ಬ್ಲಡ್ ಡ್ರಾ ಮಾಡ್ತಿದ್ದಾಗ ನವಜಾತ ಶಿಶು ಸಾವು: ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ದಾದಿ ವಿರುದ್ದ ಪೋಷಕರು ಆಕ್ರೋಶ
ಆರೋಗ್ಯವಾಗಿದ್ದ ಮಗುವಿನ ಪರೀಕ್ಷೆಗೆಂದು ಬ್ಲಡ್ ಡ್ರಾ ಮಾಡುತ್ತಿದ್ದಾಗ ಮಗು ಇದ್ದಕ್ಕಿದ್ದ ಹಾಗೆ ಮೃತಪಟ್ಟಿದ್ದು, ಆಸ್ಪತ್ರೆಯ ಸಿಬ್ಬಂದಿಯ ವಿರುದ್ದ ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಫುರ: ಅದು ಮುದ್ದಾದ ಗಂಡು ಮಗು. ಮಗು ಜನಿಸಿ ಈಗತಾನೆ ಮೂರು ತಿಂಗಳು ಆಗಿತ್ತು. ಆದರೆ ಮಗುವಿಗೆ ವಾಂತಿ ಹಾಗೂ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತಿರಲಿಲ್ಲ. ಇದರಿಂದ ಕಂಗಾಲಾದ ತಂದೆ ತಾಯಿ (parents) ಚಿಕೀತ್ಸೆಗೆಂದು ಸರ್ಕಾರಿ ಮೇಡಿಕಲ್ ಕಾಲೇಜು ಆಸ್ಪತ್ರೆಯೊಂದಕ್ಕೆ ದಾಖಲು ಮಾಡಿದ್ದರು. ಆರೋಗ್ಯವಾಗಿದ್ದ ಮಗುವಿನ ಪರೀಕ್ಷೆಗೆಂದು ಬ್ಲಡ್ (blood) ಡ್ರಾ ಮಾಡುತ್ತಿದ್ದಾಗ ಮಗು ಇದ್ದಕ್ಕಿದ್ದ ಹಾಗೆ ಮೃತಪಟ್ಟಿದೆ. ಆಸ್ಪತ್ರೆಯ ಸಿಬ್ಬಂದಿಯ ವಿರುದ್ದ ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸ್ವತಃ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತವರು ಕ್ಷೇತ್ರದಲ್ಲೆ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಕೊರೇನಹಳ್ಳಿ ನಿವಾಸಿ ಸಂದ್ಯಾ ಹಾಗೂ ಗಂಗರಾಜು ದಂಪತಿಯ ಮೂರು ತಿಂಗಳ ಗಂಡು ಮಗುವಿಗೆ, ವಾಂತಿ ಹಾಗೂ ಮೂತ್ರ ವಿಸರ್ಜನೆ ಸರಿಯಾಗಿ ಆಗ್ತಿರಲಿಲ್ಲ. ಹಾಗಾಗಿ ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಿದ್ರು. ವೈದ್ಯರ ಚಿಕೀತ್ಸೆಯ ನಂತರ ಮಗು ಆರೋಗ್ಯವಾಗಿತ್ತು. ಆದರೆ ಯಾಕೆ ಮಗುವಿಗೆ ಸಮಸ್ಯೆ ಉಂಟಾಗಿದೆ ಅಂತ ಅರಿತುಕೊಳ್ಳಲು ಮುಂದಾದ ವೈದ್ಯರು, ಮಗುವಿನ ಬ್ಲಡ್ ಟೆಸ್ಟ್ಗೆ ಬರೆದಿದ್ದರು. ಇದರಿಂದ ಆಸ್ಪತ್ರೆಯ ದಾಧಿ ರಾಧ, ಮಗುವಿನ ಬ್ಲಡ್ ಡ್ರಾ ಮಾಡ್ತಿದ್ದಾಗ ಮಗು ಇದ್ದಕ್ಕಿದ್ದ ಹಾಗೆ ಮೃತಪಟ್ಟಿದೆ.
ಬಲವಂತವಾಗಿ ಬ್ಲಡ್ ಡ್ರಾ ಮಾಡಿರಲ್ಲ: ಡಾ. ರಾಜಾರೆಡ್ಡಿ
ಕಾಲೇಜು ಆಸ್ಪತ್ರೆಯ ಮಕ್ಕಳ ವಾರ್ಡನಲ್ಲಿ ಮಗು ಮೃತಪಟ್ಟ ಸುದ್ದಿ ತಿಳಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜಾರೆಡ್ಡಿ, ಸ್ಥಳಕ್ಕೆ ಆಗಮಿಸಿ ಮಕ್ಕಳ ತಜ್ಞ ವೈದ್ಯರು ಹಾಗೂ ದಾದಿ ರಾಧಾಳಿಂದ ಮಾಹಿತಿ ಪಡೆದು, ಮಗುವಿನ ಪೋಷಕರಿಗೆ ಸಮಧಾನ ಮಾಡಿ ಸಾಮತ್ವಾನ ಹೇಳಿದ್ರು. ಇದೆ ವೇಳೆ ಮಾತನಾಡಿದ ಡಾ.ರಾಜಾರೆಡ್ಡಿ, ವಾಂತಿ ಸಮಸ್ಯೆಯಿಂದ ಮಗುವನ್ನು ನಿನ್ನೆ ಸಂಜೆ ಆಸ್ಪತ್ರೆಗೆ ದಾಖಲು ಮಾಡಿದ್ರು. ನಿನ್ನೆ ರಾತ್ರಿ ಮಗುವಿಗೆ ಚಿಕೀತ್ಸೆ ನೀಡಲಾಗಿತ್ತು. ಇಂದು ಬೆಳಿಗ್ಗೆಯೂ ಮಕ್ಕಳ ತಜ್ಞರು ಚಿಕೀತ್ಸೆ ನೀಡಿ ರಕ್ತ ಪರೀಕ್ಷೆಗೆ ಶಿಪಾರಸ್ಸು ಮಾಡಿದ್ರು. ದಾದಿಯರು ಬ್ಲಡ್ ಡ್ರಾ ಮಾಡುವಾಗ ಮಗುವಿಗೆ ಮೂರ್ಚೆ ರೋಗ ಬಂದಂತೆ ಕಾಣ್ತಿದೆ. ಶಿಶು ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಶಿಶುವಿನ ಕಳೆಬರಹ ಪೋಸ್ಟ್ ಮಾಟಂ ಮಾಡಿಗಾದ ಮಾತ್ರ ಸಾವಿಗೆ ನಿಖರ ಕಾರಣ ತಿಳಿದು ಬರುತ್ತೆ. ಚಿಕ್ಕ ಮಕ್ಕಳಿಗೆ ನರ ಸಿಗೊದು ಕಷ್ಟವಾಗುತ್ತೆ. ನುರಿತ ಪರಿಣಿತಿ ಪಡೆದ ದಾದಿಯೆ ಬ್ಲಡ್ ಮಾಡಿ ಮಾಡಿದ್ದಾರೆ. ಬಲವಂತವಾಗಿ ಬ್ಲಡ್ ಡ್ರಾ ಮಾಡಿರಲ್ಲ. ಎರಡು ಮೂರು ಭಾರಿ ನರ ಹುಡುಕಿ ಬ್ಲಡ್ ಡ್ರಾ ಮಾಡಿರುತ್ತಾರೆ ಎಂದು ಸಮಜಾಹಿಸಿ ನೀಡಿದರು.
ವೈದ್ಯರು, ಸಿಬ್ಬಂದಿಗಳಿಗೆ ಶಾಪ ಹಾಕಿದ ಶಿಶುವಿನ ಅಜ್ಜಿ ಬಾಗ್ಯಮ್ಮ
ಇನ್ನು ಟಿವಿ9ಗೆ ನವಜಾತ ಶಿಶುವಿನ ಅಜ್ಜಿ ಬಾಗ್ಯಮ್ಮ ಹೇಳಿಕೆ ನೀಡಿದ್ದು, ಮಗುವಿನ ಬ್ಲಡ್ ಡ್ರಾ ವೇಳೆ ಏನೊ ಸಮಸ್ಯೆಯಾಗಿದೆ. ಮಗು ಚೆನ್ನಾಗಿಯೆ ಇತ್ತು. ನಾಳೆ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಆಸ್ಪತ್ರೆಯಲ್ಲೇ ಮಗು ಡೆತ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೂರು ನೀಡದೆ ವೈದ್ಯರು ಸಿಬ್ಬಂದಿಗೆ ಮಗುವಿನ ಪೋಷಕರು ಶಾಪ ಹಾಕಿ ತೆರಳಿದ್ದಾರೆ. ಮುಂದೆ ಈ ರೀತಿ ಯಾವುದೆ ಮಗುವಿಗೆ ಆಗದಂತೆ ನಡೆದುಕೊಳ್ಳಿ. ನಿಮ್ಮ ಮಕ್ಕಳು ಮರಿಗಳ ಜೊತೆ ನೀವು ಚೆನ್ನಾಗಿರಿ ಎಂದು ಅಜ್ಜಿ ಬಾಗ್ಯಮ್ಮ ಶಾಪ ಹಾಕಿದ್ದಾರೆ.
ವರದಿ: ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಫುರ