ಚಾಮರಾಜನಗರ: ಹುಲಿ ಹಂತಕರು 3 ದಿನ ಅರಣ್ಯಾಧಿಕಾರಿಗಳ ಕಸ್ಟಡಿಗೆ
ಮಲೆ ಮಹದೇಶ್ವರ ವನ್ಯಧಾಮದಲ್ಲಿ ಒಂದಲ್ಲ ಎರಡಲ್ಲ ಐದು ಹುಲಿಗಳಿಗೆ ವಿಷವಿಕ್ಕಿ ಕೊಂದಿರುವುದು ಈಗಾಗಲೇ ಬಯಲಾಗಿದೆ. 4 ಮರಿಗಳ ಜತೆ ಒಂದು ತಾಯಿ ಹುಲಿಗೆ ವಿಷವಿಕ್ಕಿದ್ದ ಘಟನೆ ರಾಜ್ಯಾದ್ಯಂತ ಆಘಾತ ಮೂಡಿಸಿತ್ತು. ವ್ಯಾಘ್ರಗಳಿಗೆ ವಿಷವಿಕ್ಕಿ ಕೊಂದಿದ್ದ ಮೂವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇದೀಗ ಮೂವರನ್ನು 3 ದಿನ ಅರಣ್ಯಾಧಿಕಾರಿಗಳ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.

ಚಾಮರಾಜನಗರ, ಜೂನ್ 29: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳನ್ನ (tiger) ಕೊಂದ ಆರೋಪಿಗಳು ಕೊನೆಗೂ ಅಂದರ್ (Arrested) ಆಗಿದ್ದಾರೆ. ಹುಲಿ ಹತ್ಯೆಯ ಅಸಲಿತ್ತನ್ನ ಖಾಕಿ ಪಡೆ ಬಾಯಿ ಬಿಡಿಸಿದ್ದಾರೆ. ವ್ಯಾಘ್ರಗಳನ್ನ ಕೊಂದವರು ಸ್ಪೋಟಕ ಸತ್ಯವನ್ನು ಬಾಯಿ ಬಿಟ್ಟಿದ್ದಾರೆ. ಬಂಧಿತರಾದ ಮಾದರಾಜು, ನಾಗರಾಜ್ ಮತ್ತು ಕೋನಪ್ಪನನ್ನು ಮೂರು ದಿನ ಅರಣ್ಯಾಧಿಕಾರಿಗಳ ಕಸ್ಟಡಿಗೆ ನೀಡಿ ನ್ಯಾಯಾಧೀಶೆ ಎಂ.ಕಾವ್ಯಶ್ರೀ ಶನಿವಾರ ಆದೇಶ ಹೊರಡಿಸಿದ್ದಾರೆ.
ಮೂವರು ಆರೋಪಿಗಳನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಜಿಎಂಎಫ್ಸಿ ಕೋರ್ಟ್‌ನ ನ್ಯಾಯಾಧೀಶೆ ನಿವಾಸದ ಮುಂದೆ ಶನಿವಾರ ಹಾಜರು ಪಡಿಸಲಾಯ್ತು. 3 ದಿನ ಅರಣ್ಯಾಧಿಕಾರಿಗಳ ಕಸ್ಟಡಿಗೆ ನೀಡಿ ನ್ಯಾಯಾಧೀಶೆ ಎಂ.ಕಾವ್ಯಶ್ರೀ ಆದೇಶಿಸಿದ್ದಾರೆ. ಅಧಿಕಾರಿಗಳ ತನಿಖೆಯಲ್ಲಿ ಮತ್ತಿನ್ಯಾವ ವಿಚಾರ ಹೊರಬೀಳುತ್ತದೆ ನೋಡಬೇಕಿದೆ.
ಇದನ್ನೂ ಓದಿ: ಮಲೆಮಹದೇಶ್ವರಬೆಟ್ಟ ವನ್ಯಧಾಮ ಮೀಣ್ಯಂ ಅರಣ್ಯ ಪ್ರದೇಶದಲ್ಲಿ 15 ಹುಲಿಗಳಿರಬಹುದು: ಅರಣ್ಯಾಧಿಕಾರಿ
ಪ್ರಾಣಿಗಳು ಬೇಟೆ ಆಡೋದು ಸರ್ವೇ ಸಾಮಾನ್ಯ.. ಜೀವವೈವಿಧ್ಯತೆ ಉಳಿಯುವಿಕೆಯಲ್ಲಿ ಈ ಬೇಟೆ ಕೂಡ ಮಹತ್ವದ್ದು.. ಆದ್ರೆ, ಚಾಮರಾಜನಗರದಲ್ಲಿ ಐವರ ಹುಲಿಗಳಿಗೆ ವಿಷವಿಕ್ಕಿದ್ದಕ್ಕೆ ಈ ಬೇಟೆಯೇ ಕಾರಣ ಅನ್ನೋದು ಗೊತ್ತಾಗಿದೆ.
ಆಗಿದ್ದೇನು?
ಜೂನ್ 23ರಂದು ಕೊಳ್ಳೇಗಾಲದ ಮೀಣ್ಯ ಅರಣ್ಯದಲ್ಲಿ, ಈ ಮಾದುರಾಜುವಿನ ಹಸುವನ್ನ ಹುಲಿ ಬೇಟೆ ಆಡಿತ್ತು. ತಾನು ತುಂಬ ಪ್ರೀತಿಸುತ್ತಿದ್ದ ಹಸುವನ್ನ, ಹುಲಿ ಕೊಂದಿದ್ದನ್ನ ನೋಡಿ ಮಾದುರಾಜು ಮನನೊಂದಿದ್ದ. ಹುಲಿಯ ಮೇಲೆ ಕೋಪಗೊಂಡಿದ್ದ. ಹಸುವನ್ನ ಬೇಟೆಯಾಡಿದ್ದ ಹುಲಿ ಮತ್ತೆ, ಹಸು ಮಾಂಸ ತಿನ್ನೋದಕ್ಕೆ ಬರುತ್ತೆ ಅಂತ ತಿಳಿದಿದ್ದ ಮಾದುರಾಜು, ಹಸುವಿನ ಶವಕ್ಕೆ ನಾಗರಾಜ್, ಕೋನಪ್ಪನ ಜತೆ ಸೇರಿ ಕ್ರಿಮಿನಾಶಕ ವಿಷ ಬೆರೆಸಿದ್ದ. ಹೀಗಾಗಿ, ವಿಷವಿಕ್ಕಿದ್ದ ಹಸುವಿನ ದೇಹವನ್ನ ತಿಂದಿದ್ರಿಂದಲೇ ಹುಲಿ ಮತ್ತು 4 ಮರಿಗಳು ಪ್ರಾಣಬಿಟ್ಟಿರುವುದು ಈಗಾಗಲೇ ಬಯಲಾಗಿದೆ.
ಅತ್ತ ಫಾರೆಸ್ಟ್ ವಾಚರ್ಗಳ ಪ್ರೊಟೆಸ್ಟ್: ಇತ್ತ ಹುಲಿಗಳಿಗೆ ವಿಷ!
ಹುಲಿಗಳ ಹತ್ಯೆಯಲ್ಲಿ ಅರಣ್ಯಧಿಕಾರಿಗಳ ನಿರ್ಲಕ್ಷ್ಯವೂ ಇದೆ. ಮೂರ್ನಾಲ್ಕು ತಿಂಗಳಿಂದ ವೇತನ ಆಗಿಲ್ಲ ಅಂತ ಫಾರೆಸ್ಟ್ ವಾಚರ್ಸ್ಗಳೆಲ್ಲ, ಜೂನ್ 23ರಂದು ಪ್ರತಿಭಟನೆ ಮಾಡಿದ್ದರು. ಹೀಗಾಗಿ, ಅಂದು ಅರಣ್ಯದಲ್ಲಿ ಕಾವಲಿಗೆ ಯಾವುದೇ ಸಿಬ್ಬಂದಿ ಇರಲಿಲ್ಲ. ಇದ್ರಿಂದಾಗಿ ನೇರವಾಗಿ ಕಾಡಿಗೆ ತೆರಳಿ ಹಸುವಿನ ಶವಕ್ಕೆ ವಿಷವಿಕ್ಕಿದ್ಧಾರೆ. ಈ ಬಗ್ಗೆ ಪ್ರಶ್ನಿಸಿದರೆ ಡಿಸಿಎಫ್ ಹಾರಿಕೆ ಉತ್ತರ ಕೊಡುತ್ತಾರೆ. ಇನ್ನು, 5 ಹುಲಿಗಳ ಸಾವಿನ ಬಗ್ಗೆ ಮಧ್ಯಂತರ ವರದಿ ಬಂದಿದ್ದು, ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ ಅಂತ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







