
Breaking News 15 June 2026 Live Updates in Kannada: ಜಗತ್ತನ್ನೇ ತಲ್ಲಣಗೊಳಿಸಿದ್ದ ಅಮೆರಿಕ-ಇರಾನ್ ಯುದ್ಧ ಕೊನೆಗೊಳ್ಳುವ ಹಂತಕ್ಕೆ ಬಂದಿದೆ. ಯುದ್ಧವಿರಾಮದ ನಿಟ್ಟಿನಲ್ಲಿ ಉಭಯ ದೇಶಗಳು ಒಪ್ಪಂದಕ್ಕೆ ಬಂದಿದ್ದು, ಜೂನ್ 19ರಂದು ಜಿನಿವಾದಲ್ಲಿ ಸಹಿ ಹಾಕಲಿವೆ. ಇದರೊಂದಿಗೆ ಹಾರ್ಮುಝ್ ಜಲಸಂಧಿ ಸಹ ವಿಶ್ವದ ಎಲ್ಲ ದೇಶಗಳ ಹಡಗು ಸಂಚಾರಕ್ಕೆ ಮುಕ್ತವಾಗಲಿದೆ. ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಒಂದೇ ದಿನ ಶೇ 4 ರಷ್ಟು ಇಳಿಕೆಯಾಗಿದ್ದು, ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆಯ ನಿರೀಕ್ಷೆ ಇದೆ. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಷೇರುಮಾರುಕಟ್ಟೆ ಚೇತರಿಕೆ ಕಂಡಿದೆ. ಇತ್ತ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಪರಿಷತ್ ಚುನಾವಣೆಯ ರಾಜಕೀಯ ಕಾವೇರಿದೆ. ಅಡ್ಡಮತದಾನದ ಭೀತಿ ಹಿನ್ನೆಲೆ ರೆಸಾಟರ್ಟ್ ರಾಜಕೀಯ ಶುರುವಾಗಿದೆ. ದಿನದ ಪ್ರಮುಖ ವಿದ್ಯಮಾನಗಳ ತಾಜಾ ಅಪ್ಡೇಟ್ ಪಡೆಯಲು ಈ ಪುಟವನ್ನು ಆಗಾಗ್ಗೆ ರಿಫ್ರೆಷ್ ಮಾಡುತ್ತಿರಿ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ. ಇಂದು (ಜೂನ್ 15) ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಭೇಟಿಯಾಗಿದ್ದು, ನಾಳಿನ ಸಿಎಲ್ಪಿ ಸಭೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ನೊಂದಣಿ ವಿಚಾರವಾಗಿ RSS ಮುಖ್ಯಸ್ಥ ಮೋಹನ್ ಭಾಗವತ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಇಷ್ಟು ದೊಡ್ಡ ಸಂಘಟನೆ ಯಾವ ಕಾನೂನಿನ ಆಧಾರದಲ್ಲಿ ನಿರ್ವಹಿಸುತ್ತಿದೆ. ಏಕೆ ನೋಂದಾಯಿತ ಕಾನೂನು ಬದ್ಧ ಸಂಸ್ಥೆಯಾಗಿ ಕಾರ್ಯ ನಿರ್ವಹಿಸ್ತಿಲ್ಲ. ಈ ಬಗ್ಗೆ ವಿವರಣೆ ನೀಡುವಂತೆ ಪತ್ರ ಬರೆದಿದ್ದಾರೆ.
ಜೂ.28ರಂದು ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಸಮಾವೇಶ ಮಾಡಲು ಅನುಮತಿ ನೀಡಬಾರದು. ಹಾಗೇ ಬಸವಕಲ್ಯಾಣ ನಗರಕ್ಕೆ ಕನ್ನೇರಿ ಶ್ರೀಗಳ ಪ್ರವೇಶ ನಿರ್ಬಂಧಿಸುವಂತೆ ಸಚಿವ ಈಶ್ವರ್ ಖಂಡ್ರೆಗೆ ಮನವಿ ಸಲ್ಲಿಸಿದ್ದಾರೆ. ಕನ್ನೇರಿ ಶ್ರೀಗಳು ಬಸವಣ್ಣ, ಲಿಂಗಾಯತ ಮಠಾಧೀಶರಿಗೆ ಅವಮಾನಿಸಿದ್ದಾರೆ. ಹೀಗಾಗಿ ಕನ್ನೇರಿ ಶ್ರೀ ಬಸವಕಲ್ಯಾಣಕ್ಕೆ ಬರಲು ಬಿಡಲ್ಲ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಪಟ್ಟು ಹಿಡಿದಿದೆ.
ಬಿಹಾರ ರಾಜಧಾನಿ ಪಾಟ್ನಾದಲ್ಲಿ ಎಲ್ಲಾ ಶಾಲೆಗಳಿಗೆ ಜೂನ್ 20ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಬಿಸಿಲಿನ ಝಳ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 1ರಿಂದ 5ನೇ ತರಗತಿವರೆಗಿನ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ.
ಜಮೀರ್ ಅಹಮ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಅವರ ಬೆಂಬಲಿಗರು ಪಾದರಾಯನಪುರದಿಂದ ವಿಧಾನಸೌಧ ಚಲೋ ನಡೆಸಿದ್ದಾರೆ. ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಜಮೀರ್ ಬೆಂಬಲಿಗರನ್ನು ಪೊಲೀಸರು ಪಾದರಾಯನಪುರದಲ್ಲಿ ಬ್ಯಾರಿಕೇಡ್ ಹಾಕಿ ತಡೆದಿದ್ದು, ಬಳಿಕ ವಶಕ್ಕೆ ಪಡೆದುಕೊಂಡು ಬಸ್ನಲ್ಲಿ ಕರೆದೊಯ್ದರು.
ಗ್ಯಾರಂಟಿ ಯೋಜನೆ ಕುರಿತ ವಿಪಕ್ಷಗಳ ಆರೋಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಎಕ್ಸ ಖಾತೆಯಲ್ಲಿ ಸಂದೇಶ ಪ್ರಕಟಿಸಿರುವ ಅವರು, ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ, ಮುಂದಿನ ಎರಡು ವರ್ಷಗಳ ಕಾಲ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರಲಿದ್ದೇವೆ, ಅದರ ನಂತರವೂ ಅದು ಮುಂದುವರಿಯಲಿದೆ. ಯೋಜನೆಗಳ ಅನುಷ್ಠಾನದಲ್ಲಿ ಕಂಡು ಬರುವ ದೋಷಗಳನ್ನು ಸರಿಪಡಿಸುವ ಕೆಲಸ ಪ್ರಾರಂಭದಿಂದಲೇ ನಡೆಯುತ್ತಾ ಬಂದಿದೆ, ಈಗಲೂ ಮುಂದುವರೆದಿದೆ. ಈ ಯೋಜನೆಗಳ ಫಲಾನುಭವಿಗಳು ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಟ್ಟು ಆತಂಕಕ್ಕೆ ಈಡಾಗಬೇಕಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ, ಮುಂದಿನ ಎರಡು ವರ್ಷಗಳ ಕಾಲ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರಲಿದ್ದೇವೆ, ಅದರ ನಂತರವೂ ಅದು ಮುಂದುವರಿಯಲಿದೆ. ಯೋಜನೆಗಳ ಅನುಷ್ಠಾನದಲ್ಲಿ ಕಂಡು ಬರುವ ದೋಷಗಳನ್ನು ಸರಿಪಡಿಸುವ ಕೆಲಸ ಪ್ರಾರಂಭದಿಂದಲೇ ನಡೆಯುತ್ತಾ ಬಂದಿದೆ, ಈಗಲೂ…
— Siddaramaiah (@siddaramaiah) June 15, 2026
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಕಡಲ ತೀರದಲ್ಲಿ ಮಹಾರಾಷ್ಟ್ರದ ಪುಣೆ ಮೂಲದ ಜೀವನ ಭಟ್ಟರಾಯಿ (26) ಸಮುದ್ರಪಾಲಾಗಿದ್ದಾರೆ. ಜೀವನ ಭಟ್ಟರಾಯಿ ಐದು ಜನ ಸ್ನೇಹಿತರೊಂದಿಗೆ ಕುಮಟಾ ಭಾಗಕ್ಕೆ ಪ್ರವಾಸ ಬಂದಿದ್ದರು. ರೀಲ್ಸ್ ಮಾಡಲು ನಾಲ್ವರು ಸಮುದ್ರಕ್ಕಿಳಿದಿದ್ದರು. ಇದೇ ವೇಳೆ, ಜೀವನ ಭಟ್ಟರಾಯಿ ಕೊಚ್ಚಿಹೊಗಿದ್ದಾನೆ. ಸ್ಥಳಕ್ಕೆ PSI ಖಾದರ್ ಬಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕರಾವಳಿ ಕಾವಲುಪಡೆ , ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆ ಕೊಡುತ್ತೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಗ್ಯಾರಂಟಿ ದಾಖಲೆ ಬೇಕು, ಫೋಟೋ ಐಡೆಂಟಿಫಿಕೇಷನ್ ಬೇಕು ಎಂದು ಅವರು ಹೇಳಿದ್ದಾರೆ. ಈ ಹಿಂದೆ ತರಾತುರಿಯಲ್ಲಿ ಯಾರದ್ದೋ ನಂಬರ್ ಕೊಟ್ಟಿದ್ದಾರೆ, ಆದರೆ ಗೃಹಲಕ್ಷ್ಮಿ ಹಣ ಬೇರೆ ಯಾರದ್ದೋ ಅಕೌಂಟ್ಗೆ ಹೋಗುತ್ತಿದೆ. ಫಲಾನುಭವಿಗಳ ಖಾತೆಗೇ ಹಣ ಹೋಗಬೇಕು. ನಾವು ಕರ್ನಾಟಕದವರಿಗೆ ಮಾತ್ರ ಗ್ಯಾರಂಟಿಗಳನ್ನು ಕೊಡುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮತ್ತಷ್ಟು ಓದಿ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ಮತ್ತು ಹಿನ್ನೀರಿನ ಪ್ರಾಕೃತಿಕ ಸೌಂದರ್ಯಕ್ಕೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಮನಸೋತಿದ್ದು, ಎಕ್ಸ್ ಸಂದೇಶದ ಮೂಲಕ ಅದನ್ನು ವ್ಯಕ್ತಪಡಿಸಿದ್ದಾರೆ. ಕೇರಳದ ಹಿನ್ನೀರುಗಳ ಸೌಂದರ್ಯದ ಜತೆ ಹೋಲಿಸಿ, ಕರ್ನಾಟಕದ ಶರಾವತಿ ಹಿನ್ನೀರು ಸಹ ಯಾವುದಕ್ಕೂ ಕಡಿಮೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಮತ್ತಷ್ಟು ಓದಿ
ಹೊನ್ನಾವರ ಸೌಂದರ್ಯಕ್ಕೆ ಆನಂದ್ ಮಹೀಂದ್ರಾ ಫಿದಾ#AnandMahindra #HonnavarBackwaters #SharavathiRiver #UttaraKannada #KarnatakaTourismhttps://t.co/3JVgMj3IJK
— TV9 Kannada (@tv9kannada) June 15, 2026
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೊಚ್ಚಿನ್ ನಗರದ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ವಿಡಿಯೋ ನೋಡಿ
ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಸೋಮವಾರ ನಿಧನರಾದರು.
ಪ್ರಸಿದ್ಧ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ದಿವಂಗತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಸಾಹಿತ್ಯ, ಮಾಧ್ಯಮ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಲಂಕೇಶ್ ಅವರು ಮಾಡಿರುವ ಸಾಧನೆಯಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದ ಇಂದಿರಾ ಲಂಕೇಶ್ ಅವರ ಬಹುದೊಡ್ಡ ಕೊಡುಗೆ ಇದೆ ಎನ್ನುವುದು ನಿಸ್ಸಂಶಯ.
ಪ್ರಾರಂಭದ… pic.twitter.com/iEoZ0JlrJy
— Siddaramaiah (@siddaramaiah) June 15, 2026
ರಾಮನಗರ ಕಾಂಗ್ರೆಸ್ ಶಾಸಕ, ಸಿಎಂ ಡಿಕೆ ಶಿವಕುಮಾರ್ ಆಪ್ತ ಇಕ್ಬಾಲ್ ಹುಸೇನ್ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಈ ಹಿಂದೆ ಹಾರ್ಟ್ ಬ್ಲಾಕ್ ಆಗಿತ್ತು. ಸ್ಟೆಂಟ್ ಹಾಕಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು.
ಮಂತ್ರಾಲಯದಲ್ಲಿ ಭಾರಿ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೆ ಪರದಾಡುವಂತಾಯಿತು. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುತ್ತಮುತ್ತಲ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡು ಭಕ್ತರು ಪರದಾಡಿದರು. ವಿಡಿಯೋ ನೋಡಿ
ಭಾರತೀಯ ಷೇರು ಸೂಚ್ಯಂಕಗಳು ಆರಂಭಿಕ ವಹಿವಾಟಿನಲ್ಲೇ ಜಿಗಿತ ಕಂಡಿವೆ. ಆರಂಭಿಕ ಹಂತದಲ್ಲಿ, ಸೆನ್ಸೆಕ್ಸ್ 1,100 ಪಾಯಿಂಟ್‌ಗಳಿಗಿಂತ ಹೆಚ್ಚು ಜಿಗಿದರೆ, ನಿಫ್ಟಿ 350 ಪಾಯಿಂಟ್‌ಗಳ ಏರಿಕೆ ಕಂಡಿತು. ಏತನ್ಮಧ್ಯೆ, ಡಾಲರ್ ಎದುರು ರೂಪಾಯಿ ಮೌಲ್ಯ 79 ಪೈಸೆ ಏರಿಕೆಯಾಗಿ 94.68 ಕ್ಕೆ ವಹಿವಾಟು ಆರಂಭಿಸಿತು, ಶುಕ್ರವಾರದ ವಹಿವಾಟಿನ ಮುಕ್ತಾಯದ ವೇಳೆಗೆ ಇದು 95.11 ಕ್ಕೆ ತಲುಪಿತ್ತು.
ಯುಎಸ್-ಇರಾನ್ ಮಹತ್ವದ ಒಪ್ಪಂದ ಘೋಷಣೆ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ಜಿಗಿತ ಕಂಡಿದೆ. ಏಷ್ಯಾ-ಪೆಸಿಫಿಕ್ ಮಾರುಕಟ್ಟೆಯಲ್ಲಿ ಹೂಡಿಕೆದಾರರಲ್ಲಿ ಮಂದಹಾಸ ಮೂಡಿದೆ. ಜಪಾನ್‌ನ ಪ್ರಮುಖ ಸೂಚ್ಯಂಕ ‘ನಿಕಿ 225’ ಶೇಕಡಾ 5 ಕ್ಕಿಂತಲೂ ಹೆಚ್ಚು ತೀವ್ರ ಏರಿಕೆ ಕಂಡಿದೆ. ದಕ್ಷಿಣ ಕೊರಿಯಾದ ಮುಂಚೂಣಿ ಸೂಚ್ಯಂಕ ‘ಕೋಸ್ಪಿ’ ಶೇಕಡಾ 5.7 ರಷ್ಟು ಭಾರಿ ಜಿಗಿತ ಕಂಡಿದೆ. ತೈವಾನ್‌ನ ‘ಟೈಯೆಕ್ಸ್’ ಶೇಕಡಾ 2.7 ಹಾಗೂ ಆಸ್ಟ್ರೇಲಿಯಾದ ‘ASX200’ ಶೇಕಡಾ 1.5 ರಷ್ಟು ವೃದ್ಧಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಣನೀಯವಾಗಿ ಕುಸಿದಿದ್ದು, ಬ್ರೆಂಟ್ ಕಚ್ಚಾ ತೈಲ ದರ ಶೇಕಡಾ 4 ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ ಸುಮಾರು 83.70 ಡಾಲರ್‌ಗೆ ಇಳಿಕೆಯಾಗಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಕೊನೆಗೊಳಿಸುವಿಕೆ ಒಪ್ಪಂದ ಸಿದ್ಧಗೊಂಡ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಶೇ 4ರಷ್ಟು ಕುಸಿತ ಕಂಡು 80 ಡಾಲರ್‌ಗೆ ಇಳಿಕೆಯಾಗಿದೆ. ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ ಇದೆ. ಮತ್ತಷ್ಟು ಓದಿ
Published On - 10:18 am, Mon, 15 June 26