AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ, ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಏರಿಕೆ: ನಾಲ್ಕೈದು ದಿನ ರಜೆಗೆಂದು ಬೆಂಗಳೂರಿನಿಂದ ಊರಿಗೆ ಹೊರಟವರಿಗೆ ಶಾಕ್

ಸಾಲು-ಸಾಲು ರಜೆ ಬಂತು ಅಂದರೆ ಖಾಸಗಿ ಬಸ್​ಗಳಿಗೆ ಹಬ್ಬವೋ ಹಬ್ಬ. ಎರಡ್ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ದುಪ್ಪಟ್ಟು ದರ ವಸೂಲಿ ಶುರು ಮಾಡುತ್ತವೆ. ಈಗ ಮತ್ತದೇ ಚಾಳಿ ಮುಂದುವರಿದಿದೆ. ಈ ಬಾರಿ ಸಾಲಾಗಿ ನಾಲ್ಕೈದು ರಜೆಗಳು ಬಂದಿದ್ದು, ಊರಿಗೆ ಹೋಗೋಣ ಅಂದುಕೊಂಡಿದ್ದವರಿಗೆ ಖಾಸಗಿ ಬಸ್​ಗಳು ಶಾಕ್ ನೀಡಲು ಮುಂದಾಗಿದೆ. ಈ ಬಾರಿ ಕೆಎಸ್​ಆರ್​ಟಿಸಿ ಬಸ್​ಗಳೂ ದರ ಹೆಚ್ಚಳ ಮಾಡಿವೆ. ದರ ವಿವರ ಇಲ್ಲಿದೆ.

ಖಾಸಗಿ, ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಏರಿಕೆ: ನಾಲ್ಕೈದು ದಿನ ರಜೆಗೆಂದು ಬೆಂಗಳೂರಿನಿಂದ ಊರಿಗೆ ಹೊರಟವರಿಗೆ ಶಾಕ್
ಸಾಂದರ್ಭಿಕ ಚಿತ್ರ
Kiran Surya
| Edited By: |

Updated on: Apr 10, 2025 | 8:44 AM

Share

ಬೆಂಗಳೂರು, ಏಪ್ರಿಲ್ 10: ಯುಗಾದಿ, ಗೌರಿ- ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ… ಹೀಗೆ ಹಬ್ಬಗಳ ಸೀಸನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ‌ ಲಾಟರಿ. ಸಿಕ್ಕಿದ್ದೇ ಚಾನ್ಸ್ ಎಂದು ಜನರಿಂದ ದುಪ್ಪಟ್ಟು ವಸೂಲಿಗೆ ಇಳಿದು ಬಿಡುತ್ತಾರೆ. ರಜೆ (Holidays) ಅಂತ ಮನೆ ಕಡೆ ಹೊರಟವರ ಜೇಬಿಗೆ ಗುನ್ನ ಇಡುತ್ತಾರೆ. ಹೀಗೆ ಅವಕಾಶ ಸಿಕ್ಕಗಾಲೆಲ್ಲ ದರ ಏರಿಸುವ ಪ್ರವೇಟ್ ಬಸ್ (Private Bus Ticket Price Hike) ಮಾಲೀಕರು, ಈ ಬಾರಿಯೂ ವಸೂಲಿಗೆ ಮುಂದಾಗಿದ್ದಾರೆ. ಈ ಬಾರಿ ಸಾಲಾಗಿ ನಾಲ್ಕೈದು ದಿನ ರಜೆ ಸಿಕ್ಕಿದ್ದು ಜನ ತಮ್ಮ ತಮ್ಮ ಊರಿನ ಕಡೆ ಮುಖ ಮಾಡಿದ್ದಾರೆ. ಇಂದು (ಗುರುವಾರ) ಮಹಾವೀರ ಜಯಂತಿ, ಶುಕ್ರವಾರ ಒಂದು ದಿನ ರಜೆ ಹಾಕಿಕೊಂಡರೆ ಶನಿವಾರ ಸೆಕೆಂಡ್ ಸ್ಯಾಟರ್​ಡೇ ಮತ್ತು ಹನುಮಜಯಂತಿ ರಜೆ, ಭಾನುವಾರ ಹೇಗೂ ರಜೆ ಸಿಗುತ್ತದೆ. ಸೋಮವಾರ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ. ಸರ್ಕಾರಿ ರಜೆ. ಅಲ್ಲಿಗೆ ಶುಕ್ರವಾರ ಒಂದು ದಿನ ರಜೆ ಹಾಕಿಕೊಂಡರೆ ಐದು ದಿನ ರಜೆ ಸಿಗುತ್ತದೆ. ಈ ಹಿನ್ನೆಲೆ ಜನ ಬೆಂಗಳೂರಿನಿಂದ (Bengaluru) ಊರಿಗೆ ಹೋಗಲು ಮುಂದಾಗುತ್ತಿದ್ದಾರೆ.

ಆದರೆ ಖಾಸಗಿ ಬಸ್ ದರ ದುಪ್ಪಟ್ಟು ಆಗಿರುವುದು ಊರಿಗೆ ಹೊರಟವರಿಗೆ ಶಾಕ್ ನೀಡಿದೆ. ಇದಕ್ಕೆ ಜನ ಆಕ್ರೋಶ ವ್ಯಕ್ತಪಡಿದ್ದಾರೆ. ಮಂಗಳವಾರ ದೇವದುರ್ಗದಿಂದ ಬೆಂಗಳೂರಿಗೆ ಖಾಸಗಿ ಬಸ್​ನಲ್ಲಿ 750 ರುಪಾಯಿ ಟಿಕೆಟ್ ದರ ಇತ್ತು. ಗುರುವಾರ ಆನ್​​ಲೈನ್​​ನಲ್ಲಿ 2 ಸಾವಿರ ರುಪಾಯಿ ತೋರಿಸುತ್ತಿದೆ ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಬಸ್ ದರ ಏರಿಕೆ ವಿವರ (ರೂಪಾಯಿಗಳಲ್ಲಿ)

ಬೆಂಗಳೂರು-ಧಾರವಾಡ

ಇದನ್ನೂ ಓದಿ
Image
ವಾಹನ ಪಾರ್ಕ್ ಮಾಡಿ ಮೆಟ್ರೋದಲ್ಲಿ ಸಂಚರಿಸುವವರಿಗೆ ಸಿಗಲಿದೆ ಡಿಸ್ಕೌಂಟ್
Image
ರಜೆಯೆಂದು ಮನೆಗೆ ಬೀಗ ಹಾಕಿ ಊರು, ಪ್ರವಾಸ ಹೋಗೋ ಮುನ್ನ ಪೊಲೀಸರ ಸಲಹೆ ಗಮನಿಸಿ
Image
ಇಂದು, ನಾಳೆ ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ
Image
ಬೆಂಗಳೂರು ಮೈಸೂರು ರೈಲು ಪ್ರಯಾಣಿಕರಿಗೆ ಸಂಕಷ್ಟ
  • ಹಿಂದಿನ ದರ = 750 – 2999
  • ಪ್ರಸ್ತುತ ದರ = 850 – 10,000

ಬೆಂಗಳೂರು- ಧರ್ಮಸ್ಥಳ

  • ಹಿಂದಿನ ದರ = 600-850
  • ಪ್ರಸ್ತುತ ದರ = 1250-2000

ಬೆಂಗಳೂರು-ಮೈಸೂರು

  • ಹಿಂದಿನ ದರ = 190-1600
  • ಪ್ರಸ್ತುತ ದರ = 300-5999

ಬೆಂಗಳೂರು-ಕೊಡಗು

  • ಹಿಂದಿನ ದರ = 580-990
  • ಪ್ರಸ್ತುತ ದರ = 1000-1900

ಬೆಂಗಳೂರು-ಚಿಕ್ಕಮಗಳೂರು

  • ಹಿಂದಿನ ದರ = 500-700
  • ಪ್ರಸ್ತುತ ದರ = 599-1150

ಬೆಂಗಳೂರು-ಮಂಗಳೂರು

  • ಹಿಂದಿನ ದರ = 600-2999
  • ಪ್ರಸ್ತುತ ದರ = 900-3000

ಬೆಂಗಳೂರು-ಹುಬ್ಬಳ್ಳಿ

  • ಹಿಂದಿನ ದರ = 759-3,800
  • ಪ್ರಸ್ತುತ ದರ = 819-10,000

ಬೆಂಗಳೂರು- ಕಾರವಾರ

  • ಹಿಂದಿನ ದರ = 850-2999
  • ಪ್ರಸ್ತುತ ದರ = 1499-3000

ಬೆಂಗಳೂರು-ಕಲ್ಬುರ್ಗಿ

  • ಹಿಂದಿನ ದರ = 850-4000
  • ಪ್ರಸ್ತುತ ದರ = 1399-2400

ಬೆಂಗಳೂರು-ಶಿವಮೊಗ್ಗ

  • ಹಿಂದಿನ ದರ = 350-1899
  • ಪ್ರಸ್ತುತ ದರ = 799-2299

ಕೆಎಸ್​ಆರ್​ಟಿಸಿ ಬಸ್​ಗಳಿಂದಲೂ ಟಿಕೆಟ್ ದರ ಏರಿಕೆ

ಈ ಬಾರಿ ರಜೆಗೆ ಊರಿಗೆ ಹೋಗುವವರಿಗೆ ಖಾಸಗಿ ಬಸ್​ಗಳು ಮಾತ್ರ ದರ ಏರಿಕೆ ಮಾಡಿಲ್ಲ. ಕೆಎಸ್ಆರ್​​ಟಿಸಿ ಬಸ್​ಗಳೂ ದರ ಏರಿಕೆ ಮಾಡಿವೆ. ಕೆಎಸ್ಆರ್​​ಟಿಸಿ ಬಸ್​ಗ ಶೇ 15 ರಿಂದ 20 ರಷ್ಟು ದರ ಏರಿಕೆ ಮಾಡಿವೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಬೆಂಗಳೂರು – ಹುಬ್ಬಳ್ಳಿಗೆ ಎಸಿ ಸ್ಲೀಪರ್ ಸಾಮಾನ್ಯ ದರ – 1100 ರುಪಾಯಿ. ಆದ್ರೆ ಬುಧವಾರ -1350 ಆಗಿದೆ. ನಾನ್ ಎಸಿ ಸ್ಲೀಪರ್ ಸಾಮಾನ್ಯ ದರ -800 ರುಪಾಯಿ ಬುಧವಾರ – 1100 ರೂ ಆಗಿದೆ. ಬೆಂಗಳೂರು – ಬೀದರ್ ಎಸಿ ಸ್ಲೀಪರ್ ಸಾಮಾನ್ಯ ದರ – 1500 ಇತ್ತು. ಈಗ 1900 ರಿಂದ 2100 ಆಗಿದೆ. ನಾನ್ ಎಸಿ ಸ್ಲೀಪರ್ ಸಾಮಾನ್ಯ ದರ – 1200 ಯಿಂದ 1850 ರೂ.ಗೆ ಜಾಸ್ತಿ ಆಗಿದೆ. ಬೆಂಗಳೂರು – ಮಂಗಳೂರು ಎಸಿ ಸ್ಲೀಪರ್ ಸಾಮಾನ್ಯ ದರ – 1500 ರೂ. ಈಗಿನ ದರ – 1850 ರೂ. ಆಗಿದೆ. ನಾನ್ ಎಸಿ ಸಾಮಾನ್ಯ ದರ – 1100 ರೂ, ಈಗಿನ ದರ – 1500 ಆಗಿದೆ.

ಇದನ್ನೂ ಓದಿ: ವಾಹನ ಪಾರ್ಕ್ ಮಾಡಿ ಮೆಟ್ರೋ ಪ್ರಯಾಣ ಮಾಡುವವರಿಗೆ ಶೀಘ್ರದಲ್ಲೇ ಸಿಗಲಿದೆ ಡಿಸ್ಕೌಂಟ್

ಒಟ್ಟಿನಲ್ಲಿ ಖಾಸಗಿ ಬಸ್​ಗಳೇನೋ ದುಪ್ಪಟ್ಟು ದರ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದ್ದರೆ, ಇತ್ತ ಸಾರ್ವಜನಿಕ ಸಾರಿಗೆಯಾಗಿರುವ ಕೆಎಸ್​ಆರ್​ಟಿಸಿ ಕೂಡ ಹೆಚ್ಚಿನ ದರ ಪಡೆಯಲು ಮುಂದಾಗಿರುವುದು ದುರಂತವೇ ಸರಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ