ಚಿಕ್ಕಮಗಳೂರು: ಸಾಲ ಮರುಪಾವತಿ ಮಾಡದ ಹಿನ್ನೆಲೆ ಹೋಂಸ್ಟೇ ಸೀಜ್ ಮಾಡಿದ ಬ್ಯಾಂಕ್ ಸಿಬ್ಬಂದಿ
ಚಿಕ್ಕಮಗಳೂರು ನಗರದ ಪಟ್ಟಣ ಸಹಕಾರ ಬ್ಯಾಂಕಿನಿಂದ ಮುಟ್ಟುಗೋಲು ಹಾಕಲಾಗಿದೆ. ಕಾಂಗ್ರೆಸ್ ಮುಖಂಡ ಶ್ರೀಧರ್ ಉರಾಳ್ ಎಂಬುವರಿಗೆ ಸೇರಿದ ಜಾಗ ಇದಾಗಿದ್ದು, 20 ಲಕ್ಷ ರೂಪಾಯಿ ಅಸಲು -ಬಡ್ಡಿ ಮರು ಪಾವತಿ ಮಾಡದ ಹಿನ್ನೆಲೆ ಹೋಂಸ್ಟೇಯನ್ನು ಇಂದು (ಮಾರ್ಚ್ 30) ಜಪ್ತಿ ಮಾಡಲಾಗಿದೆ.
ಚಿಕ್ಕಮಗಳೂರು: ಸಾಲ ಮರುಪಾವತಿ ಮಾಡದ ಹಿನ್ನೆಲೆ ಹೋಂಸ್ಟೇಯನ್ನು(Homestay) ಬ್ಯಾಂಕ್ ಸಿಬ್ಬಂದಿ ಜಪ್ತಿ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ ಗ್ರಾಮದಲ್ಲಿ ನಡೆದಿದೆ. ಲೇಕ್ ವ್ಯೂ ಹೋಂಸ್ಟೇಯನ್ನು ಬ್ಯಾಂಕ್ (Bank) ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಬ್ಯಾಂಕಿನ ಸಿಬ್ಬಂದಿ ಸದ್ಯ ಹೋಂಸ್ಟೇಯನ್ನು ಮುಟ್ಟುಗೋಲು ಹಾಕಿಕೊಂಡು ಬೀಗ (Lock) ಹಾಕಿದ್ದಾರೆ.
ಚಿಕ್ಕಮಗಳೂರು ನಗರದ ಪಟ್ಟಣ ಸಹಕಾರ ಬ್ಯಾಂಕಿನಿಂದ ಮುಟ್ಟುಗೋಲು ಹಾಕಲಾಗಿದೆ. ಕಾಂಗ್ರೆಸ್ ಮುಖಂಡ ಶ್ರೀಧರ್ ಉರಾಳ್ ಎಂಬುವರಿಗೆ ಸೇರಿದ ಜಾಗ ಇದಾಗಿದ್ದು, 20 ಲಕ್ಷ ರೂಪಾಯಿ ಅಸಲು -ಬಡ್ಡಿ ಮರು ಪಾವತಿ ಮಾಡದ ಹಿನ್ನೆಲೆ ಹೋಂಸ್ಟೇಯನ್ನು ಇಂದು (ಮಾರ್ಚ್ 30) ಜಪ್ತಿ ಮಾಡಲಾಗಿದೆ. ಸರ್ಫೆಸಿ ಕಾಯ್ದೆ ಪ್ರಕಾರ ಆಸ್ತಿಯನ್ನು ಬ್ಯಾಂಕಿನ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಮಂಗಳೂರಲ್ಲಿ ರೌಡಿ, ಬೆಂಗಳೂರಲ್ಲಿ ಡ್ರಗ್ ಪೆಡ್ಲರ್: ಡ್ರಗ್ ಪೆಡ್ಲರ್ನ ಹೆಬ್ಬಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹಸನ್ ಸಾಧಿಕ್, ಕಲ್ಕಾನ್ ಬಂಧಿತ ಆರೋಪಿಗಳು. ಹಸನ್ ವಿರುದ್ಧ ಮಂಗಳೂರಿನ ವಿವಿಧ ಠಾಣೆಯಲ್ಲಿ 17 ಪ್ರಕರಣಗಳಿವೆ. ಸುಲಿಗೆ, ದರೋಡೆ, ಕೊಲೆಯತ್ನ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದ. ರೌಡಿಸಂ ಬಿಟ್ಟು ಸುಲಭವಾಗಿ ಹಣ ಮಾಡೋಕೆ ಡ್ರಗ್ ಪೆಡ್ಲರ್ ಹಾದಿ ಹಿಡಿದಿದ್ದ. ಬಂಧಿತರಿಂದ ಪೊಲೀಸರು 23ಗ್ರಾಂ ಎಂಡಿಎಂಎ ಡ್ರಗ್ಸ್ ಹಾಗೂ ಬೈಕ್ನ ವಶಕ್ಕೆ ಪಡೆದಿದ್ದಾರೆ.
ವಿಜಯನಗರ: ವ್ಯಕ್ತಿ ನೇಣೀಗೆ ಶರಣು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದರಂಗಾರೆಡ್ಡಿ ಮೃತ ವ್ಯಕ್ತಿ. ರಂಗಾರೆಡ್ಡಿ ಕಳೆದ ವರ್ಷ ಕೊವಿಡ್ನಿಂದ ಪತ್ನಿ ಕಳೆದುಕೊಂಡಿದ್ದರು. ಹೆಂಡತಿಯ ಸಾವಿನಿಂದ ಮಾನಸಿಕವಾಗಿ ಖಿನ್ನತೆಗೊಳಾಗಾಗಿದ್ದರು. ಹೊಸಪೇಟೆಯ ಬಸ್ ನಿಲ್ದಾಣದ ಬಳಿಯ ಲಾಡ್ಜ್ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಚಳ್ಳಕೆರೆಯಿಂದ ಗುಜರಾತಿಗೆ ಆಕ್ರಮವಾಗಿ ಸಾಗಿಸುತ್ತಿದ್ದ 25 ಸಾವಿರ ಕೆಜಿ ಪಡಿತರ ಅಕ್ಕಿ ಜಪ್ತಿ: ತಮಿಳುನಾಡಿನ ಇಬ್ಬರ ಬಂಧನ
ಬ್ಯಾಂಕ್ ಸಾಲದ ಮೊರಾಟೋರಿಯಂ ಅಂತ್ಯ, ಸೆಪ್ಟೆಂಬರ್ನಿಂದ EMI ಮರುಪಾವತಿ ಅನಿವಾರ್ಯ?
Published On - 2:48 pm, Wed, 30 March 22