AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾದಪ್ಪನ ಭಕ್ತರು ಮೂತ್ರ ವಿಸರ್ಜನೆ, ಬಹಿರ್ದೆಸೆಗೆ ಕಾಡಿನ ಒಳ ಹೋಗುವಂತಿಲ್ಲ! ಅರಣ್ಯ ಸಿಬ್ಬಂದಿ ಕಟ್ಟಪ್ಪಣೆ, ಕಾರಣ ಇಲ್ಲಿದೆ

ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆಗೆ ಬರುವ ಭಕ್ತರ ಸುರಕ್ಷತೆಗಾಗಿ ಜಿಲ್ಲಾಡಳಿತ ಹೈಅಲರ್ಟ್ ಘೋಷಿಸಿದೆ. ಇತ್ತೀಚಿನ ಚಿರತೆ ದಾಳಿಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಪಾದಯಾತ್ರಿಗಳು ಗುಂಪುಗೂಡಿ ಪ್ರಯಾಣಿಸಲು, ಕಾಡಿಗೆ ಒಬ್ಬರೇ ಹೋಗದಂತೆ ಸೂಚನೆ ನೀಡಿದೆ.ಭಕ್ತರು ಮೂತ್ರ ವಿಸರ್ಜನೆ, ಬಹಿರ್ದೆಸೆಗೆ ಕಾಡಿನ ಒಳ ಹೋಗದಂತೆ ಕಟ್ಟಪ್ಪಣೆ ವಿಧಿಸಿದೆ.

ಮಾದಪ್ಪನ ಭಕ್ತರು ಮೂತ್ರ ವಿಸರ್ಜನೆ, ಬಹಿರ್ದೆಸೆಗೆ ಕಾಡಿನ ಒಳ ಹೋಗುವಂತಿಲ್ಲ! ಅರಣ್ಯ ಸಿಬ್ಬಂದಿ ಕಟ್ಟಪ್ಪಣೆ, ಕಾರಣ ಇಲ್ಲಿದೆ
ಮಲೆ ಮಹದೇಶ್ವರಬೆಟ್ಟ (ಸಂಗ್ರಹ ಚಿತ್ರ)Image Credit source: tv9
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Feb 06, 2026 | 11:13 AM

Share

ಚಾಮರಾಜನಗರ, ಫೆಬ್ರವರಿ 6: ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟಕ್ಕೆ (Male Mahadeshwara Hills) ಪಾದಯಾತ್ರೆ ತೆರಳುತ್ತಿದ್ದ ಭಕ್ತನೊಬ್ಬ ಇತ್ತೀಚೆಗೆ ಚಿರತೆ ದಾಳಿಗೆ ಬಲಿಯಾದ ಘಟನೆ ಬಳಿಕ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಹೈಅಲರ್ಟ್ ಘೋಷಿಸಿದೆ. ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ಪಾದಯಾತ್ರಿಗಳ ಸುರಕ್ಷತೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವೀಣ್ ಎಂಬ ಭಕ್ತ ಇತ್ತೀಚೆಗೆ ಸಾವನ್ನಪ್ಪಿದ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತ ತುರ್ತು ಸಭೆ ನಡೆಸಿ ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುವ ಭಕ್ತರ ಮೇಲೆ ಹದ್ದಿನ ಕಣ್ಣು ಇಡಲು ಅರಣ್ಯಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿವೆ.

ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗ ಮಧ್ಯೆ ಹೈಅಲರ್ಟ್ ಘೋಷಿಸಲಾಗಿದ್ದು, ಪ್ರತಿ ಕಿಲೋಮೀಟರ್‌ಗೂ ಒಂದೊಂದು ತಂಡವನ್ನು ನಿಯೋಜಿಸಲಾಗಿದೆ. ಒಟ್ಟು 8 ತಂಡಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ತಂಡಕ್ಕೂ ಬಂದೂಕು, ವಾಕಿಟಾಕಿ, ಮಚ್ಚು, ಲಾಠಿ ಹಾಗೂ ಪಟಾಕಿಗಳನ್ನು ವಿತರಿಸಲಾಗಿದೆ. ಡಿಆರ್‌ಎಫ್‌ಒ, ಪೊಲೀಸ್ ಸಿಬ್ಬಂದಿ, ವಾಚರ್ ಹಾಗೂ ಎಪಿಸಿ ಕ್ಯಾಂಪ್ ಸಿಬ್ಬಂದಿ ಸೇರಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಐದು ಸಿಬ್ಬಂದಿ ಈ ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದಾರೆ.

ಪಾದಯಾತ್ರೆ ಮಾಡುವವರು ಗುಂಪುಗುಂಪಾಗಿ ಬೆಟ್ಟ ಏರಲು ಸೂಚನೆ

ಪಾದಯಾತ್ರೆ ಮಾಡುವ ಭಕ್ತರು ಗುಂಪು ಗುಂಪಾಗಿ ಮಾತ್ರ ಬೆಟ್ಟ ಏರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಕಾಡಿನ ಒಳಗೆ ಒಬ್ಬರೇ ತೆರಳಬಾರದು, ಮೂತ್ರ ವಿಸರ್ಜನೆ ಅಥವಾ ಬಹಿರ್ದೆಸೆಗೆ ಕಾಡಿನೊಳಗೆ ಹೋಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಡ್ರೋನ್ ಕ್ಯಾಮರಾ ಮೂಲಕವೂ ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿದೆ.

ಫೆಬ್ರವರಿ 14ರಿಂದ 18ರವರೆಗೆ ಮಲೆ ಮಹದೇಶ್ವರ ಶಿವರಾತ್ರಿ ಜಾತ್ರೆ

ಫೆಬ್ರವರಿ 14ರಿಂದ 18ರವರೆಗೆ ನಡೆಯಲಿರುವ ಮಲೆ ಮಹದೇಶ್ವರ ಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಯಾವುದೇ ಅನಾಹುತ ಸಂಭವಿಸದಂತೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಮನ್ವಯದಲ್ಲಿ ಭದ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿದೆ.

ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ

ಜನವರಿ 21 ರಂದು ಮುಂಜಾನೆ ಮಲೆಮಹದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನಕ್ಕಾಗಿ ಮಂಡ್ಯದ ಚೀರನಹಳ್ಳಿ ಹಾಗೂ ನೆರೆಯ ಗ್ರಾಮಗಳಿಂದ 150ಕ್ಕೂ ಹೆಚ್ಚು ಜನರು ಪಾದಯಾತ್ರೆ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಪ್ರವೀಣ್ ಕುಮಾರ್ ಎಂಬವರ ಮೇಲೆ ಮುಗಿಬಿದ್ದಿದ್ದ ಚಿರತೆ ಕತ್ತು ಸೀಳಿ ರಕ್ತ ಹೀರಿ ಬಳಿಕ ಕಾಡಿನೊಳಕ್ಕೆ ಎಳೆದೊಯ್ದಿತ್ತು. ನಂತರ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸರೆಹಿಡಿದಿತ್ತು. ಆ ಬಳಿಕ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಹಿಳಾ ಮೀಸಲಾತಿಗೆ ಬಹುಮತ ಸಿಗದಿದ್ದಕ್ಕೆ ಸಂಸತ್​​ನಲ್ಲಿ ಎನ್​ಡಿಎ ಪ್ರತಿಭಟನೆ
ಮಹಿಳಾ ಮೀಸಲಾತಿಗೆ ಬಹುಮತ ಸಿಗದಿದ್ದಕ್ಕೆ ಸಂಸತ್​​ನಲ್ಲಿ ಎನ್​ಡಿಎ ಪ್ರತಿಭಟನೆ
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್