ಸಚಿವ ಡಾ.ಕೆ.ಸುಧಾಕರ್ ಕಾರ್ಯಕ್ರಮದಲ್ಲಿ ಮಹಿಳೆಯ ಮೇಲೆ ಬಂದ ದೇವರು! ದೇವಸ್ಥಾನ ಕಾಮಗಾರಿ ನಿರ್ವಹಿಸುವಂತೆ ಆಗ್ರಹ
ಗ್ರಾಮದ ರಾಧಮ್ಮ ಅನ್ನೊ ಮಹಿಳೆ ತನ್ನ ಮೇಲೆ ಗ್ರಾಮದ ಮಹೇಶ್ವರಮ್ಮ ದೇವಿ ಬಂದಿದ್ದಾಳೆ. ದೇವಸ್ಥಾನ ಕಾಮಗಾರಿ ನಿರ್ವಹಿಸಲು ಸಚಿವರಿಗೆ ತಿಳಿಸಬೇಕು ತಾನು ದೇವಿ ಮಹೇಶ್ವರಮ್ಮ ಅವತಾರ ತನ್ನನ್ನು ಯಾರು ತಡೆಯಬೇಡಿ ಬಿಟ್ಟು ಬಿಡಿ ಅಂತ ಕೂಗಾಡಿದಳು.
ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವರಾದ ಡಾ.ಕೆ.ಸುಧಾಕರ್ ರವರು ಇಂದು ತಮ್ಮ ಸ್ವಕ್ಷೇತ್ರ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕು ಸ್ಥಾಪನೆಯಲ್ಲಿ ಭಾಗವಹಿಸಿದರು. ಶಂಕು ಸ್ಥಾಪನೆ ಮುಗಿಸಿ ಡಿ.ಸಿ.ಸಿ ಬ್ಯಾಂಕ್ ನಿಂದ ಸ್ತ್ರಿ ಶಕ್ತಿ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚಿಕ್ಕಬಳ್ಳಾಪುರ ತಾಲೂಕಿನ ಮುಷ್ಟೂರು ಗ್ರಾಮದ ವೇದಿಕೆಗೆ ಆಗಮಿಸಿದ್ರು.
ಸಚಿವರು ವೇದಿಕೆಗೆ ಬರ್ತಿದ್ದಂತೆ ವಿಶೇಷ ಮಹಿಳೆಯೊಬ್ಬರು ಸಚಿವ ಕಡೆಯತ್ತ ನುಗ್ಗಲು ಯತ್ನಿಸಿದರು. ಪೊಲೀಸರು ಮಹಿಳೆಯನ್ನು ಹಿಡಿದುಕೊಳ್ಳಲು ಹಾಗೂ ವಾಪಸ್ ಕಳುಹಿಸಲು ಮುಂದಾದ್ರು. ಆದ್ರೆ ಮುಷ್ಟೂರು ಗ್ರಾಮದ ರಾಧಮ್ಮ ಅನ್ನೊ ಮಹಿಳೆ ತನ್ನ ಮೇಲೆ ಗ್ರಾಮದ ಮಹೇಶ್ವರಮ್ಮ ದೇವಿ ಬಂದಿದ್ದಾಳೆ. ದೇವಸ್ಥಾನ ಕಾಮಗಾರಿ ನಿರ್ವಹಿಸಲು ಸಚಿವರಿಗೆ ತಿಳಿಸಬೇಕು ತಾನು ದೇವಿ ಮಹೇಶ್ವರಮ್ಮ ಅವತಾರ ತನ್ನನ್ನು ಯಾರು ತಡೆಯಬೇಡಿ ಬಿಟ್ಟು ಬಿಡಿ ಅಂತ ಕೂಗಾಡಿದಳು. ಪೊಲೀಸರು ರಾಧಮ್ಮಳನ್ನು ಕಾರ್ಯಕ್ರಮದಿಂದ ಕರೆತರಲು ಮುಂದಾದ್ರು. ಯಾವುದಕ್ಕೂ ಕೇರ್ ಮಾಡದ ಮಹಿಳೆ ವೇದಿಕೆ ಕಾರ್ಯಕ್ರಮದ ದಾರಿ ಮಧ್ಯೆ ಕುಳಿತು ಮೈ ಮೇಲೆ ದೇವರು ಬಂತೆಂಬಂತೆ ವರ್ತಿಸಿದಳು. ನಾಲಿಗೆ ಹೊರಗೆ ಚಾಚಿ ಕಣ್ಣು ಕೆಂಪಗೆ ಮಾಡಿಕೊಂಡು ಜೋರಾಗಿ ಕೂಗಾತ್ತಾ ಹೇಳಿದ ಕೆಲಸ ಮಾಡಿಕೊಡಿ ಎಂದು ಕೂಗಾಡಿದಳು. ಇದನ್ನೂ ಓದಿ: Galaxy F13: ಆಫರ್ ಅಂದ್ರೆ ಇದು: 6000mAh ಬ್ಯಾಟರಿಯ ಗ್ಯಾಲಕ್ಸಿ F13 ಈಗ ಕೇವಲ 9499 ರೂ. ಗೆ ಲಭ್ಯ
ಮಹಿಳೆಯ ವರ್ತನೆಯಿಂದ ಕಾರ್ಯಕ್ರಮಕ್ಕೆ ಅಡಚಣೆ ಆಗುವುದನ್ನು ಗಮನಿಸಿದ ಪೊಲೀಸರು ಮಹಿಳೆಯನ್ನು ಬಲವಂತವಾಗಿ ಆಚೆ ಕರೆದುಕೊಂಡು ಹೋಗಿ ಸಮಾಧಾನ ಮಾಡಿದರು. ಇನ್ನೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು ಮಹಿಳೆಯ ವರ್ತನೆಯ ಬಗ್ಗೆಯಾಗಲಿ ಏನು ವಿಚಾರ ಎನ್ನುವುದರ ಬಗ್ಗೆಯಾಗಲಿ ತಲೆ ಕೇಡಿಸಿಕೊಳ್ಳಲಿಲ್ಲ. ತಮ್ಮ ಪಾಡಿಗೆ ತಾವು ಭಾಷಣ ಮಾಡಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ 3 ಕೋಟಿಗೂ ಹೆಚ್ಚು ಸಾಲ ವಿತರಿಸಿ ತಮ್ಮ ಪಾಡಿಗೆ ತಾವು ಕಾರು ಹತ್ತಿ ಹೊರಟು ಹೋದರು.
ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ
Published On - 1:38 pm, Mon, 10 October 22