ಚಾಮರಾಜನಗರ: ಗಂಡನ ಅಂತ್ಯಕ್ರಿಯೆಗೆ ಇಬ್ಬರು ಹೆಂಡತಿಯರ ಕಿತ್ತಾಟ; ಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಚಾಮರಾಜನಗರ: ಗಂಡನ ಅಂತ್ಯಕ್ರಿಯೆಗೆ ಇಬ್ಬರು ಹೆಂಡತಿಯರ ಕಿತ್ತಾಟ; ಕೋರ್ಟ್ ಮೆಟ್ಟಿಲೇರಿದ ಪ್ರಕರಣ
ಪತಿಯ ಅಂತ್ಯಕ್ರಿಯೆಗೆ ಇಬ್ಬರು ಹೆಂಡತಿಯರ ಕಿತ್ತಾಟ

ಕಳೆದ ಎಂಟು ವರ್ಷಗಳ ಹಿಂದೆಯೇ ಪಾಪಣ್ಣ ಶೆಟ್ಟಿ ಎರಡನೇ ಮದುವೆಯಾಗಿದ್ದರು. ಇದೀಗ ಎರಡು ದಿನಗಳ ಹಿಂದೆ ಹೃದಯಘಾತದಿಂದ ಪಾಪಣ್ಣ ಶೆಟ್ಟಿ ಸಾವನಪ್ಪಿದ್ದು, ಇಬ್ಬರು ಹೆಂಡತಿಯರ ನಡುವೆ ಕಿತ್ತಾಟ ಆರಂಭವಾಗಿದೆ.

TV9kannada Web Team

| Edited By: preethi shettigar

Dec 31, 2021 | 12:33 PM


ಚಾಮರಾಜನಗರ: ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟಿರುವ ಗಂಡನಿಗಾಗಿ ಇಬ್ಬರು ಹೆಂಡತಿಯರು ಕಿತ್ತಾಟ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ವಕೀಲ ಪಾಪಣ್ಣ ಶೆಟ್ಟಿ ಮೃತಪಟ್ಟಿದ್ದಾರೆ. ಮೃತದೇಹದ ಅಂತ್ಯಕ್ರಿಯೆಗಾಗಿ (Funeral) ವಕೀಲ ಪಾಪಣ್ಣ ಶೆಟ್ಟಿಯವರ ಮೊದಲ ಪತ್ನಿ ಮತ್ತು ಎರಡನೇ ಪತ್ನಿ ಕಿತ್ತಾಡಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಮೊದಲನೇ ಪತ್ನಿ ನಿಮಿತಾ ಬಿಟ್ಟು ಹೋಗಿದ್ದರು. ಇದರಿಂದ ಪಾಪಣ್ಣ ಶೆಟ್ಟಿ ತಾಯಿ ಮಗನಿಗೆ ಎರಡನೇ ಮದುವೆ ಮಾಡಿದ್ದಾರೆ.

ಕಳೆದ ಎಂಟು ವರ್ಷಗಳ ಹಿಂದೆಯೇ ಪಾಪಣ್ಣ ಶೆಟ್ಟಿ ಎರಡನೇ ಮದುವೆಯಾಗಿದ್ದರು. ಇದೀಗ ಎರಡು ದಿನಗಳ ಹಿಂದೆ ಹೃದಯಘಾತದಿಂದ ಪಾಪಣ್ಣ ಶೆಟ್ಟಿ ಸಾವನಪ್ಪಿದ್ದು, ಇಬ್ಬರು ಹೆಂಡತಿಯರ ನಡುವೆ ಕಿತ್ತಾಟ ಆರಂಭವಾಗಿದೆ. ಗಂಡನ ಸಾವಿನ ಬಗ್ಗೆ ಅನುಮಾನಪಟ್ಟು ದೂರು ನೀಡಿದ ಮೊದಲನೇ ಹೆಂಡತಿ, ಜೊತೆಗೆ ಮೃತದೇಹವನ್ನು ತನಗೆ ಕೊಡುವಂತೆ ಕೇಳುತ್ತಿದ್ದಾರೆ. ಇತ್ತ ಮೃತದೇಹವನ್ನು ನಮಗೆ ಕೊಡಿ ಎಂದು ಪಾಪಣ್ಣ ಶೆಟ್ಟಿ ತಾಯಿ ಹಾಗೂ ಎರಡನೇ ಹೆಂಡತಿ ಕೂಡ ಕೇಳುತ್ತಿದ್ದಾರೆ.

ಗಂಡನನ್ನು ಬಿಟ್ಟುಹೋಗಿ ಈಗ ಆಸ್ತಿಗಾಗಿ ಬಂದಿದ್ದಾಳೆ ಎಂದು ಎರಡನೇ ಹೆಂಡತಿ ಹಾಗೂ ತಾಯಿ ಆರೋಪ ಮಾಡಿದ್ದು, ಸದ್ಯ ಪ್ರಕರಣ ಬಗೆಹರಿಯದೆ ಇರುವುದರಿಂದ ಚಾಮರಾಜನಗರ ಮೆಡಿಕಲ್ ಕಾಲೇನಲ್ಲಿ ಪಾಪಣ್ಣ ಶೆಟ್ಟಿಯವರ ಮೃತದೇಹ ಇರಿಸಲಾಗಿದೆ.

ತುಮಕೂರು: ಬಾಲಕರ ಜೊತೆ ಅಪ್ರಾಪ್ತ ವಯಸ್ಸಿನ ಬಾಲಕಿಯರು ಪರಾರಿ
ಶವಸಂಸ್ಕಾರ ಕಾರ್ಯಕ್ಕೆಂದು ಪೋಷಕರ ಜೊತೆಗೆ ಬಂದಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ತಮ್ಮಿಷ್ಟದಂತೆ ಬಾಲಕರ ಜೊತೆ ಪರಾರಿಯಾದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆಯಲ್ಲಿ ನಡೆದಿತ್ತು. ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯವೆಂಕಟಾಪುರ ಗ್ರಾಮದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ರಾಮನಗರ ಜಿಲ್ಲೆಯ ಯುವಕ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪ್ರಾಪ್ತ ಬಾಲಕನ ಜೊತೆ ಪೋಷಕರನ್ನ ಯಾಮಾರಿಸಿ ಪರಾರಿಯಾಗಿರುವ ಬಗ್ಗೆ ಕಾಣೆಯಾದವರು ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಕೋಳಾಲ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಶಿವಮೊಗ್ಗ ನಗರದ ಮಾಣಿಕ್ಯ ಎಂಬುವರ ಕುಟುಂಬ ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ ಸಂಬಂದಿಕರ ಶವಸಂಸ್ಕಾರ ಕಾರ್ಯಕ್ಕೆ ಬಂದಾಗ, ಕಾರ್ಯ ಮುಗಿದ ಬಳಿಕ 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ, ರಾಮನಗರ ಜಿಲ್ಲೆಯ ಕುದೂರಿನ ಶಿವಗಂಗೆಯ ಸುಧಾಕರ ಹಾಗೂ ಮಧ್ಯವೆಂಕಟಾಪುರ ಗ್ರಾಮದ 14 ವರ್ಷದ ಅಪ್ರಾಪ್ತೆ ದಾಬಸ್ ಪೇಟೆಯ ಸೋಂಪುರ ಹೋಬಳಿಯ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕನ ಜೊತೆ ಪರಾರಿಯಾಗಿದ್ದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ‌.

ಇದನ್ನೂ ಓದಿ:
ಗಂಡ ಹೆಂಡತಿ ನಡುವೆ ಜಗಳವಾದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳವುದು ಅವರ ಕೈಯಲ್ಲೇ ಇದೆ: ಡಾ ಸೌಜನ್ಯ ವಶಿಷ್ಠ

ಕಿಟಕಿಯಿಂದ ಹಾರಿ ಪತ್ನಿ ಪರಾರಿ; ಹೆಂಡತಿಯ ಸುಳಿವು ನೀಡಿದವರಿಗೆ 5,000 ರೂ. ಬಹುಮಾನ ಘೋಷಿಸಿದ ಗಂಡ!


Follow us on

Related Stories

Most Read Stories

Click on your DTH Provider to Add TV9 Kannada