AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡೀ ಶಾಲೆಗೆ ಒಬ್ಬ ಶಿಕ್ಷಕ-ಒಂದೇ ಕೊಠಡಿ-ಐದು ತರಗತಿ- 9 ಮಕ್ಕಳು! ಯಾರಿಗೆ ಹೇಗೆ ಯಾವಾಗ ಪಾಠ ಮಾಡಬಹುದು ಊಹೆ ನಿಮಗೇ ಬಿಟ್ಟಿದ್ದು!

Kumbagola govt school: ಈ ಶಾಲೆಯಲ್ಲಿ ಸಮಸ್ಯೆ ಇಲ್ಲ. ಶಾಲೆಯೇ ಸಮಸ್ಯೆಯಲ್ಲಿ ಇದೆ. ಈ ಶಾಲೆಯ ಪರಿಸ್ಥಿತಿ ಹೀಗಿರುವಾಗ ಇಲ್ಲಿನ ಶಿಕ್ಷಕರದ್ದು ಮತ್ತೊಂದು ಸಮಸ್ಯೆ. ಶಾಲೆ ಆರಂಭವಾಗಿ ವಾರವಾದರೂ ಮಕ್ಕಳು ಮನೆಯಲ್ಲಿ ಆಟವಾಡಿಕೊಂಡು ಇದ್ದಾರೆಯೇ ವಿನಃ ಶಾಲೆಗೆ ಬರುತ್ತಿಲ್ಲ. 

ಇಡೀ ಶಾಲೆಗೆ ಒಬ್ಬ ಶಿಕ್ಷಕ-ಒಂದೇ ಕೊಠಡಿ-ಐದು ತರಗತಿ- 9 ಮಕ್ಕಳು! ಯಾರಿಗೆ ಹೇಗೆ ಯಾವಾಗ ಪಾಠ ಮಾಡಬಹುದು ಊಹೆ ನಿಮಗೇ ಬಿಟ್ಟಿದ್ದು!
ಒಂದೇ ಶಾಲೆ- ಒಬ್ಬ ಶಿಕ್ಷಕ-ಒಂದೇ ಕೊಠಡಿ-ಐದು ತರಗತಿ- 9 ಮಕ್ಕಳು!
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: ಸಾಧು ಶ್ರೀನಾಥ್​|

Updated on: Jun 09, 2023 | 11:32 AM

Share

ಅವರೊಬ್ಬರೇ ಅಲ್ಲಿ ಶಿಕ್ಷಕ. ಒಂದೇ ಕೊಠಡಿ. ಐದು ತರಗತಿಗಳು. ಒಂಬತ್ತೇ ಮಕ್ಕಳು. 1ನೇ ಕ್ಲಾಸಿಗೆ ಎರಡು, 2ನೇ ಕ್ಲಾಸಿಗೆ ಎರಡು, 3ಕ್ಕೆ ಅದೂ ಇಲ್ಲ. 4ನೇ ಕ್ಲಾಸಿಗೆ ಇಬ್ರು, 5ಕ್ಕೆ ಮೂವರು. ಎಲ್ಲರಿಗೂ ಒಬ್ಬರೇ ಪಾಠ ಮಾಡ್ಬೇಕು.‌ ಕನ್ನಡ, ಹಿಂದಿ, ಇಂಗ್ಲೀಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಎಲ್ಲವಕ್ಕೂ ಅವರೊಬ್ಬರೇ ಮೇಷ್ಟ್ರು! ಶಾಲೆ ಆರಂಭವಾಗಿ 8 ದಿನವಾದ್ರು ಒಂದೇ ಒಂದು ಮಗುವೂ ಶಾಲೆಗೆ ಬಂದಿಲ್ಲ. ಪೋಷಕರು ಆ ಮೇಷ್ಟು ಹೋಗೋತನ್ಕ ಮಕ್ಕಳನ್ನ ಶಾಲೆಗೆ ಕಳಿಸಲ್ಲ ಅಂತಿದ್ದಾರೆ. ಇದು ಸಮಸ್ಯೆಯ ಆಗರವಾಗಿರೋ ಕಾಫಿನಾಡ ಸರ್ಕಾರಿ ಸ್ಕೂಲ್ ಕಥೆ. ಇದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಗೋಳ ಸರ್ಕಾರಿ ಶಾಲೆಯ ಸ್ಥಿತಿ (Kumbagola govt school in Bidare). ಈ ಶಾಲೆಯಲ್ಲಿ 1 ಟು 7 – 9 ಜನ ಮಕ್ಕಳಿದ್ದಾರೆ. ಎಲ್ಲರಿಗೂ ಒಬ್ಬರೇ ಪಾಠ ಮಾಡ್ಬೇಕು.‌ ಕನ್ನಡ, ಹಿಂದಿ, ಇಂಗ್ಲೀಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಎಲ್ಲಾ ವಿಷಯಕ್ಕೂ ಅವರೊಬ್ಬರೇ ತಜ್ಞ ಶಿಕ್ಷಕ. ಇನ್ನು ಈ ಶಾಲೆಯಲ್ಲಿ ಇರುವುದು ಒಂದೇ ಒಂದು ಕೊಠಡಿ. ಒಂದರಿಂದ ಐದನೇ ತರಗತಿಯ 9 ಜನ ಮಕ್ಕಳು ಇದೊಂದೇ ಕೊಠಡಿಯಲ್ಲಿ ಪಾಠ ಕೇಳಬೇಕು.‌ ಇರೋದು ಒಬ್ಬರೇ ಶಿಕ್ಷಕ. ಆತ ಯಾರಿಗೆ ಯಾವ ಸಮಯದಲ್ಲಿ ಹೇಗೆ ಪಾಠ ಮಾಡಬಹುದು ನೀವೇ ಊಹಿಸಿ.

ಯಾವ ತರಗತಿಯ ಯಾವ ಪಾಠವನ್ನು ಯಾವ ಮಕ್ಕಳು ಕೇಳುತ್ತಾರೆ ಎಂದು ಪಾಠ ಮಾಡುವ ಶಿಕ್ಷಕರಿಗೂ ಗೊತ್ತಿಲ್ಲ. ಕೇಳುವ ಮಕ್ಕಳಿಗೆ ಮೊದಲೇ ಗೊತ್ತಿಲ್ಲ. ಶಾಲೆಗೆ ಸೂಕ್ತ ಕೊಠಡಿ ಹಾಗೂ ಶಿಕ್ಷಕರಿಗಾಗಿ ಸ್ಥಳೀಯರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ನೋಡ್ತೀವಿ, ಮಾಡ್ತೀವಿ, ಕಳಿಸ್ತೀವಿ ಅನ್ನೋ ಮೇಲಾಧಿಕಾರಿಗಳಿಂದ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕಾರಣದಿಂದಲೂ 30 ಮಕ್ಕಳಿದ್ದ ಕಾಡಂಚಿನ ಕುಗ್ರಾಮದ ಶಾಲೆಯಲ್ಲಿ ಇಂದು ಇರುವುದು ಕೇವಲ ಒಂಬತ್ತು ಮಕ್ಕಳು ಮಾತ್ರ. ಸರ್ಕಾರಕ್ಕೆ ಮನವಿ ಮಾಡಿ… ಮಾಡಿ… ಸಾಕಾಗಿದೆ ಅಂತಾರೆ ಸ್ಥಳೀಯರು.

ಹೌದು.. ಈ ಶಾಲೆಯಲ್ಲಿ ಸಮಸ್ಯೆ ಇಲ್ಲ. ಶಾಲೆಯೇ ಸಮಸ್ಯೆಯಲ್ಲಿ ಇದೆ. ಈ ಶಾಲೆಯ ಪರಿಸ್ಥಿತಿ ಹೀಗಿರುವಾಗ ಇಲ್ಲಿನ ಶಿಕ್ಷಕರದ್ದು ಮತ್ತೊಂದು ಸಮಸ್ಯೆ. ಶಾಲೆ ಆರಂಭವಾಗಿ ವಾರವಾದರೂ ಮಕ್ಕಳು ಮನೆಯಲ್ಲಿ ಆಟವಾಡಿಕೊಂಡು ಇದ್ದಾರೆಯೇ ವಿನಃ ಶಾಲೆಗೆ ಬರುತ್ತಿಲ್ಲ. ಕಾರಣ ಇಲ್ಲಿನ ಮೇಷ್ಟ್ರು. ಇಡೀ ಶಾಲೆಗೆ ಇರುವುದು ಒಬ್ಬರೇ ಶಿಕ್ಷಕರು. ಅವರು ಬೆಳಗ್ಗೆ 11.30ಕ್ಕೆ ಬಂದರೆ 2.30ಕ್ಕೆ ಮನೆ ಸೇರುತ್ತಾರೆ.‌ ಸಂಜೆ ಮಕ್ಕಳೇ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಬೇಕು.

Also Read: ಎಷ್ಟೋ ಕಡೆ ಒಬ್ಬರೇ ಶಿಕ್ಷಕ-ಐದಾರು ತರ‘ಗತಿ’ಯಿದೆ, ಆದರೆ ಇಲ್ಲಿ ಒಂದೇ ಕುರ್ಚಿಗೆ ಇಬ್ಬರು ಡಿಡಿಪಿಐ ಕಿತ್ತಾಡುತ್ತಿದ್ದಾರೆ!

ಇದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯೂ ಇಳಿಮುಖವಾಗಿ ಇಂದು ಒಂಬತ್ತಕ್ಕೆ ಬಂದು ನಿಂತಿದೆ. ಹಾಗಾಗಿ, ಇಲ್ಲಿನ ಪೋಷಕರು ಹೀಗಿರುವ ಶಿಕ್ಷಕ ಚಂದ್ರೇಗೌಡ ಇಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡು ಬೇರೆ ಶಿಕ್ಷಕರು ಬರುವವರೆಗೂ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸುತ್ತಿಲ್ಲ. ಇಲ್ಲಿನ ಶಿಕ್ಷಕರನ್ನ ಬೇರೆ ಕಡೆ ವರ್ಗಾವಣೆ ಮಾಡಿದರೆ ಶಾಲೆಗೆ ಮಕ್ಕಳ ಸಂಖ್ಯೆಯು ಹೆಚ್ಚುತ್ತದೆ, ಶಾಲೆಯೂ ಉಳಿಯುತ್ತೆ ಅಂತಿದ್ದಾರೆ ಸ್ಥಳೀಯರು.

ಒಟ್ಟಾರೆ, ಕೂಲಿ ಕಾರ್ಮಿಕರ ಮಕ್ಕಳೇ ಓದುವ ಕುಗ್ರಾಮದ ಸರ್ಕಾರಿ ಶಾಲೆಯೊಂದು ಸರ್ಕಾರಿ ಶಾಲೆಯೊಂದು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಬೀಗ ಬೀಳುವ ಸ್ಥಿತಿ ತಲುಪಿದೆ. ಬಡ ಮಕ್ಕಳು ಮಾತ್ರ ಶಿಕ್ಷಣದಿಂದ ವಂಚಿತರಾಗೋದ್ರಲ್ಲಿ ನೋ ಡೌಟ್. ಸರ್ಕಾರ ರಾಜ್ಯದ ಉದ್ದಗಲಕ್ಕೂ ಫ್ರೀ… ಫ್ರೀ…ಫ್ರೀ… ಅಂತ ಉಚಿತಗಳ ಮಹಾಪೂರವನ್ನೇ ಹರಿಸಿದೆ. ಆದರೆ, ಸರ್ಕಾರದ ಆ ಉಚಿತ ಕೊಡುಗೆಗಳಿಗೆ ಬೆಲೆ ಬರಬೇಕು ಅಂದರೆ ಸರ್ಕಾರಿ ಶಾಲೆಗಳಿಗೆ ಜೀವ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.

ಚಿಕ್ಕಮಗಳೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ashwith Mavinaguni
Ashwith Mavinaguni

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ