AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರೋರಾತ್ರಿ ಮನೆಗೆ ನುಗ್ಗುತ್ತಿರುವ ಚಿರತೆ, ದನ ಕರು ನಾಯಿಗಳ ತಿಂದು ಹಾಕ್ತಿದೆ, ಗ್ರಾಮಸ್ಥರ ನೆಮ್ಮದಿಯನ್ನೂ ಕೊಲ್ಲುತ್ತಿದೆ!

ಇನ್ನು ಕೊಂಡರೆಡ್ಡಿಹಳ್ಳಿ ಗ್ರಾಮದ ಬಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯವಿದ್ದು, ಅಲ್ಲಿಯೂ ಚಿರತೆ ಸುಳಿದಾಡಿದೆ. ಇದ್ರಿಂದ ವಿದ್ಯಾರ್ಥಿನಿಯರು ಶಾಲೆಯಿಂದ ಆಚೆ ಬರಲು ಹೆದರುತ್ತಿದ್ದಾರೆ. ಮತ್ತೊಂದೆಡೆ ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನ್ ಇಟ್ಟಿದೆ. ಬೋನ್ ಸುತ್ತಮುತ್ತ ಚಿರತೆ ಸುಳಿದಾಡಿದೆ, ಆದರೆ ಬೋನಿಗೆ ಮಾತ್ರ ಅದು ಬಿದ್ದಿಲ್ಲ!

ರಾತ್ರೋರಾತ್ರಿ ಮನೆಗೆ ನುಗ್ಗುತ್ತಿರುವ ಚಿರತೆ, ದನ ಕರು ನಾಯಿಗಳ ತಿಂದು ಹಾಕ್ತಿದೆ, ಗ್ರಾಮಸ್ಥರ ನೆಮ್ಮದಿಯನ್ನೂ ಕೊಲ್ಲುತ್ತಿದೆ!
ರಾತ್ರೋರಾತ್ರಿ ಮನೆಗೆ ನುಗ್ಗುತ್ತಿರುವ ಚಿರತೆ, ದನ ಕರು ನಾಯಿಗಳ ತಿಂದು ಹಾಕ್ತಿದೆ, ಗ್ರಾಮಸ್ಥರ ನೆಮ್ಮದಿಯನ್ನೂ ಕೊಲ್ಲುತ್ತಿದೆ
TV9 Web
| Edited By: ಸಾಧು ಶ್ರೀನಾಥ್​|

Updated on: Jul 19, 2022 | 2:50 PM

Share

ಈಗ ಮುಂಗಾರು ಹಂಗಾಮು, ಎಲ್ಲೆಡೆ ಉತ್ತಮ ಮಳೆಯಾಗಿ ಭೂಮಿ ಹದವಾಗಿದೆ. ಜಮೀನಿಗೆ ತೆರಳಿ ಕೆಲಸ ಮಾಡೊಣ ಅಂತ ರೈತರು ಮುಂದಾದ್ರೆ… ಜಮೀನು ಬಳಿ ಚಿರತೆ ಧುತ್ತನೆ ಪ್ರತ್ಯಕ್ಷವಾಗಿ ದನ ಕರು ಕುರಿ ಮೇಕೆಗಳನ್ನು ತಿಂದು ಹಾಕ್ತಿದೆ. ಇನ್ನು ರಾತ್ರಿಯಾದ್ರೆ ಸಾಕು, ಮನೆ ಬಳಿಯೆ ಬರುವ ಚಿರತೆ… ಬಾಯಿಗೆ ಸಿಕ್ಕ ಪ್ರಾಣಿಗಳನ್ನು ಎಳೆದುಕೊಂಡು ಹೋಗಿ ತಿಂದು ಹಾಕ್ತಿದೆ. ಇದ್ರಿಂದ ಭಯ ಭೀತಿಗೊಂಡ ಗ್ರಾಮಸ್ಥರು ಹಗಲು ರಾತ್ರಿ ದೊಣ್ಣೆ ಹೊತ್ತು ಚಿರತೆ ಕಾಯುವಂತಾಗಿದೆ (Cheetah menace). ಅಷ್ಟಕ್ಕೂ ಅದೇಲ್ಲಿ ಅಂತೀರಾ ಈ ವರದಿ ಓದಿ.

ಹೀಗೆ ಈಟಿ ದೊಣ್ಣೆ ಮಚ್ಚುಗಳನ್ನು ಹಿಡಿದು, ಚಿರತೆ ಬರದಂತೆ ಗ್ರಾಮದ ಸುತ್ತಲೂ ಪಹರೆ ಕಾಯ್ತಿರುವುದು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ (Gudibande) ಉಪ್ಪರಹಳ್ಳಿ ಗ್ರಾಮದ ಬಳಿ!! ಹೌದು! ಕೆಲವು ದಿನಗಳಿಂದ ಉಪ್ಪಾರಹಳ್ಳಿ, ಕೊಂಡರೆಡ್ಡಿಹಳ್ಳಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಚಿರತೆ ಪ್ರತ್ಯಕ್ಷವಾಗಿ ರೈತರ ಕುರಿ ಮೇಕೆ ದನ ಕರುಗಳನ್ನು ತಿಂದು ಹಾಕಿದೆ. ಇದ್ರಿಂದ ರೈತರು ಚಿರತೆಯಿಂದ ಬಚಾಯ್ ಆಗಲು, ಜಮೀನುಗಳ ಕಡೆ ಹೋಗುವುದನ್ನೇ ಬಿಟ್ಟಿದ್ದಾರೆ. ಇನ್ನು ಉಪ್ಪಾರಹಳ್ಳಿ ಗ್ರಾಮದ ಆಂಜಿನಪ್ಪಗೆ ಸೇರಿದ ಮೂರು ಮೇಕೆಗಳನ್ನು ಚಿರತೆ ತಿಂದು ಹಾಕಿದೆ.

ಉಪ್ಪಾರಹಳ್ಳಿ ಗ್ರಾಮದ ಬಳಿ ಕಲ್ಲು ಕ್ವಾರಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ರಾತ್ರಿಯಾದ್ರೆ ಉಪ್ಪಾರಹಳ್ಳಿ ಬಳಿ ಆಗಮಿಸ್ತಿದೆ. ಗ್ರಾಮದ ನಾಯಿ, ಕುರಿ, ಕೋಳಿ, ಮೇಕೆ ಎಳೆದುಕೊಂಡು ಹೋಗಿ ತಿಂದು ಹಾಕಿದೆ. ಹಗಲು ರೈತರ ಜಮೀನಿನ ಬಳಿ ಕಾಣಿಸ್ತಿದೆ, ಒಂದೊಂದು ದಿನ ಒಂದೊಂದು ಕಡೆ ಚಿರತೆ ಕಾಣಿಸ್ತಿದೆ, ಇದ್ರಿಂದ ರೈತರು ಈಗ ಮನೆ ಬಿಟ್ಟು ಒಬ್ಬೊಬ್ಬರೆ ಜಮೀನು ಬಳಿ ಹೋಗಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರೆಲ್ಲಾ ಸೇರಿ ಒತ್ತಾಯ ಮಾಡ್ತಿದ್ದಾರೆ ಎಂದು ರೈತ ಆಂಜಿನಪ್ಪ ಅಲವತ್ತುಕೊಂಡಿದ್ದಾರೆ.

ಇನ್ನು ಕೊಂಡರೆಡ್ಡಿಹಳ್ಳಿ ಗ್ರಾಮದ ಬಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯವಿದ್ದು, ಅಲ್ಲಿಯೂ ಚಿರತೆ ಸುಳಿದಾಡಿದೆ. ಇದ್ರಿಂದ ವಿದ್ಯಾರ್ಥಿನಿಯರು ಶಾಲೆಯಿಂದ ಆಚೆ ಬರಲು ಹೆದರುತ್ತಿದ್ದಾರೆ. ಮತ್ತೊಂದೆಡೆ ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನ್ ಇಟ್ಟಿದೆ. ಬೋನ್ ಸುತ್ತಮುತ್ತ ಚಿರತೆ ಸುಳಿದಾಡಿದೆ, ಆದರೆ ಬೋನಿಗೆ ಮಾತ್ರ ಅದು ಬಿದ್ದಿಲ್ಲ! ಏನಾದ್ರು ಮಾಡಿ ಚಿರತೆ ಕಾಟದಿಂದ ಮುಕ್ತಿ ಕೊಡಿಸುವಂತೆ ಗ್ರಾಮಸ್ಥ ವೆಂಕಟೇಶ ಒತ್ತಾಯ ಮಾಡಿದ್ದಾರೆ.

– ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

Follow Us
TV9 Web
TV9 Web

TV9 Kannada

Read More
ನವೆಂಬರ್ 2 ರಿಂದ 8 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 2 ರಿಂದ 8 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ವಸತಿ ಸೌಲಭ್ಯ!
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ವಸತಿ ಸೌಲಭ್ಯ!
‘ಜೈಲರ್ 2’ ಸಿನಿಮಾನಲ್ಲಿ ನಟಿಸಿರುವ ಕನ್ನಡತಿ ಯಶಸ್ವಿನಿ ದೇವಾಡಿಗ ಜೊತೆ ಮಾತು
‘ಜೈಲರ್ 2’ ಸಿನಿಮಾನಲ್ಲಿ ನಟಿಸಿರುವ ಕನ್ನಡತಿ ಯಶಸ್ವಿನಿ ದೇವಾಡಿಗ ಜೊತೆ ಮಾತು
ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ
ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು