AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ; ಪ್ರಿಯಕರ ಸೇರಿ ಮೂವರನ್ನು ಬಂಧಿಸಿದ ಬಾಗೇಪಲ್ಲಿ ಪೊಲೀಸರು

ಏಪ್ರಿಲ್ 11ರಂದು SSLC ವಿಜ್ಞಾನ ಪರೀಕ್ಷೆ ಮುಗಿಸಿಕೊಂಡು ಪ್ರೀಯಕರನ ಜೊತೆ ವಾಪಸ್ ಗ್ರಾಮಕ್ಕೆ ಬರುತ್ತಿದ್ದಾಗ ಅಪ್ರಾಪ್ತೆಯ ಪ್ರಿಯಕರ ಗ್ರಾಮ ಹೊರಹೊಲಯದ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದ. ನಂತರ ಪ್ರೇಮಿಗಳು ಬೆಟ್ಟದಲ್ಲಿದ್ದಾಗ ಸ್ಥಳಕ್ಕೆ ಬಂದ ಆತನ ಮೂವರು ಸ್ನೇಹಿತರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ; ಪ್ರಿಯಕರ ಸೇರಿ ಮೂವರನ್ನು ಬಂಧಿಸಿದ ಬಾಗೇಪಲ್ಲಿ ಪೊಲೀಸರು
ಬಾಗೇಪಲ್ಲಿ ಪೊಲೀಸ್ ಠಾಣೆ
TV9 Web
| Edited By: ಆಯೇಷಾ ಬಾನು|

Updated on:Apr 12, 2022 | 12:42 PM

Share

ಚಿಕ್ಕಬಳ್ಳಾಪುರ: ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಪ್ರಿಯಕರ ಸೇರಿ ಮೂವರನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಸಿ ಬರುತ್ತಿದ್ದ ಬಾಲಕಿ ಮೇಲೆ ಪ್ರಿಯಕರನ ಸಮ್ಮುಖದಲ್ಲೇ ಆತನ ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಯತ್ನಿಸಲಾಗಿದೆ.

ಏಪ್ರಿಲ್ 11ರಂದು SSLC ವಿಜ್ಞಾನ ಪರೀಕ್ಷೆ ಮುಗಿಸಿಕೊಂಡು ಪ್ರೀಯಕರನ ಜೊತೆ ವಾಪಸ್ ಗ್ರಾಮಕ್ಕೆ ಬರುತ್ತಿದ್ದಾಗ ಅಪ್ರಾಪ್ತೆಯ ಪ್ರಿಯಕರ ಗ್ರಾಮ ಹೊರಹೊಲಯದ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದ. ನಂತರ ಪ್ರೇಮಿಗಳು ಬೆಟ್ಟದಲ್ಲಿದ್ದಾಗ ಸ್ಥಳಕ್ಕೆ ಬಂದ ಆತನ ಮೂವರು ಸ್ನೇಹಿತರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತ ಪ್ರಿಯಕರ ಓಡಿಬಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಗ್ರಾಮಸ್ಥರು ಸ್ಥಳಕ್ಕೆ ಬರುವಷ್ಟರಲ್ಲೇ ಆರೋಪಿಗಳು ಪರಾರಿಯಾಗಿದ್ದಾರೆ. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಗೆ ಸರ್ಕಾರಿ ಬಾಲಕಿಯರ ಮಂದಿರದಲ್ಲಿ ರಕ್ಷಣೆ ನೀಡಲಾಗಿದೆ.

ಹೆಚ್ಚು ಅಂಕ ಬರುವಂತೆ ಮಾಡುತ್ತೇನೆಂದು ವಿದ್ಯಾರ್ಥಿನಿ ಜತೆ ಶಿಕ್ಷಕನ ಅಸಭ್ಯ ವರ್ತನೆ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಬರುವಂತೆ ಮಾಡುತ್ತೇನೆಂದು ಶಿಕ್ಷಕ ಪರಮೇಶ್ ಐರಣಿ(45) SSLC ವಿದ್ಯಾರ್ಥಿನಿ ಕೆನ್ನೆಗೆ ಮುತ್ತುಕೊಟ್ಟು ಅಸಭ್ಯವಾಗಿ ವರ್ತಿಸಿದ ಆರೋಪ ಹಾವೇರಿ ಜಿಲ್ಲೆ ಹಿರೇಕೆರೂರು ಠಾಣಾ ವ್ಯಾಪ್ತಿಯಲ್ಲಿ ಕೇಳಿ ಬಂದಿದೆ. ಏಪ್ರಿಲ್​​ 8ರಂದು ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪರೀಕ್ಷಾ ಕೇಂದ್ರದ ಸೂಪರ್ ವೈಸರ್ ಆಗಿದ್ದ ಪರಮೇಶ್​​, ಪರೀಕ್ಷೆ ಆರಂಭ ಆದಾಗಿನಿಂದ ವಿದ್ಯಾರ್ಥಿನಿ ಜತೆ ಅಸಭ್ಯವಾಗಿ ವರ್ತಿಸ್ತಿದ್ದನಂತೆ. ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಶಿಕ್ಷಕ ಪರಮೇಶ್​​ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನ ಮೂಲದ ಸಲಿಂಗಿ ಬ್ರಿಟನ್ ಸಂಸತ್ ಸದಸ್ಯ ಇಮ್ರಾನ್ ಬಾಲಕನೊಬ್ಬನ ಮೇಲೆ ನಡೆಸಿದ ಲೈಂಗಿಕ ಹಲ್ಲೆ ಸಾಬೀತಾಗಿದೆ

ಜೂನ್ ತಿಂಗಳಲ್ಲಿ ಕೊರೊನಾ 4ನೇ ಅಲೆ ಸಾಧ್ಯತೆ; ಮತ್ತೆ ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟಿಂಗ್ ನಡೆಸಲು ನಿರ್ಧರಿಸಿದ ಆರೋಗ್ಯ ಇಲಾಖೆ

Published On - 12:33 pm, Tue, 12 April 22

Follow Us
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ