ಮನೆಯಿಂದ ಆಚೆ ಹಾಕಿದ್ದ ಮಗಳಿಗೆ ತಕ್ಕ ಪಾಠ ಕಲಿಸಿದ ಅಪ್ಪ: ಮಗಳಿಗೆ ತಕ್ಕ ತಂದೆ..!
ಆಸ್ತಿಗಾಗಿ ಅಪ್ಪ ಮಗನ ನಡುವೆ ಜಟಾಪಟಿ ನಡೆಯುವುದು ಸಾಮಾನ್ಯ..ಆದ್ರೆ ಇಲ್ಲಿ ಅಪ್ಪ ಮಗಳ ನಡುವೆಯೇ ಬೀದಿ ರಂಪಾಟ ನಡೆದಿದೆ. ಅಪ್ಪನ ಮನೆ ಸೇರಿದ್ದ ಮಗಳು, ಅಪ್ಪನನ್ನ ಮನೆಯಿಂದ ಹೊರದೂಡಿದ್ದಳು. ಇದರಿಂದ ನೊಂದ ತಂದೆ ಎ.ಸಿ ನ್ಯಾಯಾಲಯದ ಮೊರೆ ಹೋಗಿದ್ದು, ಕೊನೆಗೆ ನ್ಯಾಯಾಲಯವು ಮನೆಯಲ್ಲಿದ್ದ ಮಗಳನ್ನು ಹೊರ ಹಾಕಿ ತಂದೆಗೆ ಮನೆ ಕಲ್ಪಿಸಿಕೊಟ್ಟಿದೆ. ಇದು ಮಗಳಿಗೆ ತಕ್ಕ ತಂದೆಯ ಸ್ಟೋರಿ.

ಚಿಕ್ಕಬಳ್ಳಾಪುರ, (ಏಪ್ರಿಲ್ 10): ಮನೆಗಾಗಿ ಅಪ್ಪ ಹಾಗೂ ಮಗಳ(Daughter) ನಡುವೆಯೇ ಜಟಾಪಟಿ. ನೀನು ಹಾಗೆ ಮಾಡಿದೆ ಎಂದು ಅಪ್ಪ…ಇಲ್ಲ ನೀನು ಮಾಡಿದ್ದು ಸರೀನಾ ಅಂತ ಮಗಳ ಕಣ್ಣೀರು, ಮತ್ತೊಂದೆಡೆ ನ್ಯಾಯಾಲಯದ (AC Court)) ಆದೇಶದಂತೆ ಮನೆ ಖಾಲಿ ಮಾಡಿ ಅಪ್ಪನಿಗೆ ಬಿಟ್ಟುಕೊಡುವಂತೆ ತಹಶೀಲ್ದಾರ್ ತಾಕೀತು. ಹೀಗೆ ಮನೆಗಾಗಿ ಅಪ್ಪ ಮಗಳ ನಡುವೆ ಜಟಾಪಟಿ ನಡೆದಿದ್ದು, ಚಿಕ್ಕಬಳ್ಳಾಪುರ (Chikkaballapur) ನಗರ ಶಾಂತಿನಗರದಲ್ಲಿ. ಸುಬ್ಬಲಕ್ಷ್ಮೀ ಎನ್ನವ ಮಗಳು ಗಂಡನ ಮನೆ ಬಿಟ್ಟು ತವರು ಮನೆಯಲ್ಲೇ ನೆಲೆಸಿದ್ದಳು. ಆದರೂ ಸುಬ್ಬಲಕ್ಷ್ಮೀ ತಂದೆ ವೆಂಕಟರೋಣಪ್ಪನವರ ಜೊತೆ ಗಲಾಟೆ ಮಾಡಿದ್ದು, ಮನೆಯಿಂದ ಆಚೆ ಹಾಕಿದ್ದಾರೆ. ಕೊನೆಗೆ ನ್ಯಾಯಾಲಯವು ವೆಂಕಟರೋಣಪ್ಪನವರ ನೆರವಿಗೆ ಬಂದಿದ್ದು, ಮಗಳನ್ನೇ ಮನೆಯಿಂದ ಆಚೆ ಹಾಕಿಸಿ ತಂದೆಗೆ ಮನೆ ಕಲ್ಪಿಸಿಕೊಟ್ಟಿದೆ.
ಶಾಂತಿ ನಗರದ ನಿವಾಸಿ ವೆಂಕಟರೋಣಪ್ಪನವರಿಗೆ ಸರಿಸುಮಾರು 72 ವರ್ಷ ವಯಸ್ಸು. ಇವರಿಗೆ ಮೂರು ಜನ ಮಕ್ಕಳಿದ್ದಾರೆ.. ಮಗಳು ಸುಬ್ಬಲಕ್ಷ್ಮೀ ಅಣಗನವಾಡಿ ಶಿಕ್ಷಕಿ. ತಂದೆಯ ಆಸ್ತಿಯಾಗಿರೋ ಶಾಂತಿ ನಗರದ ಮನೆಯಲ್ಲೇ ತಂದೆಯ ಜೊತೆಯಲ್ಲಿ ತನ್ನ ಗಂಡ ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದಳು. ಆದ್ರೆ ಮಗಳು ಸುಬ್ಬುಲಕ್ಷ್ಮೀ ತಂದೆಯನ್ನೇ ಸರಿಯಾಗಿ ನೋಡಿಕೊಳ್ತಿರಲಿಲ್ಲವಂತೆ, ಊಟ ಹಾಕ್ತಿರಲಿಲ್ಲವಂತೆ, ಹೀಗಾಗಿ ಮನನೊಂದ ತಂದೆ ಹಾಗೂ ಮಗಳ ಜೊತೆ ಸದಾ ಜಗಳ ಮಾಡುತ್ತಿದ್ದರು. ಹೀಗಾಗಿ ಮಗಳು ಸುಬ್ಬಲಕ್ಷ್ಮೀ, ತಂದೆಯನ್ನೇ ಮನೆಯಿಂದ ಆಚೆ ಹಾಕಿದ್ದಳು. ಮಗಳ ವರ್ತನೆಯಿಂದ ಬೇಸತ್ತಿದ್ದ ವೆಂಕಟರೋಣಪ್ಪ, ಹಿರಿಯ ನಾಗರಿಕರ ಪೋಷಣೆ ಮತ್ತು ಶ್ರೇಯೊಭಿವೃದ್ದಿ ಹಾಗೂ ಸಂರಕ್ಷಣಾ ಕಾಯ್ದೆ 2007ರಡಿ, ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರಕ್ಕೆ ತೋರಣವಾದ ತಬೂಬಿಯಾ ರೋಸಿಯಾ ಮರದ ಹೂವುಗಳು
ಈ ಪ್ರಕರಣವನ್ನು ವಿಚಾರಣೆ ನಡೆಸಿದ ಎ.ಸಿ ನ್ಯಾಯಾಲಯವು, ಇರುವ ಮನೆಯನ್ನು ವೆಂಕಟರೋಣಪ್ಪಗೆ ಬಿಟ್ಟು ಕೊಡಬೇಕು. ಅಲ್ಲದೇ ಪ್ರತಿ ತಿಂಗಳ ಐದು ಸಾವಿರ ರೂಪಾಯಿ ಹಣ ನೀಡುವಂತೆ ಆದೇಶ ಮಾಡಿದ್ದು, ಆದೇಶವನ್ನು ಅನುಷ್ಠಾನ ಮಾಡಿಸುವಂತೆ ಚಿಕ್ಕಬಳ್ಳಾಪುರ ತಹಶಿಲ್ದಾರ್ ಹಾಗೂ ಪೊಲಿಸರಿಗೆ ಸೂಚನೆ ನೀಡಿದೆ. ಈ ಆದೇಶದ ಮೇರೆಗೆ ಚಿಕ್ಕಬಳ್ಳಾಪುರ ತಹಶಿಲ್ದಾರ್ ಅನಿಲ್, ಮುಲಾಜಿಲ್ಲದೆ ಸುಬ್ಬಲಕ್ಷ್ಮೀ ಆಕೆಯ ಮಕ್ಕಳು ಹಾಗೂ ಆಕೆಯ ಗಂಡನನ್ನು ಮನೆಯಿಂದ ಆಚೆ ಹಾಕಿ, ಹಿರಿಯ ನಾಗರಿಕ ವೆಂಕಟರೋಣಪ್ಪ ಮನೆ ಕೊಡಿಸಿದ್ದಾರೆ.
ನ್ಯಾಯಾಲಯ ಆದೇಶ ಕಂಡು ಹೈಡ್ರಾಮಾ ಮಾಡಿದ್ದಳು. ಅಲ್ಲದೇ ಎಸಿ ಆದೇಶದ ಮೇರೆಗೆ ಮನೆ ಖಾಲಿ ಮಾಡಿಸಲು ಬಂದ ತಹಶೀಲ್ದಾರ್ ಜೊತೆಯಲ್ಲೇ ಮಗಳು ಸುಬ್ಬಲಕ್ಷ್ಮೀ ಮನೆ ಖಾಲಿ ಮಾಡಲು ಆಗಲ್ಲ, ನಾವು ಬಂಡವಾಳ ಹಾಕಿ ಮನೆ ಕಟ್ಟಿದ್ದೇವೆ ಎಂದು ವಾಗ್ವಾದ ಮಾಡಿದ್ದಳು. ಆದರೂ ಬಿಡಿದ ತಹಶೀಲ್ದಾರ್, ತಮ್ಮ ಕರ್ತವ್ಯ ನಿರ್ವಹಿಸಿ ವೆಂಕಟರೋಣಪ್ಪಗೆ ಮನೆ ಒದಗಿಸಿದ್ದಾರೆ.
ಮಗಳು ತಂದೆಯನ್ನು ಚೆನ್ನಾಗಿ ನೋಡಿಕೊಂಡು ಇದ್ದರೆ ಸಾಕಿತ್ತು. ಅದರ ಬದಲಿ ಗಲಾಟೆ ಮಾಡಿಕೊಂಡು ಅವರನ್ನೇ ಮೆನೆಯಿಂದ ಆಚೆ ಹಾಕಿದ್ದರು. ಆದ್ರೆ, ಇದೀಗ ಮಗಳೇ ಮನೆಬಿಟ್ಟು ಹೋಗುವಂತಾಗಿದೆ. ಅದೇನೇ ಇರಲಿ ಅಪ್ಪ ಮಗಳ ನಡುವೆಯೇ ಕಾನೂನು ಹೋರಾಟ ನಡೆದು ಕೊನೆಗೆ ಹಾದಿ ಬೀದಿ ರಂಪಾಟ ಆಗಿದ್ದು ಮಾತ್ರ ವಿಪರ್ಯಾಸ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.