ಸ್ವಾಮೀಜಿ ‌ ಮತ್ತು ಶಾಸಕರಿಗೆ ಪ್ರಾಣ ಬೆದರಿಕೆ‌ ಪ್ರಕರಣ; ಆರೋಪಿ ವೈದ್ಯನ ಬಂಧನ

ಚಿತ್ರದುರ್ಗದಲ್ಲಿ ಸ್ವಾಮೀಜಿ ‌ ಮತ್ತು ಶಾಸಕರಿಗೆ ಪ್ರಾಣ ಬೆದರಿಕೆ‌ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆ ಠಾಣೆ ಪೊಲೀಸರು ಡಾ.ತಿಪ್ಪೇರುದ್ರಸ್ವಾಮಿ‌ ಎಂಬುವನನ್ನು ಬಂಧಸಿದ್ದಾರೆ.

ಸ್ವಾಮೀಜಿ ‌ ಮತ್ತು ಶಾಸಕರಿಗೆ ಪ್ರಾಣ ಬೆದರಿಕೆ‌ ಪ್ರಕರಣ; ಆರೋಪಿ ವೈದ್ಯನ ಬಂಧನ
ಆರೋಪಿ ಡಾ.ತಿಪ್ಪೇರುದ್ರಸ್ವಾಮಿ‌
Follow us
TV9 Web
| Updated By: ವಿವೇಕ ಬಿರಾದಾರ

Updated on:Jul 17, 2022 | 5:25 PM

ಚಿತ್ರದುರ್ಗ: ಚಿತ್ರದುರ್ಗದಲ್ಲಿ (Chitradurga) ಸ್ವಾಮೀಜಿ ‌(Swamiji) ಮತ್ತು ಶಾಸಕರಿಗೆ ಪ್ರಾಣ ಬೆದರಿಕೆ‌ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆ ಠಾಣೆ ಪೊಲೀಸರು ಡಾ.ತಿಪ್ಪೇರುದ್ರಸ್ವಾಮಿ‌ ಎಂಬುವನನ್ನು ಬಂಧಸಿದ್ದಾರೆ. ಆರೋಪಿ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಮುದ್ದೇನಹಳ್ಳಿಯ‌ ಸತ್ಯಸಾಯಿ ಸರಳ ಆಸ್ಪತ್ರೆಯ ವೈದ್ಯನಾಗಿದ್ದಾನೆ. ಆರೋಪಿ ವಡ್ಡೆ ಸೇನಾ ಸಂಘಟನೆಯ ರಾಷ್ಟ್ರೀಯ ಅದ್ಯಕ್ಷನು ಕೂಡ ಆಗಿದ್ದಾನೆ.

ಬೋವಿಮಠದ ಇಮ್ಮಡಿ‌ ಸಿದ್ಧರಾಮೇಶ್ವರ ಶ್ರೀ, ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ಹೊಳಲ್ಕೆರೆ ಬಿಜೆಪಿ‌ ಶಾಸಕ ಎಂ.ಚಂದ್ರಪ್ಪ ಸೇರಿ ಹಲವರಿಗೆ ಕೆಎಸ್​ಪಿ ಆಪ್​ ಮೂಲಕ ಜಿಲ್ಲಾ ಪೊಲೀಸ್ ಕಚೇರಿಗೆ ಪ್ರಾಣ ಬೆದರಿಕೆಯ ಸಂದೇಶ ರವಾನಿಸಿದ್ದನು.

ಪ್ರಾಣ ಬೆದರಿಕೆ ಸಂದೇಶ ಹಿನ್ನೆಲೆ ಜುಲೈ 15ರಂದು ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಖಿಲ ಕರ್ನಾಟಕ ವಡ್ಡರ ಸಂಘದ ಕಾರ್ಯಕರ್ತರ ಮೇಲೆ ದೌರ್ಜನ್ಯ, ಕರೆ ಮಾಡಿ‌ ಕಿರುಕುಳ ಕೊಡುತ್ತಿದ್ದನು ಎಂದು ಆರೋಪಿಸಲಾಗಿದೆ. ಆರೋಪಿ ಪೊಲೀಸ್ ತನಿಖೆ ವೇಳೆ ಸತ್ಯಾಂಶ ಬಾಯಿಬಿಟ್ಟಿದ್ದಾನೆ. ಈ ಬಗ್ಗೆ ಎಸ್ಪಿ ಕೆ.ಪರಶುರಾಮ್ ಅವರು ಮಾಹಿತಿ ನೀಡಿದ್ದಾರೆ.

Published On - 5:25 pm, Sun, 17 July 22