ಇನ್ಮುಂದೆ ರೆವಿನ್ಯೂ ಸ್ವತ್ತುಗಳಿಗೂ ದೊರೆಯಲಿದೆ ನಕ್ಷೆ ಮಂಜೂರಾತಿ ಭಾಗ್ಯ: ಇಲ್ಲಿದೆ ಮಾಹಿತಿ
ಬೆಂಗಳೂರಿನ ರೆವಿನ್ಯೂ ಆಸ್ತಿ ಮಾಲೀಕರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇದೀಗ ಬಿಬಿಎಂಪಿಗೆ ರೆವಿನ್ಯೂ ಆಸ್ತಿಗಳ ಯೋಜನೆ ಅನುಮೋದನೆಯ ಅಧಿಕಾರ ನೀಡಲಾಗಿದೆ. ಮೊದಲು ಬಿಡಿಎ ಹೊಂದಿದ್ದ ಈ ಅಧಿಕಾರವನ್ನು ಬಿಬಿಎಂಪಿಗೆ ವರ್ಗಾಯಿಸಲಾಗಿದೆ. ಇದರಿಂದ ಬಿ ಖಾತಾ ಆಸ್ತಿಗಳ ಮಾಲೀಕರಿಗೆ ನಕ್ಷೆ ಅನುಮೋದನೆ ಸುಲಭವಾಗಲಿದೆ.

ಬೆಂಗಳೂರು, ಏಪ್ರಿಲ್ 10: ಇಷ್ಟು ದಿನ ಬಿಡಿಎಗೆ (BDA) ಇದ್ದ ಭೂ ಪರಿವರ್ತನೆ ಅಧಿಕಾರವನ್ನು ಇದೀಗ ಬಿಬಿಎಂಪಿಗೆ (BBMP) ಹಸ್ತಾಂತರಿಸಲಾಗಿದೆ. ಇನ್ಮುಂದೆ ರೆವಿನ್ಯೂ ಸ್ವತ್ತುಗಳಿಗೂ ನಕ್ಷೆ ಮಂಜೂರಾತಿ ಭಾಗ್ಯ ದೊರೆಯಲಿದೆ. ಆ ಮೂಲಕ ಮಹಾವೀರ ಜಯಂತಿಯಂದು ರೆವಿನ್ಯೂ ಸ್ವತ್ತುಗಳ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಬಿಬಿಎಂಪಿ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ ಆದಾಯ ಹರಿದು ಬರುವ ನಿರೀಕ್ಷೆಯಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಈ ಮೊದಲು ಬಿಡಿಎಗೆ ಇದ್ದ ರೆವಿನ್ಯೂ ಸ್ವತ್ತುಗಳ ಭೂ ಪರಿವರ್ತನೆ ಅಧಿಕಾರವನ್ನು ಇನ್ಮುಂದೆ ಬಿಬಿಎಂಪಿ ನಗರ ಯೊಜನೆ ವಿಭಾಗಕ್ಕೆ ಅಧಿಕಾರ ನೀಡಲಾಗಿದೆ. ಎಡಿಟಿಪಿಗಳಿಗೆ ಭೂ ಪರಿವರ್ತನೆ ಪವರ್ ನೀಡಲಾಗಿದ್ದು, ಕನ್ವರ್ಷನ್ ಮಾಡಿ, ಸುಧಾರಣಾ ಶುಲ್ಕ ಪಾವತಿಸಿಕೊಂಡು ಪ್ಲ್ಯಾನ್ ಕೊಡಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Karnataka Caste Census: ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆಗೆ ಕೊನೆಗೂ ಮುಹೂರ್ತ ಫಿಕ್ಸ್
ಇನ್ನು ಏಕ ನಿವೇಶನ ವಿನ್ಯಾಸ ನಕ್ಷೆ ಮಂಜೂರಾತಿ ಅಧಿಕಾರದಲ್ಲಿ ಮಾರ್ಪಾಡು ಮಾಡಲಾಗಿದೆ. ಬಿ ಖಾತಾಗಳಿಗೆ ಕಟ್ಟಡ ಮಂಜೂರಾತಿ ನಕ್ಷೆ ಸಿಗುತ್ತಿರಲಿಲ್ಲ. ಆದರೆ ಸರ್ಕಾರದ ಈ ನಿರ್ಧಾರ ರೆವಿನ್ಯೂ ಜಾಗದ ಮಾಲೀಕರ ಸಂಕಷ್ಟ ದೂರ ಮಾಡಿದೆ.
ವಿಧಾನಸೌಧದಲ್ಲಿ ರಾಷ್ಟ್ರೀಯ ಭೂಮಾಪನ ದಿನಾಚರಣೆ
ವಿಧಾನಸೌಧದಲ್ಲಿ ರಾಷ್ಟ್ರೀಯ ಭೂಮಾಪನ ದಿನಾಚರಣೆ ಸಮಾರಂಭ ಮಾಡಲಾಗಿದ್ದು, ಇಲಾಖೆಯ 2 ವರ್ಷದ ಸಾಧನೆ ಕೈಪಿಡಿಯನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಹಾಗೆಯೇ ಭೂಮಾಪನ ಇಲಾಖೆ ಸುತ್ತೋಲೆಯ ಸಂಪುಟ ಬಿಡುಗಡೆ ಮಾಡಿದರು. ಭೂ ಮಾಪಕರಿಗೆ ಆಧುನಿಕ ಸರ್ವೆ ಉಪಕರಣ ರೋವರ್ಗಳ ವಿತರಣೆ ಮಾಡಲಾಗಿದ್ದು, ಸ್ವಮಿತ್ವ ಯೋಜನೆಯಡಿ ಗ್ರಾಮೀಣ ಜನವಸತಿ ಪ್ರದೇಶದ ನಕ್ಷೆ ಬಿಡುಗಡೆ ಮಾಡಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಿಷ್ಟು
ಈ ವೇಳೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, 7 ವರ್ಷಗಳಿಂದ ಭೂ ಮಾಪನ ದಿನಾಚರಣೆ ಆಚರಿಸಿರಲಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದೊಡ್ಡ ಕಾರ್ಯಕ್ರಮವಾಗಿದೆ. ರೈತರ ಕೆಲಸ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
1802ರಲ್ಲಿ ಸರ್ವೇ ನಡೆದಿದೆ. ವೈಜ್ಞಾನಿಕವಾಗಿ ಸರ್ವೇ ಮಾಡಬೇಕು ಎಂದು ಹೇಳಿ ಕನ್ಯಾಕುಮಾರಿಯಿಂದ ಬೆಂಗಳೂರಿನವರೆಗೂ ಸರ್ವೇ ಮಾಡಲಾಗಿತ್ತು. ಅದೇ ರೀತಿ ಅಕ್ಕಪಕ್ಕದ ದೇಶಗಳಿಗೂ ಇದೇ ದಿನ ಸರ್ವೇ ದಿನ ಆಚರಣೆ ಮಾಡುತ್ತಾ ಬಂದಿದ್ದೇವೆ. ದಕ್ಷಿಣ ಏಷ್ಯದ ವೈಜ್ಞಾನಿಕ ಸರ್ವೇ ಆರಂಭವಾಗಿದ್ದೇ ಇದೇ ದಿನ. ಇದಕ್ಕೂ ಮುನ್ನ ಸರ್ವೇ ಆ್ಯಂಡ್ ಸೆಟಲ್ಮೆಂಟ್ ಡಿಪಾರ್ಟ್ಮೆಂಟ್ ಎಂದು ಕರೆಯುತ್ತಿದ್ದರು. ಸರ್ವೇ ಮಾಡಿದಾಗಲೇ ಜಮೀನಿಗೆ ಅಸ್ತಿತ್ವ ಬರುತ್ತದೆ. ಆಡಳಿತ ವ್ಯವಸ್ಥೆಗೆ ಅಡಿಪಾಯ ಹಾಕಿದ್ದೇ ಸರ್ವೇ ಇಲಾಖೆ ಎಂದು ತಿಳಿಸಿದರು.
ಇದನ್ನೂ ಓದಿ: ಶಾಲಾ ಶುಲ್ಕವಾಯ್ತು, ಇದೀಗ ಶಾಲಾ ವಾಹನ ಶುಲ್ಕ ಏರಿಕೆ ಸರದಿ: ಕೇಳೋರಿಲ್ಲ ಪೋಷಕರ ಗೋಳು!
ಸರ್ವೇ ವಿಧಾನ ಕೂಡ ಬದಲಾವಣೆ ಆಗಿಲ್ಲ. ನಾವು ಮಾಡುವ ಕೆಲಸ 200 ವರ್ಷ ಹಿಂದೆಯೇ ಉಳಿದಿದೆ. ಆದರೆ ಇದೀಗ ಟೆಕ್ನಾಲಜಿ ಹೆಚ್ಚಾಗಿದೆ. ಇಷ್ಟೊಂದು ಟೆಕ್ನಾಲಜಿ ಇದ್ದರೆ ಯಾಕೆ ಸಿಬ್ಬಂದಿ ಕೆಲಸ ಸರಳೀಕರಣ ಮಾಡಿಲ್ಲ ಎಂದು ಅರ್ಥವಾಯ್ತು. ಐದು ಸಾವಿರ ರೋವರ್ ಖದೀರಿಗೆ ಟೆಂಡರ್ ಆಗಿದೆ. ಸ್ಟೇಜ್ ಬೈ ಸ್ಟೇಜ್ ಖರೀದಿ ಮಾಡಲು ಹೇಳಿದ್ದಾರೆ. ಇದರಿಂದ ನೌಕರರ ಮೇಲಿನ ಹೊರೆ ಕಡಿಮೆಯಾಗುತ್ತದೆ. ಬೇಗ ಕೆಲಸ ಆಗುತ್ತದೆ. ಎಲ್ಲಾ ಮಾದರಿಯಲ್ಲಿ ಡಿಜಿಟೀಕರಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.