ಕಬ್ಬಿನಗದ್ದೆಯಲ್ಲಿ ಗಜಪಡೆ ಸಂಕ್ರಾಂತಿ; ಕಾಡಾನೆಗಳ ಮಸ್ತಿ ನೋಡಿ ಕಂಗಾಲಾದ ರೈತರು, ಆನೆಗಳ ಆಟ ಡ್ರೋನ್ನಲ್ಲಿ ಸೆರೆ

ಕಾಡಾನೆಗಳು ನಗರದ ಸಮೀಪ ಎಂಟ್ರಿ ಕೊಟ್ಟಿದ್ದಾವೆ ಅನ್ನೋ ಸುದ್ದಿ ತಿಳಿದು ಎದ್ನೋ, ಬಿದ್ನೋ ಅಂತಾ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕೂಡ ಸ್ಥಳಕ್ಕೆ ದೌಡಾಯಿಸಿದ್ರು. ಅರಣ್ಯ ಇಲಾಖೆಯವರು, ಸ್ಥಳೀಯರು ಎಷ್ಟೇ ಹುಡುಕಾಡಿದ್ರೂ ಯಾರ ಕಣ್ಣಿಗೂ ಕೂಡ ಈ ಮೂರು ಆನೆಗಳು ಸೈಟ್ ಆಗಲೇ ಇಲ್ಲ.

ಕಬ್ಬಿನಗದ್ದೆಯಲ್ಲಿ ಗಜಪಡೆ ಸಂಕ್ರಾಂತಿ; ಕಾಡಾನೆಗಳ ಮಸ್ತಿ ನೋಡಿ ಕಂಗಾಲಾದ ರೈತರು, ಆನೆಗಳ ಆಟ ಡ್ರೋನ್ನಲ್ಲಿ ಸೆರೆ
ಡ್ರೋನ್ನಲ್ಲಿ ಸೆರೆಯಾದ ಆನೆಗಳು
Follow us
TV9 Web
| Updated By: ಆಯೇಷಾ ಬಾನು

Updated on:Jan 16, 2022 | 9:44 AM

ಚಿಕ್ಕಮಗಳೂರು: ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿತ್ತು. ಈ ಸಂತಸದ ನಡುವೆ ಹಬ್ಬ ಆಚರಿಸಲು ಮೂರು ಆನೆಗಳು ಕಬ್ಬಿನಗದ್ದೆಗೆ ಎಂಟ್ರಿ ಕೊಟ್ಟಿವೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿನ್ನೆ ಸಂಕ್ರಾಂತಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಈ ನಡುವೆ ವೀಕೆಂಡ್ ಕರ್ಫ್ಯೂ ಬೇರೆ. ಹೀಗಾಗಿ ಅನೇಕರು ಸಂಕ್ರಾಂತಿಯನ್ನ ಅಷ್ಟೊಂದು ವಿಜೃಂಭಣೆಯಾಗಿ ಆಚರಿಸಿಲ್ಲ. ಹಾಗಂತ ನಾವ್ ಯಾವ್ದೆ ಕಾರಣಕ್ಕೂ ಹಬ್ಬ ಮಾಡ್ದೇ ಬಿಡಲ್ಲ ಅಂತಾ ಈ ಮೂವರು ಡಿಸೈಡ್ ಮಾಡಿಯೇ ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಂತೆ ಇರುವ ಎರೇಹಳ್ಳಿ ಗ್ರಾಮಕ್ಕೆ ಎಂಟ್ರಿಕೊಟ್ಟಿದ್ದವು. ಹೀಗೆ ಬಂದ ಕಾಡಾನೆಗಳಿಗೆ ಕಂಡಿದ್ದು ವಿಸ್ತಾರವಾದ ಕಬ್ಬಿನಗದ್ದೆ.. ಎತ್ತಾ ಕಣ್ ಹಾಯ್ಸಿದ್ರೂ ಕಬ್ಬಿನಗದ್ದೆಯ ಸಿಹಿಯೇ. ಈ ಮೂವರಿಗಂತೂ ಸ್ವರ್ಗವೇ ಎದುರಾದಂತಾಯ್ತು. ಲಾಡು ಬಾಯಿಗೆ ಬಂದು ಬಿದ್ದಂತಾಯ್ತು. ನಮ್ದೆ ಅಡ್ಡಾ ಕಣ್ರೋ ಅಂತಾ ಈ ಮೂರು ಒಂಟಿ ಸಲಗಗಳು ತೋರಿದ ಆರ್ಭಟ ಅಷ್ಟಿಷ್ಟಲ್ಲ. ಇವ್ರ ಆರ್ಭಟ ನೋಡಿ ಇಡೀ ದಿನ ಕಬ್ಬು ಬೆಳೆದ ರೈತರೇ ಬೆಕ್ಕಸ ಬೆರಗಾಗಿ ಹೋದ್ರು.

ಕಾಡಾನೆಗಳು ನಗರದ ಸಮೀಪ ಎಂಟ್ರಿ ಕೊಟ್ಟಿದ್ದಾವೆ ಅನ್ನೋ ಸುದ್ದಿ ತಿಳಿದು ಎದ್ನೋ, ಬಿದ್ನೋ ಅಂತಾ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕೂಡ ಸ್ಥಳಕ್ಕೆ ದೌಡಾಯಿಸಿದ್ರು. ಅರಣ್ಯ ಇಲಾಖೆಯವರು, ಸ್ಥಳೀಯರು ಎಷ್ಟೇ ಹುಡುಕಾಡಿದ್ರೂ ಯಾರ ಕಣ್ಣಿಗೂ ಕೂಡ ಈ ಮೂರು ಆನೆಗಳು ಸೈಟ್ ಆಗಲೇ ಇಲ್ಲ. ಈ ವೇಳೆ ಮೂವರನ್ನ ಬೆನ್ನಟ್ಟಿದ್ದೇ ಅದೊಂದು ದ್ರೋಣ್ ಕ್ಯಾಮೆರಾ. ಕಬ್ಬಿನಗದ್ದೆ ಮಧ್ಯೆ ಸೇರಿಕೊಂಡಿದ್ದ ಮೂವರನ್ನ ದ್ರೋಣ್ ಬೆನ್ನಟ್ಟಿತ್ತು. ಯಾರೇ ಹೋರಾಡಲಿ, ಊರೇ ಕೂಗಾಡಲಿ ನಮ್ದೆ ಅಡ್ಡಾ ಅಂತಾ ಮೆರೆಯುತ್ತಿದ್ದ ಮೂವರು, ದ್ರೋಣ್ ಬೆನ್ನಟ್ಟಿದ್ದ ಕೂಡಲೇ ಕಾಲ್ಕಿಳೋ ಮನಸ್ಸು ಮಾಡಿದ್ರು.

ಯಾವಾಗ ದ್ರೋಣ್ ಕ್ಯಾಮೆರಾ ನಮ್ಮನ್ನ ಸೆರೆಹಿಡಿಯುತ್ತಿದೆ ಅನ್ನೋದು ಗೊತ್ತಾಯ್ತೋ ಆಗ ಮೂರು ಒಂಟಿ ಸಲಗಗಳು ಎದ್ನೋ ಬಿದ್ನೋ ಅಂತಾ ಅತ್ತಿಂದತ್ತ ಓಡತೊಡಗಿದವು. ಕಾಡಾನೆಗಳ ಈ ಮಜ್ಬುತ್ತಾದ ದೃಶ್ಯ ಕಂಪ್ಲೀಟ್ ಆಗಿ ದ್ರೋಣ್ನಲ್ಲಿ ಸೆರೆಯಾಯ್ತು. ಒಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ಅಂತಾ ಜನಸಾಮಾನ್ಯರು ಸಂಕ್ರಾಂತಿಯನ್ನ ಸರಳವಾಗಿ ಆಚರಿಸಿದ್ರೆ, ಈ ಮೂವರಂತೂ ಕಬ್ಬಿನಗದ್ದೆಯಲ್ಲಿ ಸಂಕ್ರಾಂತಿಯನ್ನ ಸ್ಪೆಷಲ್ ಆಗಿ ಆಚರಿಸಿ ಎಲ್ಲರ ಗಮನ ಸೆಳೆದ್ರು. ಆಧುನಿಕ ಭರಾಟೆಯಲ್ಲಿ ಕಾಡುಗಳು ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ಮೂಖಪ್ರಾಣಿಗಳು ನಾಡಿಗೆ ಬರದೇ ಇನ್ನೆಲ್ಲಿ ಹೋಗಬೇಕು ಅನ್ನೋ ಪ್ರಶ್ನೆ ಕೂಡ ಉದ್ಬವಿಸದಂತೂ ಸತ್ಯ.

ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು

ಇದನ್ನೂ ಓದಿ: ‘ಅಭಿಮಾನಿ ಜತೆ ಸ್ಟಾರ್​ ನಟನ ಮದುವೆ’ ಅಂತ ಹಬ್ಬಿತ್ತು ಸುದ್ದಿ; ಆದ್ರೆ ಅಲ್ಲಿ ನಡೆದಿದ್ದೇ ಬೇರೆ

Published On - 9:42 am, Sun, 16 January 22

ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ