ಚಾಮರಾಜನಗರ ನಗರಸಭೆಯಿಂದ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ: 8 ಕೋಟಿ ರೂ ಖರ್ಚಾದ್ರೂ ಮುಗಿಲಿಲ್ಲ ರಸ್ತೆ
2017ರಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿ 8 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ ಅದೇ ರಸ್ತೆ ಕಾಮಗಾರಿಗೆ 3 ಕೋಟಿ 80 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ನಿಜಗುಣರಾಜು ಅವರು ಗಂಭೀರ ಆರೋಪ ಮಾಡಿದ್ದಾರೆ. ಅನುದಾನ ಬಂದಿದ್ದ 8 ಕೋಟಿ ರೂ. ಹಣ ಸಂಪೂರ್ಣ ಖರ್ಚಾದರೂ ರಸ್ತೆ ಆಗಿದ್ದು ಕೇವಲ ಒಂದೇ ಕಿಲೋ ಮೀಟರ್.
ಚಾಮರಾಜನಗರ, ಜೂನ್ 21: ಚಾಮರಾಜನಗರ (Chamarajanagar) ನಗರಸಭೆಯಿಂದ ಬ್ರಹ್ಮಾಂಡ ಭ್ರಷ್ಟಾಚಾರದ (Corruption) ಆರೋಪ ಕೇಳಿಬಂದಿದೆ. ಎರಡು ಕಿಲೋ ಮೀಟರ್ ಕಾಂಕ್ರೀಟ್ ರಸ್ತೆಗೆ ಮಂಜೂರಾಗಿದ್ದ 8 ಕೋಟಿ ರೂ. ಹಣ ಗುಳುಂ ಆಗಿದೆ. ನಗರದ ಡಿವೈಎಸ್ ಕಚೇರಿಯಿಂದ ಸತ್ಯಮಂಗಲ ಸರ್ಕಲ್ವರೆಗೆ ಕಾಂಕ್ರೀಟ್ ರಸ್ತೆ ಹಾಗೂ ಬೀದಿ ದೀಪ ಅಳವಡಿಕೆಗೆ ಹಣ ಮಂಜೂರಾಗಿತ್ತು. ಆದರೆ ಅನುದಾನ ಬಂದಿದ್ದ 8 ಕೋಟಿ ರೂ. ಹಣ ಸಂಪೂರ್ಣ ಖರ್ಚಾದರೂ ರಸ್ತೆ ಆಗಿದ್ದು ಕೇವಲ ಒಂದೇ ಕಿಲೋ ಮೀಟರ್.
2017ರಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿ 8 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ ಅದೇ ರಸ್ತೆ ಕಾಮಗಾರಿಗೆ 3 ಕೋಟಿ 80 ಲಕ್ಷ ರೂ. ಹಣ ಬಿಡುಗಡೆ ಎಂದು ಬಿಜೆಪಿ ಮುಖಂಡ ನಿಜಗುಣರಾಜು ಅವರು ಗಂಭೀರ ಆರೋಪ ಮಾಡಿದ್ದಾರೆ.
ಮೇಲ್ನೋಟಕ್ಕೆ ಅಕ್ರಮವಾಗಿರುವುದು ಬೆಳಕಿಗೆ ಬಂದಿದೆ: ಜಿಲ್ಲಾಧಿಕಾರಿ ಶಿಲ್ಪಾನಾಗ್
ಸದ್ಯ ಈ ಆರೋಪದ ಕುರಿತು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯೆ ನೀಡಿದ್ದು, ಮೇಲ್ನೋಟಕ್ಕೆ ಅಕ್ರಮವಾಗಿರುವುದು ಬೆಳಕಿಗೆ ಬಂದಿದೆ. ಮೇ ತಿಂಗಳಲ್ಲಿ ವಿಶೇಷ ಕಮಿಟಿಯನ್ನ ರಚನೆ ಮಾಡಿ ವರದಿ ನೀಡಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಿಕಿತ್ಸೆಗೆ ತಕ್ಕಂತೆ ಲಂಚ ಫಿಕ್ಸ್! ಟಿವಿ9 ಕ್ಯಾಮೆರಾದಲ್ಲಿ ಬಯಲಾಯ್ತು ಸಂತೇಮರಹಳ್ಳಿ ಆಸ್ಪತ್ರೆಯ ಕರ್ಮಕಾಂಡ
ಹಣ ದುರುಪಯೋಗವಾಗಿದ್ದರೆ ಖಂಡಿತ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಗುತ್ತಿಗೆದಾರನ ಪಾತ್ರವಿದ್ದರೆ ಆತನನ್ನು ಸಹ ಬ್ಲಾಕ್ ಲಿಸ್ಟ್ಗೆ ಸೇರಿಸಲಾಗುವುದು. ಅಕ್ರಮದ ಕುರಿತು ನಿಖರ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಪ್ರತಿ ತಿಂಗಳು ಒಂದು ಲಕ್ಷ ರೂ ಲಂಚ
ಇತ್ತೀಚೆಗೆ ಜಿಲ್ಲೆಯಲ್ಲಿ ಆಡಿಯೋವೊಂದು ಸಿಕ್ಕಾ ಪಟ್ಟೆ ವೈರಲ್ ಆಗಿತ್ತು. ಉಪ ನಿರ್ದೇಶಕಿ ಹಾಗೂ ಸಿಡಿಪಿಓ ವಿರುದ್ದ ಗಂಭೀರ ಆರೋಪ ಕೇಳಿ ಬಂದಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ ಹಾಗೂ ಉಪನಿರ್ದೇಶಕಿಯರ ವಿರುದ್ಧ ಗಂಭೀರ ಆರೋಪ ಮಾಡಲಾಗಿತ್ತು.
ಇದನ್ನೂ ಓದಿ: ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಒಂದೊಂದು ಚಿಕಿತ್ಸೆಗೆ ಒಂದೊಂದು ರೇಟ್ ಫಿಕ್ಸ್
ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ಮಾಡುವ ಸ್ವ ಸಹಾಯ ಕೇಂದ್ರಗಳ ಮೇಲೆ ಚಾಮರಾಜನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಕಣ್ಣಿಟ್ಟಿದ್ದು, ಪ್ರತಿ ತಿಂಗಳು ಒಂದು ಲಕ್ಷ ರೂ. ಮಂತ್ಲಿ ಫಿಕ್ಸ್ ಮಾಡಿದ್ದಾರೆ ಎನ್ನಲಾಗಿತ್ತು. ಮಂತ್ಲಿ ಒಂದು ಲಕ್ಷ ರೂ. ಲಂಚ ಕೊಡದೆ ಹೋದ್ರೆ ಕೊಡಬಾರದಕಾಟ ಕೊಡುತ್ತಾರೆ ಎಂದು ಆರೋಪ ಮಾಡಲಾಗಿತ್ತು. ತಮ್ಮ ಬಳಿಯಿಂದ ಗೂಗಲ್ ಪೇ ಮಾಡಿದ ಸ್ಕ್ರೀನ್ ಶಾಟ್ ಹಾಗೂ ಕೆಲ ಆಡಿಯೋಗಳನ್ನ ಹರಿಬಿಡಲಾಗಿತ್ತು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:16 pm, Fri, 21 June 24