ವೃತ್ತಿಯಲ್ಲಿ ಪ್ರಿನ್ಸಿಪಾಲ್ ಪ್ರವೃತ್ತಿಯಲ್ಲಿ ಬೀದಿನಾಯಿಗಳ ಆಶ್ರಯದಾತೆ; ಗಾಯಗೊಂಡ ಬೀದಿನಾಯಿಗಳನ್ನು ಸಾಕುತ್ತಿರುವ ಪ್ರಿನ್ಸಿಪಾಲ್

ಅಪಘಾತಕ್ಕೀಡಾಗುವ ಬೀದಿನಾಯಿಗಳಿಗೆ ಚಿಕಿತ್ಸೆ ಕೊಡಿಸಿ ಅವುಗಳನ್ನ ಬದುಕಿಸಿ, ಅವುಗಳಿಗಾಗಿ ಶೆಡ್​ ನಿರ್ಮಾಣ ಮಾಡಿ ಸಾಕುತ್ತಿರುವ ಪ್ರಿನ್ಸಿಪಾಲ್​​

ವೃತ್ತಿಯಲ್ಲಿ ಪ್ರಿನ್ಸಿಪಾಲ್ ಪ್ರವೃತ್ತಿಯಲ್ಲಿ ಬೀದಿನಾಯಿಗಳ ಆಶ್ರಯದಾತೆ; ಗಾಯಗೊಂಡ ಬೀದಿನಾಯಿಗಳನ್ನು ಸಾಕುತ್ತಿರುವ ಪ್ರಿನ್ಸಿಪಾಲ್
ಬೀದಿ ನಾಯಿಗಳನ್ನು ಸಾಕುವ ಪ್ರಿನ್ಸಿಪಾಲ್​
Follow us
TV9 Web
| Updated By: Digi Tech Desk

Updated on:Jun 11, 2022 | 9:15 PM

ನಾವು ಸಾಮಾನ್ಯವಾಗಿ ಬೀದಿ ನಾಯಿಗಳಿಗೆ (Dog) ಅನ್ನ ಹಾಕುವವರನ್ನ ನೋಡಿದ್ದೇವೆ. ಅಥವಾ ಹುಡ್ಕ್ಕೊಂಡ್ ಹೋಗಿ ಬೀದಿ ನಾಯಿಗಳಿಗೆ ಬಿಸ್ಕಟ್ ಹಾಕುವವರನ್ನೂ ನೋಡಿದ್ದೇವೆ. ಅಪಘಾತವಾದಾಗ ಅಯ್ಯೋ ಅಂತ ಮರುಗುವವರನ್ನ ನೋಡಿದ್ದೇವೆ. ಆದರೆ ಇಲ್ಲಿ ಒಬ್ಬರು ಅಪಘಾತವಾದ ನಾಯಿಗಳನ್ನೇ ತಂದು ಅಪರೇಷನ್ ಮಾಡಿಸಿ, ಚಿಕಿತ್ಸೆ ಕೊಡಿಸಿ ಅವುಗಳನ್ನ ಪ್ರೀತಿಯಿಂದ ಸಾಕುತ್ತಿದ್ದಾರೆ. ಇಂತವರು ನಮಗೆ ಕಾಣುವುದು ಎಲ್ಲೋ ಒಬ್ಬರು. ಆ ವಿರಳ ವ್ಯಕ್ತಿ ಇಲ್ಲಿದ್ದಾರೆ. ಅವರೇ ಸಹ್ಯಾದ್ರಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಎಂಬ ಕಾಲೇಜು ನಡೆಸುತ್ತಾ ಅದೇ ಕಾಲೇಜಿನ ಪ್ರಿನ್ಸಿಪಾಲ್ ಆಗಿರೋ ನಳಿನಾ ಇವರು ಚಿಕ್ಕಮಗಳೂರಿನವರು (Chikkamagaluru). ಯಾರ್ಯಾರಿಗೋ ಏನೇನೋ ಆಸೆ ಇರುತ್ತೆ. ಆದರೆ ಇವರಿಗೆ ಅಪಘಾತಕ್ಕೀಡಾಗುವ ಬೀದಿನಾಯಿಗಳಿಗೆ ಚಿಕಿತ್ಸೆ ಕೊಡಿಸಿ ಅವುಗಳನ್ನ ಉಳಿಸಿ ನೆಮ್ಮದಿಯಿಂದ ಬದುಕಲು ದಾರಿ ಮಾಡಿಕೊಡಬೇಕು ಅನ್ನೋದು ಇವರ ಆಸೆ-ಗುರಿ ಇದೆ. ಅದಕ್ಕೆ ಪೂರಕವಾಗುವಂತೆ ಶೆಡ್ಗಗಳನ್ನ ನಿರ್ಮಿಸಿ 125ಕ್ಕೂ ಹೆಚ್ಚು ಅಪಘಾತಕ್ಕೀಡಾದ ಬೀದಿನಾಯಿಗಳನ್ನೇ ಉಳಿಸಿ- ಪೋಷಿಸುತ್ತ ಬಂದಿದ್ದಾರೆ. ಸದ್ಯ 90 ದೊಡ್ಡ ನಾಯಿಗಳಿದ್ದರೆ, 35 ಮರಿಗಳಿವೆ. ಅಪಘಾತವಾಗಿ ಅಮ್ಮ ಸತ್ತ ಮರಿಗಳು ಇವೆ. ಚರ್ಮರೋಗದಿಂದ ಬಳಲುತ್ತಿರೋ ಬೀದಿನಾಯಿಗಳನ್ನ ತಂದು ಸಾಕುತ್ತಿದ್ದಾರೆ.

ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ ಬಳಿಯ ಬೀಕನಹಳ್ಳಿಯಲ್ಲಿ ನಾಯಿಗಳಿಗಾಗಿ ಶೆಡ್​ಗಳನ್ನು ನಿರ್ಮಿಸಿ ಸಾಕುತ್ತಿದ್ದಾರೆ. ಆ ಬೀದಿನಾಯಿಗಳು ಎಲ್ಲೋ ಹುಟ್ಟಿ. ಎಲ್ಲೋ ಬೆಳೆದು. ಮತ್ಯಾರದ್ದೋ ಗಾಡಿಗೆ ಸಿಕ್ಕಿ ನರಳಾಡ್ತಿರೋ ಶ್ವಾನಗಳು. ಕೆಲವು ಸಾವಿನ ಮನೆ ಕದ ಬಡಿದು ಬಂದಿದ್ದರೆ, ಇನ್ನೂ ಕೆಲವು ನರಳಾಡ್ತಾ ನರಳಾಡ್ತಾ ಬಂದು ಈ ಗೂಡು ಸೇರಿವೆ. ಕೆಲವು ಪ್ರಾಣಿಪ್ರಿಯರು ಅಪಘಾತವಾದ ನಾಯಿಗಳನ್ನ ಅವರೇ ತಂದು ಬಿಟ್ಟು ಹೋಗಿದ್ದಾರೆ. ತುಂಬಾ ಕಡೆ ಅಪಘಾತವಾದ ವಿಚಾರ ಗೊತ್ತಾದ ಕೂಡಲೇ ಇವರೇ ಹೋಗಿ ತಂದು ಸಾಕುತ್ತಿರುವ ನಿದರ್ಶನಗಳು ಇವೆ. ಕೆಲವ ನಾಯಿಗಳಗೆ ಆಪರೇಷನ್ ಕೂಡ ಮಾಡಿಸಿದ್ದಾರೆ.

ಇದನ್ನು ಓದಿ: “ಓಹ್! ಸೋ ಸ್ವೀಟ್” ಎಂದ ಬಾಲಕನ ವಿಡಿಯೋ ವೈರಲ್

ಗಾಯಗೊಂಡ ಬೀದಿನಾಯಿಗಳಿಗೆ ಶೆಡ್​ನಲ್ಲೇ ಸಿಗುತ್ತೆ ಟ್ರೀಟ್​ಮೆಂಟ್..!

ಇವ್ರ ಈ ಸ್ಟ್ರೀಟ್ ಡಾಗ್ ಶೆಲ್ಟರ್‍ನಲ್ಲಿ 125ಕ್ಕೂ ಹೆಚ್ಚು ನಾಯಿಗಳಿದ್ದು ಶಿವಮೊಗ್ಗ, ಹಾಸನ, ಬೆಂಗಳೂರು, ಮೈಸೂರು, ತುಮಕೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಅರ್ಧ ಕರ್ನಾಟಕದ ಎಲ್ಲಾ ಭಾಗಗಳಿಂದಲೂ ಬಂದಿವೆ. ನರಳಾಡುತ್ತಿರೋ, ಬದಕಲು ಹವಣಿಸುತ್ತಿರೋ ಬೀದಿನಾಯಿಗಳಿಗೆ ನುರಿತ ವೈದ್ಯರಿಂದ ಚಿಕಿತ್ಸೆಯನ್ನ ಕೊಡಿಸಿ, ಆ ಬಳಿಕ ಶೆಡ್​ನಲ್ಲೇ ಪ್ರತಿನಿತ್ಯ ಗಾಯಗೊಂಡ ಬೀದಿನಾಯಿಗಳನ್ನ ಆರೈಕೆ ಮಾಡಲಾಗುತ್ತೆ. ಶೆಡ್‍ನಲ್ಲೇ ಎಲ್ಲಾ ಔಷಧಿಗಳಿವೆ. ಇವ್ರೇ ಡ್ರೆಸ್ಸಿಂಗ್ ಮಾಡುತ್ತಾರೆ, ಮುದ್ದಾಡುತ್ತಾರೆ. ಹೀಗಾಗಿ ಬದುಕೋದೇ ಇಲ್ಲ ಅಂತಾ ಆಸೆಯನ್ನೇ ಬಿಟ್ಟಿದ್ದ ಅದೆಷ್ಟೋ ಶ್ವಾನಗಳು ಇವತ್ತು ತುಂಬಾ ಆರೋಗ್ಯವಾಗಿ ಬದುಕ್ತಿರೋ ನಿದರ್ಶನಗಳು ಈ ಆರೈಕೆ ಕೇಂದ್ರದಲ್ಲಿದೆ. ಹಾಗಂತ ಕೇವಲ ಆರೈಕೆ ಮಾಡಿ ಮತ್ತೆ ಬೀದಿಗೆ ಆ ನಾಯಿಗಳನ್ನ ಬಿಡೋದಿಲ್ಲ, ಅವುಗಳನ್ನ ಬದುಕಿನ ಕೊನೆಯವರೆಗೂ ಪ್ರೀತಿಸುತ್ತಾರೆ. ಸಲಹುತ್ತಾರೆ.

ಚಿಕನ್ ರೈಸ್, ಲೆಗ್ ಪೀಸ್.. ಚಿಕನ್ ಕೂಡ ಸಿಗುತ್ತೆ ಶ್ವಾನಗಳಿಗೆ.!

ಯಾವುದೋ ಕಾರಣದಿಂದ ಸೊಂಟ ಮುರ್ಕೊಂಡೋ, ಕಾಲು ಮುರ್ಕೊಂಡೋ ಈ ಸುರಕ್ಷಿತ ಗೂಡನ್ನ ಸೇರುವ ಬೀದಿನಾಯಿಗಳಿಗೆ ಕೇವಲ ಆರೈಕೆ ಮಾತ್ರ ಸಿಗಲ್ಲ. ಬದಲಾಗಿ ಒಳ್ಳೆ ಊಟ ಕೂಡ ಪ್ರತಿನಿತ್ಯ ಸಿಗುತ್ತೆ. ದಿನಕ್ಕೆ ಮೂರು ಹೊತ್ತು ಚಿಕನ್ ರೈಸ್ ಹಾಕುತ್ತಾರೆ. ಜೊತೆಗೆ ಲೆಗ್ ಪೀಸ್, ಚಿಕನ್ ಕೂಡ ನಾಯಿಗಳಿಗೆ ಹಾಕೋದನ್ನ ಮಿಸ್ ಮಾಡೋದೇ ಇಲ್ಲ. ಮರಿಗಳಿಗೆ ಹಾಲು. ದಿನಕ್ಕೆರಡು ಬಾರಿ ಸ್ಯ್ನಾಕ್ಸ್ ರೀತಿ ಬಿಸ್ಕೆಟ್ ಹಾಕುತ್ತಾರೆ. ಆಹಾರವಿಲ್ಲದೆ ಅನಾರೋಗ್ಯದಿಂದ ಬಡಕಲು ದೇಹವಿದ್ದ ನಾಯಿಗಳು ಇಂದು ಫೈಟರ್ ನಾಯಿಗಳಂತಿವೆ. ವಯಸ್ಸಾಯ್ತು ಅಂತ ಯಾರೋ ಸಾಕಿದ ನಾಯಿ ತಂದು ಕೊಟ್ಟರೆ ಇಟ್ಟುಕೊಳ್ಳಲ್ಲ, ಕಷ್ಟಕಾಲದಲ್ಲಿ ನಾಯಿಗಳಿಗೆ ನೀವು ಪ್ರೀತಿ ತೋರಿಸಲ್ಲ ಅಂದ್ರೆ ಯಾವ ಚಂದಕ್ಕೆ ನಾಯಿ ಸಾಕ್ತೀರಿ ಅಂತಾ ಪ್ರಶ್ನೆ ಮಾಡ್ತಾರೆ ನಳಿನಾ. ಸಾಕುನಾಯಿಗಳನ್ನ ಕುಟುಂಬ ಸದಸ್ಯರಂತೆ ಸಾಕುವ ಅದೆಷ್ಟೋ ಮಂದಿ, ಬೀದಿನಾಯಿಗಳನ್ನ ಕಣ್ಣೆತ್ತಿ ನೋಡಲ್ಲ. ಅಂತಹದರಲ್ಲಿ ಗಾಯಗೊಂಡ ಬೀದಿನಾಯಿಗಳನ್ನ ತೆಗೆದುಕೊಂಡು ಹೋಗಿ ಅವುಗಳಿಗೆ ಹೊಸ ಬದುಕು ಕೊಡ್ತಿರೋ ಕಾರ್ಯ ನಿಜಕ್ಕೂ ಪ್ರಶಂಸನೀಯ. ಅದೇನೆ ಇರಲಿ, ವೃತ್ತಿಯಲ್ಲಿ ಪ್ರಿನ್ಸಿಪಾಲ್ ಆಗಿ ಕಾರ್ಯ ನಿರ್ವಹಿಸ್ತಿದ್ರೂ ಪ್ರವೃತ್ತಿಯಾಗಿ ಬೀದಿನಾಯಿಗಳನ್ನ ಸಲಹಲು ಶ್ರಮ ಪಡ್ತಿರೋ ನಳಿನಾರಿಗೊಂದು ಹ್ಯಾಟ್ಸಾಪ್ ಹೇಳಲೇಬೇಕು..

Published On - 8:38 pm, Sat, 11 June 22

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್