ಸಚಿವ ಉಮೇಶ್ ಕತ್ತಿ ಇಲಾಖೆಯಲ್ಲಿ ಭಾರಿ ಗೋಲ್ಮಾಲ್, ಅಕ್ರಮ ಬಯಲು ಮಾಡಿದ ಶಾಸಕ

ಬಾಗೇಪಲ್ಲಿ ಪಟ್ಟಣದಲ್ಲಿರುವ ಕೆ.ಎಫ್.ಸಿ.ಎಸ್.ಸಿ ಗೋಡೌನ್ ಮೇಲೆ ಶಾಸಕ, ತಹಶೀಲ್ದಾರ್, ಅಧಿಕಾರಿಗಳ ತಂಡದಿಂದ ದಾಳಿ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ಬಾಗೇಪಲ್ಲಿ ತಹಶೀಲ್ದಾರ್ ಡಿ.ಎ.ದಿವಾಕರ್ ತಂಡ ಕೆ.ಎಫ್.ಸಿ.ಎಸ್.ಸಿ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಗೋಡೌನ್ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಅಕ್ಕಿ, ಗೋದಿ, ರಾಗಿ ವಿತರಣೆಯಲ್ಲಿ ಗೋಲ್ ಮಾಲ್ ನಡೆದಿರುವುದು ಗೊತ್ತಾಗಿದೆ.

ಸಚಿವ ಉಮೇಶ್ ಕತ್ತಿ ಇಲಾಖೆಯಲ್ಲಿ ಭಾರಿ ಗೋಲ್ಮಾಲ್, ಅಕ್ರಮ ಬಯಲು ಮಾಡಿದ ಶಾಸಕ
ಸಚಿವ ಉಮೇಶ್ ಕತ್ತಿ ಇಲಾಖೆಯಲ್ಲಿ ಭಾರಿ ಗೋಲ್ಮಾಲ್, ಅಕ್ರಮ ಬಯಲು ಮಾಡಿದ ಶಾಸಕ

ಚಿಕ್ಕಬಳ್ಳಾಫುರ: ಉಮೇಶ್ ಕತ್ತಿ ಸಚಿವರಾಗಿರುವ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಲ್ಲಿ ಭಾರಿ ಗೋಲ್ಮಾಲ್ ನಡೆಯುತ್ತಿದೆ. ಸ್ವತಃ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಇಲಾಖೆ ಅಧಿಕಾರಿಗಳ ಗೋಲ್ ಮಾಲ್ ಪತ್ತೆ ಹಚ್ಚಿದ್ದಾರೆ.

ಬಾಗೇಪಲ್ಲಿ ಪಟ್ಟಣದಲ್ಲಿರುವ ಕೆ.ಎಫ್.ಸಿ.ಎಸ್.ಸಿ ಗೋಡೌನ್ ಮೇಲೆ ಶಾಸಕ, ತಹಶೀಲ್ದಾರ್, ಅಧಿಕಾರಿಗಳ ತಂಡದಿಂದ ದಾಳಿ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ಬಾಗೇಪಲ್ಲಿ ತಹಶೀಲ್ದಾರ್ ಡಿ.ಎ.ದಿವಾಕರ್ ತಂಡ ಕೆ.ಎಫ್.ಸಿ.ಎಸ್.ಸಿ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಗೋಡೌನ್ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಅಕ್ಕಿ, ಗೋದಿ, ರಾಗಿ ವಿತರಣೆಯಲ್ಲಿ ಗೋಲ್ ಮಾಲ್ ನಡೆದಿರುವುದು ಗೊತ್ತಾಗಿದೆ. ತಲಾ ನ್ಯಾಯಬೆಲೆ ಅಂಗಡಿಗಳಿಗೆ ಎರಡು ಕ್ವಿಂಟಲ್ ರಾಗಿ ಕಡಿತ ಮಾಡಿ ಅಧಿಕಾರಿಗಳು 3,500 ಕ್ವಿಂಟಾಲ್ ರಾಗಿ ಖರೀದಿ ಮಾಡದೆ ಮದ್ಯವರ್ತಿಗಳಿಗೆ ಹಣ ನೀಡಿದ್ದಾರೆ.

ಪರಿಶೀಲನೆ ವೇಳೆ 100 ಕ್ವಿಂಟಲ್ ಅಕ್ಕಿ, 150 ಕ್ವಿಂಟಲ್ ಗೋಧಿಯನ್ನು ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸದೆ ಗೋಲ್ ಮಾಲ್ ಮಾಡಿದ್ದಾರೆ. ಅಧಿಕಾರಿಗಳು ವಿತರಿಸದೆ ಇಟ್ಟುಕೊಂಡಿದ್ದ ಅಕ್ಕಿ, ಗೋದಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದರು. ಪ್ರಕರಣ ದೊಡ್ಡದು ಮಾಡದಂತೆ ಶಾಸಕರ ಮೇಲೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಗೋಲ್ ಮಾಲ್ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು ಕೆ.ಎಫ್.ಸಿ.ಎಸ್.ಸಿ ಗೋಡೌನ್ ಓರ್ವ ಸಿಬ್ಬಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

MLA Reveals golmal in minister umesh katti department

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

MLA Reveals golmal in minister umesh katti department

ಇದನ್ನೂ ಓದಿ: ‘ಕಪ್ಪಗಿದ್ದೀಯ, ಆಂಟಿ ಥರ ಕಾಣ್ತೀಯ, ಡುಮ್ಮಿ ಆಗಿದೀಯ ಅಂದ್ರು’; ಬೇಸರದ ಸಂಗತಿ ಹೊರಹಾಕಿದ ಪ್ರಿಯಾಮಣಿ