪಡೆಯದ ಹಾಲುಗಲ್ಲದ ಮಕ್ಕಳು ಆಕರ್ಷಕ ಸಮವಸ್ತ್ರ ತೊಟ್ಟು ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಇಲ್ಲಿ ಅಕ್ಷರ ಕಲಿಯುತ್ತಾರೆ.

ಇದನ್ನೂ ಓದಿ:ಬೀದರ್ ಜಿಲ್ಲೆಯಲ್ಲಿ ನಿಲ್ಲುತ್ತಿಲ್ಲ ರೈತರ ಸರಣಿ ಆತ್ಮಹತ್ಯೆಗಳು: ಅತಿವೃಷ್ಟಿ, ಅನಾವೃಷ್ಟಿ, ಸಾಲದ ಸುಳಿ, ಸರ್ಕಾರದ ನಿರ್ಲಕ್ಷ್ಯ ಕಾರಣಗಳು!

ಸರಕಾರಿ ಆಡಳಿತ ವ್ಯವಸ್ಥೆಯನ್ನ ತೆಗಳೋ ಈ ಕಾಲದಲ್ಲಿ ಒಂದು ಪುಟ್ಟ ಗ್ರಾಮದಲ್ಲಿ ಮಕ್ಕಳಿಗಾಗಿ ಗ್ರಾಮಸ್ಥರಿಗಾಗಿ ಏನೆಲ್ಲ ಪಂಚಾಯತ್​ನಿಂದ ಮಾಡಬಹುದೆಂದು ಈ ಪಂಚಾಯತ್ ಪಿಡಿಓ ಸದಸ್ಯರು ಮಾಡಿ ತೋರಿಸಿದ್ದಾರೆ. ಏನೇ ಇರಲಿ ವಿದ್ಯಾರ್ಥಿನಿಯರ ಹಿತ ದೃಷ್ಠಿಯಿಂದ ಪಿಡಿಓ ಮಕ್ಕಳಿಗಾಗಿ ಈ ಹೈಟೆಕ್ ಮಾದರಿಯ ಗ್ರಂಥಾಲಯ, ಹೈಟೆಕ್

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada